ರಾಷ್ಟ್ರೀಯ ಸುದ್ದಿ

ಟ್ವೀಟ್‌ಗೆ ಕ್ಷಮೆಯಾಚಿಸುವುದಿಲ್ಲ; ಹಿಂದಿನ ನಿಲುವಿನಲ್ಲಿ ಬದಲಾವಣೆಯಿಲ್ಲ; ಸುಪ್ರೀಂಕೋರ್ಟ್‌ಗೆ ಸ್ಪಷ್ಟಪಡಿಸಿದ ಪ್ರಶಾಂತ್ ಭೂಷಣ್

ವರದಿಗಾರ (ಆ.24): ನ್ಯಾಯಾಂಗದ ಬಗ್ಗೆ ತಾವು ಮಾಡಿರುವ ಟ್ವೀಟ್‌ ಬಗ್ಗೆ ಕ್ಷಮೆಯಾಚಿಸಲು ನಿರಾಕರಿಸಿರುವ ಹಿರಿಯ ಸಾಮಾಜಿಕ ಕಾರ್ಯಕರ್ತ, ಖ್ಯಾತ ವಕೀಲ ಪ್ರಶಾಂತ್ ಭೂಷಣ್, ತಮ್ಮ ಟ್ವೀಟ್‌ಗಳಿಗೆ ಕ್ಷಮೆಯಾಚಿಸುವುದು ನನ್ನ ಆತ್ಮಸಾಕ್ಷಿಗೆ ವಿರುದ್ಧವಾದುದು ಎಂದು ಹೇಳಿದ್ದಾರೆ.

“ನಾನು ಮಾಡಿರುವ ಟ್ವೀಟ್‌ಗಳು ನಾನು ನಂಬಿರುವ ನಂಬಿಕೆಗಳನ್ನು ಅಭಿವ್ಯಕ್ತಿಪಡಿಸುತ್ತದೆ. ಸಾರ್ವಜನಿಕ ಅಭಿವ್ಯಕ್ತಿ, ನಾಗರಿಕನಾಗಿ ಮತ್ತು ಈ ನ್ಯಾಯಾಲಯದ ನಿಷ್ಠಾವಂತ ಅಧಿಕಾರಿಯಾಗಿ ಈ ನಂಬಿಕೆಯಲ್ಲಿ ದೃಢವಾಗಿ ನಿಲ್ಲುತ್ತೇನೆ. ಆದ್ದರಿಂದ, ಯಾವುದೇ ಷರತ್ತುಬದ್ಧ ಅಥವಾ ಬೇಷರತ್ತಾಗಿ  ಕ್ಷಮೆಯಾಚಿಸುವುದು ನಿಷ್ಕಪಟತನವಾಗುತ್ತದೆ ಎಂದು ಭೂಷಣ್ ನ್ಯಾಯಾಲಯಕ್ಕೆ ತಿಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಮೂಲಕ ತಾವು ಟ್ವೀಟ್‌ನಲ್ಲಿ ತಿಳಿಸಿರುವ ಹೇಳಿಕೆಗೆ ಬದ್ಧವಾಗಿರುವುದಾಗಿ ಖಡಾಖಂಡಿತವಾಗಿ ಹೇಳಿದ್ದಾರೆ.

ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಕಳೆದ ವಿಚಾರಣೆ ವೇಳೆ ಕ್ಷಮೆಯಾಚಿಸಲು ಆಗಸ್ಟ್ 24ರವರೆಗೆ ಭೂಷಣ್ ಅವರಿಗೆ ಕಾಲಾವಕಾಶ ನೀಡಿತ್ತು. ಅದರಂತೆ ಇಂದು ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ಸಲ್ಲಿಸಲಾಗಿದೆ.

ಆಗಸ್ಟ್ 20ರಂದು ನಡೆದ ವಿಚಾರಣೆಯ ವೇಳೆಯೂ ಭೂಷಣ್ ಅವರು ಮುಖ್ಯ ನ್ಯಾಯಮುರ್ತಿ ಎಸ್‌.ಎ.ಬೋಬ್ಡೆ ಹಾಗೂ ಕಳೆದ ಆರು ವರ್ಷಗಳಲ್ಲಿ ಸುಪ್ರೀಂ ಕೋರ್ಟ್‌ನ ನಡೆಯ ಬಗ್ಗೆ ಮಾಡಿದ್ದ  ಟ್ವೀಟ್ ಬಗ್ಗೆ ಕ್ಷಮೆಯಾಚಿಸಲು ನಿರಾಕರಿಸಿದ್ದರು.

ಮಾತ್ರವಲ್ಲ ಮಹಾತ್ಮ ಗಾಂಧಿಯವರ ನುಡಿಯೊಂದನ್ನು ಉಲ್ಲೇಖಿಸಿ, ನ್ಯಾಯಾಲಯದಿಂದ ಕರುಣೆ ಅಥವಾ ಉದಾರತೆಯನ್ನು ಕೇಳುವುದಿಲ್ಲ. ನ್ಯಾಯಾಲಯವು ತನಗೆ ಸೂಕ್ತವೆಂದು ಪರಿಗಣಿಸುವ ಯಾವುದೇ ಶಿಕ್ಷೆಯನ್ನು ವಿಧಿಸಬಹುದು, ಅದನ್ನು ತಾವು ಹರ್ಷಚಿತ್ತದಿಂದ ಸ್ವೀಕರಿಸುತ್ತೇನೆ ಎಂದು ತಿಳಿಸಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group