ತಂದೆಯ ಪ್ರೀತಿಯನ್ನೂ ಕಾಮದ ಕಣ್ಣಿನಲ್ಲಿ ಕಂಡ ಸಂಘ ವಿಕೃತ ಕಾಮಿಗಳು!

ವೈರಲ್ ವೀಡಿಯೋ ಹಿಂದಿರುವ ಸತ್ಯಾಸತ್ಯತೆ
ಕೃಪೆ: ಆಲ್ಟ್ ನ್ಯೂಸ್
ವರದಿಗಾರ, (ಆ.25): ಸಂಘಪರಿವಾರ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪಾಕಿಸ್ತಾನದ ಹೆಸರನ್ನು ಬಳಸಿಕೊಳ್ಳುತ್ತಿರುವ ಇತಿಹಾಸ ಇಂದು ನಿನ್ನೆಯದಲ್ಲ. ಭಾರತದಲ್ಲಿ ಸಂಘಪರಿವಾರ, ಪಾಕಿಸ್ತಾನದ ಹೆಸರಲ್ಲಿ ಗಳಿಸಿದಷ್ಟು ರಾಜಕೀಯ ಲಾಭ ಬಹುಶಃ ಇತರ ಯಾವೊಂದು ರಾಜಕೀಯ ಪಕ್ಷವೂ ಗಳಿಸಿರಲಿಕ್ಕಿಲ್ಲ. ಧಾರ್ಮಿಕ ವಿಚಾರಗಳನ್ನು ಮುಂದಿರಿಸಿಕೊಂಡು ಜನರನ್ನು ಪ್ರಚೋದಿಸುತ್ತಾ ತಮ್ಮ ರಾಜಕೀಯ ಲಾಭದ ಲೆಕ್ಕಾಚಾರ ಅವರಿಗೆ ಸುಲಲಿತ. ಅದಕ್ಕೆ ಮತ್ತೊಂದು ಸೇರ್ಪಡೆಯೇ ಇತ್ತೀಚೆಗಿನ ಪಾಕಿಸ್ತಾನದ ವಧೊವೊಬ್ಬರಿಗೆ ಆಕೆಯ ತಂದೆ ಹಣೆಗೆ ನೀಡುತ್ತಿರುವ ಸಿಹಿಮುತ್ತೊಂದನ್ನು ತಮ್ಮ ಕಾಮುಕ ಮನೋಸ್ಥಿತಿಗೆ ಅನುಗುಣವಾಗಿ ಅದನ್ನು ವಿಕೃತವಾಗಿ ಚಿತ್ರಿಸಿಕೊಂಡು ಸಾಮಾಜಿಕ ತಾಣಗಳಲ್ಲಿ ಬಳಸಿಕೊಂಡಿದ್ದು ವೀಡಿಯೋದ ವಾಸ್ತವ ಹೊರಬಂದಿದ್ದು, ಮತೊಮ್ಮೆ ಸಂಘಪರಿವಾರದ ವಿಕೃತತೆ ಬಯಲಾಗಿದೆ.
ಮುಸ್ಲಿಂ ವ್ಯಕ್ತಿಯೊಬ್ಬರು ವಧುವೊಬ್ಬಳ ಕೆನ್ನೆಗೆ ಪ್ರೀತಿಯಿಂದ ಚುಂಬಿಸುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಹಲವು ಬಿಜೆಪಿ ನಾಯಕರು ಟ್ವೀಟ್ ಮಾಡಿ ಮುಸ್ಲಿಂ ಸಮಾಜದಲ್ಲಿ ನಡೆಯುವ ಅನಾಚಾರದ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಹಪಹಪಿಸಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ದೆಹಲಿಯ ರಾಜ್ಯ ಜಂಟಿ ಕಾರ್ಯದರ್ಶಿ ಅನಿಮಾ ಸೋಂಕರ್ ಈ ವಿಡಿಯೋವನ್ನು ಶೇರ್ ಮಾಡಿ, “ಇದನ್ನು ಏನೆಂದು ಕರೆಯಬೇಕು ?. ಏಕೆಂದರೆ ಅವರ ಅತ್ಯಂತ ಜನಪ್ರಿಯ ಟಿವಿ ಕಾರ್ಯಕ್ರಮ “ಸತ್ಯಮೇವ್ ಜಯತೆ” ಖ್ಯಾತಿಯ ಮಿಸ್ಟರ್ ಜಾತ್ಯತೀಯ ಅಮೀರ್ ಖಾನ್ ಅವರು ಇಸ್ಲಾಮಿಕ್ ಸಮಾಜದಲ್ಲಿರುವ ಯಾವುದೇ ಸಾಮಾಜಿಕ ಅನಿಷ್ಟವನ್ನು ಎಂದೂ ತೋರಿಸುವುದಿಲ್ಲ ಎಂದು ಟೀಕಿಸಿದ್ದಾರೆ.
ಬಿಜೆಪಿ ದೆಹಲಿ ಮುಖಂಡ ಗೌರವ್ ಖಾರಿ ಕೂಡ ಇದೇ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡು, “ನಿಕಾಹ್ನಾಮಾಗೆ ಸಹಿ ಹಾಕಿದ ನಂತರ, ಮೌಲ್ವಿಯೊಬ್ಬರು ವಧುವಿಗೆ ವಿಶೇಷ ರೀತಿಯಲ್ಲಿ ಆಶೀರ್ವದಿಸುತ್ತಿರುವುದು” ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.
ಎಬಿಪಿ ನ್ಯೂಸ್ ವಾಹಿನಿಯ ಪತ್ರಕರ್ತೆ ಅಸ್ತಾ ಕೌಶಿಕ್ ಕೂಡ ವಿಡಿಯೋವನ್ನು ಹಂಚಿಕೊಂಡು, “ವಧುವಿನ ತಾಯಿ ಮತ್ತು ಸ್ನೇಹಿತರು ಕೂಡ ಈ ರೀತಿ ಮಾಡಿರಲಿಲ್ಲ. ಆದರೆ ಹಿರಿಯರೊಬ್ಬರು ಈ ರೀತಿ ಪ್ರೀತಿಯ ಆಶೀರ್ವಾದ ನೀಡುತ್ತಾರೆ” ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ಗೆ 7,000 ಕ್ಕೂ ಹೆಚ್ಚು ಲೈಕ್ಗಳನ್ನು ಮತ್ತು 2,000ಕ್ಕೂ ಹೆಚ್ಚು ರಿಟ್ವೀಟ್ಗಳು ಬಂದಿವೆ.
ಇದೇ ರೀತಿಯಲ್ಲಿ ಇನ್ನೂ ಅನೇಕ ಮಂದಿ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.
ಆದರೆ ವೀಡಿಯೋದ ಬಗ್ಗೆ “ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್” ನಡೆಸಿದಾಗ ಸಿಕ್ಕಿರುವ ಮಾಹಿತಿ ಅದಕ್ಕೆ ತದ್ವಿರುದ್ದವಾದುದು.
ವಾಸ್ತವ ಏನೆಂದರೆ, ವೀಡಿಯೋದಲ್ಲಿ ವಧುವಿಗೆ ಪ್ರೀತಿಯಿಂದ ಚುಂಬನ ನೀಡುವುದು ಆಕೆಯ ತಂದೆ. ಆಗಸ್ಟ್ 19ರಂದು ಈ ವೀಡಿಯೋವನ್ನು “ಇಸ್ಲಾಮಾಬಾದ್ ಸ್ಟೈಲ್ _ಐಕಾನ್” ಎಂಬ ಫೇಸ್ಬುಕ್ ಪೇಜ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈಗ ನನ್ನ ಪುತ್ರಿ ಹೊಸ ಬದುಕು ಆರಂಭಿಸುತ್ತಿದ್ದಾಳೆ… ಆದರೆ ಅವಳ ತಂದೆಯಾಗಿ ನಾನು ಯಾವಾಗಲೂ ಅವಳಿಗಾಗಿ ಇರುತ್ತೇನೆ ಎಂದು ಬರೆಯಲಾಗಿದೆ.
ತಂದೆಯೊಬ್ಬರು ತನ್ನ ಮಗಳೊಂದಿಗೆ ತೋರಿಸಿದ ಪ್ರೀತಿಯ ಚುಂಬನವನ್ನು ವಿಕೃತ ಮನಸ್ಸುಗಳು ಇಸ್ಲಾಮಿನ ಸಂಸ್ಕೃತಿ ಎಂದು ಬಿಂಬಿಸಲು ಪ್ರಯತ್ನಿಸಿರುವುದು ಮತ್ತು ಹಸಿ ಸುಳ್ಳು ಹರಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವೀಡಿಯೋ ವೀಕ್ಷಿಸಿ:
https://twitter.com/Asthakaushik05/status/1297415880784003072?s=20
