ರಾಜ್ಯ ಸುದ್ದಿ

ಕೆ.ಜಿ.ಹಳ್ಳಿ ಗಲಭೆ: ಬಂಧಿತರಲ್ಲಿ 21 ಮಕ್ಕಳು

ವಿಕಲಚೇತರು ಮತ್ತು ಅಮಾಯಕರನ್ನು ಬಂಧಿಸಲಾಗಿದೆ: ಆರೋಪ

ವರದಿಗಾರ (ಆ.25): ಪ್ರವಾದಿ ನಿಂದನೆಯ ಬಳಿಕ ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಯಲ್ಲಿ ಉಂಟಾದ ಗಲಭೆಗೆ ಸಂಬಂಧ ಇದುವರೆಗೆ 390ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದ್ದು, ಈ ಪೈಕಿ 21 ಮಂದಿ ಅಪ್ರಾಪ್ತ ವಯಸ್ಸಿನವರು ಎಂಬುದು ಬೆಳಕಿಗೆ ಬಂದಿದೆ.

ಗಲಭೆ ನಡೆದ ಆಗಸ್ಟ್ 11ರಿಂದ ಆರಂಭಗೊಂಡ ಪೊಲೀಸರ ಬೇಟೆ ಇನ್ನೂ ಮುಂದುವರಿದಿದೆ. ಈ ರೀತಿಯಲ್ಲಿ ಬಂಧನಕ್ಕೊಳಗಾದವರಲ್ಲಿ 21 ಮಂದಿ ಮಕ್ಕಳಾಗಿದ್ದಾರೆ. ಅವರಿಗೆ ಇನ್ನೂ18 ವರ್ಷ ಪೂರ್ಣಗೊಂಡಿಲ್ಲ.

ಗಲಭೆಯ ಸಂಬಂಧ ಹೆಚ್ಚಿನ ಮಾಹಿತಿಗಾಗಿ ವಿಡಿಯೋ, ಸಿಸಿಟಿವಿ ವೀಕ್ಷಣೆಗೆ ಪ್ರತ್ಯೇಕ ತಂಡ ರಚನೆ  ಮಾಡಲಾಗಿದ್ದು, ಈ ತಂಡ ವಿಡಿಯೋಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸುತ್ತಿದೆ.

ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರವೇ ಮಕ್ಕಳನ್ನು ಬಂಧಿಸಲಾಗಿದೆ. ಅವರ ವಿರುದ್ಧ 169 ಅಡಿ ಪ್ರಕರಣ ದಾಖಲಿಸಿಬಿಟ್ಟು ಕಳುಹಿಸಿದ್ದು ಸದ್ಯದ ಕಾನೂನಿನಡಿ ಮಕ್ಕಳ ವಿಚಾರಣೆ ನಡೆಸಲು  ತನಿಖಾಧಿಕಾರಿಗಳಿಗೆ ಸಾಧ್ಯವಿಲ್ಲದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮಾಯಕರು ಮತ್ತು ವಿಕಲಚೇತರನ್ನು ಕೂಡ ಬಂಧಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group