ರಾಷ್ಟ್ರೀಯ ಸುದ್ದಿ

ವೃದ್ಧಾಪ್ಯ ವೇತನಕ್ಕಾಗಿ ಎರಡು ವರ್ಷಗಳವರೆಗೆ ಸರಕಾರಿ ಕಛೇರಿಗಳ ಮುಂದೆ ಅಲೆದಾಡಿದ ಮಹಿಳೆ!

ವೃದ್ಧೆಯ ಸಮಸ್ಯೆಯನ್ನು ಬಗೆಹರಿಸಿದ ಜಿಲ್ಲಾಧಿಕಾರಿ ಆಬ್ದುಲ್ ಅಜೀಮ್; ವ್ಯಾಪಕ ಪ್ರಶಂಸೆ

ವರದಿಗಾರ, (ಏ.25): ಸರ್ಕಾರಿ ಅಧಿಕಾರಿಗಳು ಹೇಗಿರಬೇಕು ಎಂಬುದಕ್ಕೆ ತೆಲಂಗಾಣ ರಾಜ್ಯದ ಜಯಶಂಕರ್ ಭೂಪಲ್ಲಿ  ಜಿಲ್ಲಾಧಿಕಾರಿ ಅಬ್ದುಲ್ ಅಜೀಮ್‌ ಉತ್ತಮ ನಿದರ್ಶನ.

ವೃದ್ಧಾಪ್ಯಕ್ಕಾಗಿ ಎರಡು ವರ್ಷಗಳಿಂದ ಅಲೆದಾಡುತ್ತಿದ್ದ ವೃದ್ಧೆಯೊಬ್ಬರಿಗೆ ವೃದ್ಧಾಪ್ಯ ವೇತನ ಬರುವಂತೆ ಮಾಡಿದ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಘಟನೆ ಕೆಲವು ತಿಂಗಳ ಹಿಂದೆ ನಡೆದಿದ್ದರೂ ಈಗಲೂ ಈ ಸಂಬಂಧದ ವೀಡಿಯೋ ವೈರಲ್ ಆಗುತ್ತಿದೆ.

ಎಂದಿನಂತೆ ಒಂದು ದಿನ ಜಿಲ್ಲಾಧಿಕಾರಿ ಅಬ್ದುಲ್ ಅಜೀಮ್ ತಮ್ಮ ಕಾರ್ಯಾಲಯಕ್ಕೆ ಆಗಮಿಸುತ್ತಾರೆ. ಆಗ ಕಚೇರಿಯ ಮೆಟ್ಟಿಲಲ್ಲಿ ವೃದ್ಧೆಯೊಬ್ಬರು ಕುಳಿತಿದ್ದುದನ್ನು ಕಂಡ ಅಜೀಮ್ ನೇರವಾಗಿ ಮಹಿಳೆಯ ಬಳಿ ಬಂದು ಸಮಸ್ಯೆ ಆಲಿಸುತ್ತಾರೆ. ಅಜ್ಮೀರಾ ಮಾಂಗ್ಮ ಎಂಬ ಆ ವೃದ್ಧೆ, ವೃದ್ಧಾಪ್ಯ ವೇತನಕ್ಕಾಗಿ ಎರಡು ವರ್ಷಗಳಿಂದ ಅಲೆದಾಡಿದ ವ್ಯಥೆಯನ್ನು ಹೇಳುತ್ತಾರೆ. ಆಕೆಯಲ್ಲಿದ್ದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ತಕ್ಷಣ ಸಂಬಂಧಪಟ್ಟ ಅಧಿಕಾರಿಗೆ ಕರೆ ಮಾಡಿದ ಅಜೀಮ್, ವೃದ್ಧಾಪ್ಯ ವೇತನ ಬಿಡುಗಡೆ ಮಾಡುವಂತೆ ಆದೇಶಿಸುತ್ತಾರೆ.

ಜಿಲ್ಲಾಧಿಕಾರಿ ಅಜೀಮ್ ಅವರು ಮೆಟ್ಟಿಲಲ್ಲಿ ಕುಳಿತು ಅಜ್ಜಿಯೊಂದಿಗೆ ಮಾತನಾಡುತ್ತಿದ್ದ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಅಜೀಮ್ ಅವರ ಮಾನವೀಯ ಕಳಕಳಿಗೆ ಈಗಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group