ಅನಿವಾಸಿ ಕನ್ನಡಿಗರ ವಿಶೇಷ

ಒಮಾನ್: ಸೋಶಿಯಲ್ ಫೋರಮ್ ನಿಂದ ರಕ್ತದಾನ ಶಿಬಿರ

100ಕ್ಕಿಂತಲೂ ಅಧಿಕ ರಕ್ತ ಸಂಗ್ರಹಣೆ; ಅನಿವಾಸಿ ಭಾರತೀಯರಿಂದ ಮಾದರಿ ಸೇವೆ

ವರದಿಗಾರ -ಮಸ್ಕತ್ (ಆ.26): ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ತೀವ್ರ ರಕ್ತದ ಆವಶ್ಯಕತೆ ಇರುವುದನ್ನು ಮನಗಂಡು ಸೋಶಿಯಲ್ ಫೋರಮ್ ಒಮಾನ್ ಮತ್ತು ದಾರ್ ಅಲ್ ಮಜ್ದ್ ಮೆಡಿಕಲ್ ಸೆಂಟರ್ ಸಹಭಾಗಿತ್ವದಲ್ಲಿ ಇತ್ತೀಚೆಗೆ ಸೊಹಾರ್ ನಗರದ ದಾರ್ ಅಲ್ ಮಜ್ದ್ ಮೆಡಿಕಲ್ ಸೆಂಟರ್ ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಸುಮಾರು 100 ರಷ್ಟು ಅನಿವಾಸಿ ಭಾರತೀಯರು ರಕ್ತದಾನದಲ್ಲಿ ಭಾಗವಹಿದ್ದಾರೆ.

ಸೊಹಾರ್ ನ ದಾರ್ ಅಲ್ ಮಜ್ದ್ ಮೆಡಿಕಲ್ ಸೆಂಟರ್ ನಲ್ಲಿ ಸಂಸ್ಥೆಯ ಸ್ಥಾಪಕ ಸಮೀವುನ್ ಬಶೀರ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೊಹಾರ್ ಹಾಸ್ಪಿಟಲ್ ಬ್ಲಡ್ ಬ್ಯಾಂಕಿನ ಉಸ್ತುವಾರಿ ಫಾತಿಮ್ ಅಲ್ ಖಾಸಿಮಿ, ಸೋಶಿಯಲ್ ಫೋರಮ್ ನ ಮುಹಿಯುದ್ದೀನ್, ಒಮಾನ್ ಪ್ರಾಥಮಿಕ ನ್ಯಾಯಾಲಯದ ನ್ಯಾಯಾಧೀಶ ಅಲಿ ಅಹ್ಮದ್ ಅಲಿ ಅಲ್ ಮಾಯಿನಿ, ಮಿಸ್ಕೋ ಕಂಪೆನಿಯ ಮಧುಸೂದನ್ ಟಾಟಾ ಮುಂತಾದವರು ಉಪಸ್ಥಿತರಿದ್ದರು. ಆಸ್ಪತ್ರೆಯ ಫೈನಾನ್ಸ್ ಮೆನೇಜರ್ ಇರ್ಶಾದ್ ಸ್ವಾಗತಿಸಿದರು. ದಂತ ವೈದ್ಯ ಡಾ. ಶರೀಫ್ ದರ್ವೀಶ್ ಧನ್ಯವಾದ ಸಲ್ಲಿಸಿದರು. ಸಂಸ್ಥೆಯ ಪಿಆರ್ ಒ ನಯೀಮ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ನಸೀಮಾ ರಹ್ಮಾನ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ರೋಗಿಗಳ ಅನುಕೂಲಕ್ಕಾಗಿ ಹೆಲ್ತ್ ಕಾರ್ಡ್ ಯೋಜನೆಯನ್ನು ಬಿಡುಗಡೆಗೊಳಿಸಲಾಯಿತು. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೋಶಿಯಲ್ ಫೋರಮ್ ವತಿಯಿಂದ ಆಯೋಜಿಸಲಾಗಿದ್ದ ಆನ್ ಲೈನ್ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಸೊಹಾರ್ ಸ್ಕೂಲ್ ವಿದ್ಯಾರ್ಥಿನಿ ಮುಝಫ್ಫರಿಗೆ ಡಾ. ಅಬ್ದುಲ್ ವಾಸೀ ನಗದು ಬಹುಮಾನ ವಿತರಿಸಿದರು.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group