ವಿದೇಶ ಸುದ್ದಿ

ಮುಸ್ಲಿಮರಲ್ಲಿ ಭಯ ಸೃಷ್ಟಿಸಲು ಬಯಸಿದ್ದೆ; ವಿಚಾರಣೆಯ ವೇಳೆ ಹೇಳಿಕೆ ನೀಡಿದ ನ್ಯೂಜಿಲೆಂಡ್‌ ಮಸೀದಿ ದಾಳಿಯ ಅಪರಾಧಿ

ವರದಿಗಾರ (ಆ.24): ನ್ಯೂಜಿಲೆಂಡ್‌ನ ಎರಡು ಮಸೀದಿಗಳಲ್ಲಿ 51 ಜನರನ್ನು ಹತ್ಯೆ ಮಾಡಿದ್ದ ಆಸ್ಟ್ರೇಲಿಯಾದ ಭಯೋತ್ಪಾದಕ ಬ್ರೆಂಟನ್ ಟ್ಯಾರಂಟ್ ವಿಚಾರಣೆಯ ವೇಳೆ ಮುಸ್ಲಿಮರಲ್ಲಿ ಭಯ ಸೃಷ್ಟಿಸಲು ಈ ಕೃತ್ಯವೆಸಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಆತ ಅತಿ ಹೆಚ್ಚಿನ ಸಾವು-ನೋವು ಸಂಭವಿಸುವಂತೆ ಗುಂಡಿನ ದಾಳಿಯ ಯೋಜನೆ ರೂಪಿಸಿದ್ದ ಎಂದು ಪ್ರಾಸಿಕ್ಯೂಟರ್ ಸೋಮವಾರ ಶಿಕ್ಷೆಯ ವಿಚಾರಣೆಯ ಆರಂಭದಲ್ಲಿ ನ್ಯಾಯಾಲಯಕ್ಕೆ ತಿಳಿಸಿದರು.

ದಕ್ಷಿಣದ ಕ್ರೈಸ್ಟ್‌ಚರ್ಚ್‌ನಲ್ಲಿ  2019ರಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 51 ಕೊಲೆ ಆರೋಪಗಳು, ಕೊಲೆ ಯತ್ನದ 40 ಆರೋಪಗಳು ಮತ್ತು ಭಯೋತ್ಪಾದಕ ಕೃತ್ಯ ಎಸಗಿದ ಆರೋಪದ ಮೇಲೆ ಸ್ವಯಂ-ತಪ್ಪೊಪ್ಪಿಕೊಂಡಿರುವ ಬಿಳಿ ವರ್ಣೀಯ ಬ್ರೆಂಟನ್ ಟ್ಯಾರಂಟ್, ತನ್ನ ಕೃತ್ಯವನ್ನು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಿದ್ದ.29ರ ಹರೆಯದ ಈತನಿಗೆ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದ್ದು, ಈ ವಾರಾಂತ್ಯದಲ್ಲಿ ಶಿಕ್ಷೆ ಪ್ರಕಟಗೊಳ್ಳಲಿದೆ.

ಮುಸ್ಲಿಮರಲ್ಲಿ ಭಯವನ್ನು ಸೃಷ್ಟಿಸಲು ಬಯಸಿದ್ದೆ ಎಂದು ಟಾರಂಟ್ ಬಂಧನದ ನಂತರ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಕ್ರೌನ್ ಪ್ರಾಸಿಕ್ಯೂಟರ್ ಬರ್ನಾಬಿ ಹಾವೆಸ್ ತಿಳಿಸಿದರು.

ಇನ್ನಷ್ಟು ಮುಸ್ಲಿಮರನ್ನು ಕೊಲ್ಲಲು ಸಾಧ್ಯವಾಗದಿರುವುದಕ್ಕೆ ಆತ ವಿಷಾದ ವ್ಯಕ್ತಪಡಿಸಿದ್ದಾನೆ. ಮಾತ್ರವಲ್ಲ ಮಸೀದಿಗೆ ಬೆಂಕಿ ಹಚ್ಚಲು ಯೋಜಿಸಿದ್ದ ಎಂದು ಹಾವೆಸ್ ಹೇಳಿದ್ದಾರೆ.

“ನಿನ್ನನ್ನು ಕ್ಷಮಿಸಲು ಸಾಧ್ಯವಿಲ್ಲ. ನಿನ್ನ ದೃಷ್ಟಿಯಲ್ಲಿ ನಾವು ಮುಸ್ಲಿಮರಾಗಿರುವುದೇ ನಾವು ಮಾಡಿದ  ಏಕೈಕ ಅಪರಾಧ ಎಂದು ಅಂದು ನಡೆದ ಘಟನೆಯಲ್ಲಿ ತಮ್ಮ 33 ವರ್ಷ ಪ್ರಾಯದ ಪುತ್ರ ಅಟ್ಟಾ ಎಲೆಯಾನ್ ಅವರನ್ನು ಕಳೆದುಕೊಂಡ ಐಸೂನ್ ಸಲ್ಮಾ ಹೇಳಿದರು.

ಎಲೆಯಾನ್ ಅವರು ನ್ಯೂಜಿಲೆಂಡ್ ಪುಟ್ಸಲ್ ತಂಡದ ಗೋಲ್‌ಕೀಪರ್ ಆಗಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group