ವಿದೇಶ ಸುದ್ದಿ

ಮಸೀದಿ ಧ್ವಂಸಗೊಳಿಸಿದ ಸ್ಥಳದಲ್ಲಿ ಶೌಚಾಲಯ: ಚೀನಾದಲ್ಲಿ ಮುಸ್ಲಿಮರ ಭಾವನೆಗೆ ಧಕ್ಕೆ ತರಲು  ಕೃತ್ಯ

ವರದಿಗಾರ (ಆ.24): ಚೀನಾದಲ್ಲಿ ಉಯಿಘರ್ ಮುಸ್ಲಿಮರ ಮೇಲಿನ ದೌರ್ಜನ್ಯ ನಿರಂತರವಾಗಿ ಮುಂದುವರಿಯುತ್ತಿದೆ. ಈ ಮಧ್ಯೆ ಅವರನ್ನು ಭಾವನಾತ್ಮಕವಾಗಿಯೂ ನೋಯಿಸುವ ಕ್ರಮಗಳು ಸರ್ಕಾರದಿಂದಲೇ ನಡೆಯುತ್ತಿದೆ. ಇದಕ್ಕೆ ಹೊಸದಾಗಿ ಸೇರ್ಪಡೆಯೆಂದರೆ, ವಾಯವ್ಯ ಚೀನಾದ ಕ್ಸಿನ್‌ಜಿಯಾಂಗ್ ಉಯಿಘರ್ ಸ್ವಾಯತ್ತ ಪ್ರದೇಶದ ಅತುಷ್ ನಗರದಲ್ಲಿ ನೆಲಸಮವಾದ ಮಸೀದಿಯ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣಗೊಂಡಿರುವುದಾಗಿದೆ.

ಪವಿತ್ರ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿರುವುದನ್ನು ಸ್ಥಳೀಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಉಯಿಘರ್ ಮುಸ್ಲಿಮರ ಭಾವನೆಗೆ ಧಕ್ಕೆ ತರಲು ಈ ಕೃತ್ಯವೆಸಗಲಾಗಿದೆ.

ಮುಸ್ಲಿಮರ ಪ್ರಾರ್ಥನಾ ಸ್ಥಳಗಳನ್ನು ಸಾಮೂಹಿಕವಾಗಿ ನಾಶಪಡಿಸಲು 2016ರಲ್ಲಿ ಆರಂಭಿಸಲಾದ “ಮಸೀದಿ ಸರಿಪಡಿಸುವಿಕೆ” ಹೆಸರಿನ ಕಾರ್ಯಾಚರಣೆಯಲ್ಲಿ  ಅತುಶ್‌ನ ಸುಂತಾಗ್ ಗ್ರಾಮದ ಮೂರು ಮಸೀದಿಗಳ ಪೈಕಿ ಎರಡು ಮಸೀದಿಗಳನ್ನು ಧ್ವಂಸ ಮಾಡಲಾಗಿತ್ತು. ಮಸೀದಿಯ ಸ್ಥಳದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ.

ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ಅವರ ನೇತೃತ್ವದ ಸರ್ಕಾರದ ಕಠಿಣ ನೀತಿಗಳ ಸರಣಿಯ ಭಾಗವಾಗಿ, ಮಸೀದಿ ಸರಿಪಡಿಸುವಿಕೆ ಅಭಿಯಾನವನ್ನು ಏಪ್ರಿಲ್ 2017 ರಲ್ಲಿ ಪ್ರಾರಂಭಿಸಲಾಗಿತ್ತು. ಚೀನಾದ ಕ್ಸಿನ್‌ಜಿಯಾಂಗ್ ಉಯಿಘರ್ ಸ್ವಾಯತ್ತ ಪ್ರದೇಶದಲ್ಲಿ  1.8 ಮಿಲಿಯನ್ ಉಯಿಘರ್ ಮತ್ತು ಇತರ ಮುಸ್ಲಿಂ ಅಲ್ಪಸಂಖ್ಯಾತರನ್ನು ಸಾಮೂಹಿಕವಾಗಿ ಸೆರೆವಾಸದಲ್ಲಿ ಇಡಲಾಗಿದೆ.

ಆರ್‌ಎಫ್‌ಎ ಸದಸ್ಯರು ಇತ್ತೀಚೆಗೆ ಉಯಿಘರ್ ಸಮಿತಿಯ ಮುಖ್ಯಸ್ಥರೊಂದಿಗೆ ದೂರವಾಣಿ ಸಂದರ್ಶನ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಪ್ರತೀಕಾರದ ಭಯದ ಹಿನ್ನೆಲೆಯಲ್ಲಿ ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಮಾತನಾಡಿದ ಸಮಿತಿಯ ಮುಖ್ಯಸ್ಥರೊಬ್ಬರು, ಟೋಕುಲ್ ಮಸೀದಿಯನ್ನು 2018 ರಲ್ಲಿ ನೆಲಸಮಗೊಳಿಸಲಾಯಿತು. ಈ ಸ್ಥಳದಲ್ಲಿ ಒಂದು ಶೌಚಾಲಯ ನಿರ್ಮಿಸಲಾಗಿದೆ ಎಂದು ಆರ್‌ಎಫ್‌ಎಗೆ ತಿಳಿಸಿದರು.

ಸರ್ಕಾರದ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಉಯಿಘರ್ ಇತಿಹಾಸಕಾರ ಖಹಾರ್ ಬರಾತ್ ಅವರು, ಅಂತಾರಾಷ್ಟ್ರೀಯ ಸಮುದಾಯ ಮತ್ತು ಮುಸ್ಲಿಂ ಜಗತ್ತು ಈ ಬಗ್ಗೆ ಧ್ವನಿ ಎತ್ತುವಂತೆ ಆಗ್ರಹಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group