ರಾಷ್ಟ್ರೀಯ ಸುದ್ದಿ

ನೋಟು ನಿಷೇಧಕ್ಕೆ ಪ್ರಮುಖ ಕಾರಣ ನೀಡಲಾಗಿದ್ದ ಖೋಟಾ ನೋಟು ಒಂದು ವರ್ಷದಿಂದ ಭಾರೀ ಹೆಚ್ಚಳ: ಆರ್‌ಬಿಐ

ವರದಿಗಾರ (ಆ.25): ನೋಟು ನಿಷೇಧಕ್ಕೆ ಪ್ರಮುಖ ಕಾರಣ ನೀಡಲಾಗಿದ್ದ ಖೋಟಾ ನೋಟು 2019-20ರಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ರಿಸರ್ವ್ ಬ್ಯಾಂಕಿನ ವಾರ್ಷಿಕ ವರದಿ ಹೇಳಿದೆ.

ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದ್ದರೂ 200 ರೂ. ಮತ್ತು 500 ರೂ. ಮುಖಬೆಲೆಯ ಖೋಟಾ ನೋಟು ಪತ್ತೆ ಪ್ರಕರಣದಲ್ಲಿ ಭಾರೀ ಹೆಚ್ಚಳ ಕಂಡಿದೆ ಎಂದು ಆರ್‌ಬಿಐ ಹೇಳಿದೆ.

2019-20ರಲ್ಲಿ 500 ರೂ. ಸರಣಿಯ 30,054 ಖೋಟಾ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪತ್ತೆಯಾಗಿದ್ದರೆ, 2018-19ರಲ್ಲಿ 21,865 ಖೋಟಾ ನೋಟು ಪತ್ತೆಯಾಗಿತ್ತು (37% ಹೆಚ್ಚಳ). ಇದೇ ರೀತಿ, 2018-19ರಲ್ಲಿ 200 ರೂ. ಮುಖಬೆಲೆಯ 12,728 ಖೋಟಾ ನೋಟುಗಳು ಪತ್ತೆಯಾಗಿದ್ದರೆ, 2019-20ರಲ್ಲಿ 31,969 ನಕಲಿ ನೋಟುಗಳು ಪತ್ತೆಯಾಗಿವೆ(151% ಹೆಚ್ಚಳ). ರಿಸರ್ವ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‌ಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪತ್ತೆ ಮಾಡಿದ ಖೋಟಾ ನೋಟಿನ ಪ್ರಮಾಣ ಇದಾಗಿದೆ. ಪೊಲೀಸ್ ಹಾಗೂ ಇತರ ಜಾರಿ ಇಲಾಖೆಗಳು ವಶಕ್ಕೆ ಪಡೆದಿರುವ ಖೋಟಾ ನೋಟುಗಳು ಇದರಲ್ಲಿ ಸೇರಿಲ್ಲ ಎಂದು ವರದಿ ತಿಳಿಸಿದೆ. 2018-19ರಲ್ಲಿ 2000 ರೂ. ಮುಖಬೆಲೆಯ 21,847 ಖೋಟಾನೋಟುಗಳನ್ನು ವಶಕ್ಕೆ ಪಡೆದಿದ್ದರೆ, 2019-20ರಲ್ಲಿ ಈ ಸಂಖ್ಯೆ 17,020ಕ್ಕೆ ಇಳಿದಿದೆ. 2016ರಲ್ಲಿ ನರೇಂದ್ರ ಮೋದಿ ಸರಕಾರ 500 ರೂ. ಮತ್ತು 1000 ರೂ. ಮುಖಬೆಲೆಯ ಕರೆನ್ಸಿ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿತ್ತು. ಖೋಟಾ ನೋಟುಗಳ ಚಲಾವಣೆ ತಡೆಯಲು ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದ ಕೇಂದ್ರ ಸರಕಾರ, ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುವ 500 ರೂ. ಮತ್ತು 200 ರೂ. ಮುಖಬೆಲೆಯ ಹೊಸ ಸರಣಿಯ ನೋಟುಗಳನ್ನು ಬಿಡುಗೆಗೊಳಿಸಿತ್ತು ಮತ್ತು 1000 ರೂ. ಕರೆನ್ಸಿ ನೋಟಿನ ಬದಲು 2000 ರೂ. ಕರೆನ್ಸಿ ನೋಟು ಬಿಡುಗಡೆಗೊಳಿಸಿತ್ತು. ಆದರೆ, ನೋಟು ರದ್ದತಿಯ ಪ್ರಧಾನ ಉದ್ದೇಶವೇ ವಿಫಲವಾಗಿರುವುದು ಇದೀಗ ಆರ್‌ಬಿಐ ವರದಿಯಿಂದ ಬಹಿರಂಗಗೊಂಡಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group