ರಾಷ್ಟ್ರೀಯ ಸುದ್ದಿ

ತನ್ನೊಂದಿಗೆ ಕೆಲಸ ಮಾಡುವ 20 ಕಾರ್ಮಿಕರನ್ನು ಕರೆ ತರಲು ವಿಮಾನ ಟಿಕೇಟು ಖರೀದಿಸಿದ ರೈತ!

ವರದಿಗಾರ (ಆ.24): ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ಮತ್ತು ಕಾರ್ಖಾನೆಗಳ ಮಾಲೀಕರ ಅಮಾನವೀಯ ನಡೆಯಿಂದ ಲಕ್ಷಾಂತರ ಕಾರ್ಮಿಕರು ಪಟ್ಟು ಕಷ್ಟ ನಷ್ಟಗಳನ್ನು ಇಡೀ ಜಗತ್ತು ನೋಡಿದೆ.

ಇವುಗಳ ನಡುವೆಯೂ ದೆಹಲಿಯ ಪಪ್ಪನ್ ಸಿಂಗ್ ಎಂಬ ಅಣಬೆ ಕೃಷಿಕ ತನ್ನ ಬಳಿ ಕೆಲಸ ಮಾಡುತ್ತಿದ್ದ 10 ಕಾರ್ಮಿಕರನ್ನು ವಿಮಾನದ ಮೂಲಕ ಅವರ ಊರುಗಳಿಗೆ ತಲುಪಿಸಿದ ಘಟನೆ ಎಲ್ಲರ ಗಮನ ಸೆಳೆದಿತ್ತು. ಇದೀಗ ಮತ್ತೆ ಅವರು ತನ್ನ ಎಲ್ಲಾ ಕಾರ್ಮಿಕರನ್ನು ವಿಮಾನದ ಮೂಲಕವೇ ದೆಹಲಿಗೆ ಕರೆಸಿಕೊಳ್ಳುತ್ತಿದ್ದಾರೆ.

ಕೊರೊನಾ ಲಾಕ್ ಡೌನ್ ನ ಮೇ ತಿಂಗಳಲ್ಲಿ ತನ್ನ 10 ಮಂದಿ ಕಾರ್ಮಿಕರನ್ನು ವಿಮಾನದ ಮೂಲಕ ಅವರ ತವರು ರಾಜ್ಯವಾದ ಬಿಹಾರಕ್ಕೆ ಕಳುಹಿಸಿದ್ದ ದೆಹಲಿ ಮೂಲದ ಅಣಬೆ ಕೃಷಿಕ ಪಪ್ಪನ್ ಸಿಂಗ್ ಈಗ ಮತ್ತೆ 20 ವಲಸೆ ಕಾರ್ಮಿಕರನ್ನು ದೆಹಲಿಗೆ ಕರೆತರಲು ವಿಮಾನ ಟಿಕೆಟ್ ಕಾಯ್ದಿರಿಸಿದ್ದಾರೆ. ಇವರಲ್ಲಿ ಹೊಸದಾಗಿ ಬರುತ್ತಿರುವ 10 ಮಂದಿ ಕಾರ್ಮಿಕರು ಕೂಡ ಇದ್ದಾರೆ.

ಪಪ್ಪನ್ ಸಿಂಗ್ ಅವರು ತನ್ನ ಕಾರ್ಮಿಕರಿಗಾಗಿ ಒಂದು ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ. ಸಿಂಗ್ ಅವರೊಂದಿಗೆ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರು ಕೂಡ ಇದರಲ್ಲಿದ್ದಾರೆ. ಆಗಸ್ಟ್‌ನಿಂದ ಏಪ್ರಿಲ್ ಅವಧಿಯಲ್ಲಿ ಅವರೆಲ್ಲಾ ಅಣಬೆ ಕೃಷಿಯಲ್ಲಿ ತೊಡಗಿಕೊಳ್ಳುವ ನಿರೀಕ್ಷೆಯಿದೆ.

20 ಕಾರ್ಮಿಕರ ಪೈಕಿ 10 ಮಂದಿ ಇದೇ ಮೊದಲ ಬಾರಿಗೆ ವಿಮಾನ ಹಾರಾಟ ಅನುಭವ ಹೊಂದಲಿದ್ದಾರೆ. ಆಗಸ್ಟ್ 27 ರಂದು ಅವರು ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ದೆಹಲಿಯ ತಿಗಿಪುರ ಗ್ರಾಮದಲ್ಲಿ ಪಪ್ಪನ್ ಸಿಂಗ್ ಅವರೊಂದಿಗೆ ಹೊಸ ಅಣಬೆ ಕೃಷಿ ಋತುವಿನಲ್ಲಿ ಅವರು ಕೆಲಸ ಆರಂಭಿಸಲಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸಲು ನಾವು ಉತ್ಸುಕರಾಗಿದ್ದೇವೆ. ಮೇ ತಿಂಗಳಲ್ಲಿ ವಿಮಾನದಲ್ಲಿ ಬಂದಿದ್ದರಿಂದ ಈ ಬಾರಿ ನಾನು ಹೆದರುವುದಿಲ್ಲ ಎಂದು ಬಿಹಾರದ ಸಮಸ್ತಿಪುರ ಜಿಲ್ಲೆಯ ನವೀನ್‌ ರಾಮ್‌ ಹೇಳುತ್ತಾರೆ. ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಿದ ನಂತರ ದೆಹಲಿಯಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಸಿಂಗ್ ಅವರು ಮೇ ತಿಂಗಳಲ್ಲಿ ಮನೆಗೆ ವಾಪಸ್ ಕಳುಹಿಸಿದ 10 ವಲಸೆ ಕಾರ್ಮಿಕರಲ್ಲಿ ನವೀನ್ ಕೂಡ ಒಬ್ಬರಾಗಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group