ಅಭಿಪ್ರಾಯ

ಗಾಝಾದ ಮೇಲೆ ಇಸ್ರೇಲಿ ಬಾಂಬ್ ದಾಳಿಯನ್ನು ತಡೆಯಲು ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಲಿ: ಪಾಪ್ಯುಲರ್ ಫ್ರಂಟ್

ಬೆಂಗಳೂರು: ಗಾಝಾದ ಮೇಲೆ ನಡೆಯುತ್ತಿರುವ ಇಸ್ರೇಲಿ ಬಾಂಬ್ ದಾಳಿಯನ್ನು ತಡೆಯಲು ಮಧ್ಯಪ್ರವೇಶ ನಡೆಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಒ.ಎಂ.ಒ.ಸಲಾಮ್ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಕಳೆದ ಏಳು ದಿನಗಳಿಂದ ಇಸ್ರೇಲಿ ಯುದ್ಧ ವಿಮಾನಗಳು ಗಾಝಾ ಪಟ್ಟಿಯ ವಿವಿಧ ಭಾಗಗಳಿಗೆ ಬಾಂಬ್ ದಾಳಿ ನಡೆಸುತ್ತಿವೆ. ಇಸ್ರೇಲಿ ಯುದ್ಧಗಳಿಂದಾಗಿ ಗಾಝಾ ಪ್ರದೇಶದ ಎರಡು ದಶಲಕ್ಷಕ್ಕೂ ಹೆಚ್ಚು ಜನರು ನರಳುತ್ತಿದ್ದು, ಪಟ್ಟಿಯ ಮೇಲೆ ಹೇರಲಾಗಿರುವ ದಿಗ್ಭಂಧನದಿಂದಾಗಿ ಜನರು ಆಹಾರ, ಇಂಧನ ಮತ್ತು ಔಷಧಿ ಸೇರಿದಂತೆ ಪ್ರಮುಖ ಸರಕುಗಳಿಂದ ವಂಚಿತರಾಗಿದ್ದಾರೆ. ಅನೇಕ ಅಂತಾರಾಷ್ಟ್ರೀಯ ಮಾನವೀಯ ಕಾರ್ಯಕರ್ತರು ಗಾಝಾ ಪಟ್ಟಿಯನ್ನು ಬಯಲು ಬಂದೀಖಾನೆ ಎಂದು ಕರೆದಿದ್ದಾರೆ.

ಇಸ್ರೇಲ್ ಆಗಸ್ಟ್ 12ರಂದು ಗಾಝಾಗೆ ಇಂಧನ ಆಮದನ್ನು ನಿಷೇಧಿಸಿದ್ದು, ಇದರಿಂದಾಗಿ ಪಟ್ಟಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ಗಂಭೀರ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದರ ಪರಿಣಾಮವು ಅಲ್ಲಿನ ಜನರ ದೈನಂದಿನ ಜೀವನಕ್ಕೆ ಸೀಮಿತವಾಗಿರದೆ, ಆರೋಗ್ಯ ರಕ್ಷಣೆಯಂತಹ ಪ್ರಮುಖ ಸೇವೆಗಳ ಮೇಲೂ ಬಹಳಷ್ಟು ಪರಿಣಾಮ ಬೀರಲಿದೆ. ಗಾಝಾ ತಟದಿಂದ ಮೀನುಗಾರಿಕೆಯ ನಿಷೇಧದಿಂದ ಬಡ ಜನರ ಮೇಲೂ ಪರಿಣಾಮ ಬೀರಲಿದೆ. ತಮ್ಮ ಕಣ್ಣ ಮುಂದೆಯೇ ಒಂದು ಸಮುದಾಯವನ್ನು  ವ್ಯವಸ್ಥಿತ ಮತ್ತು ಸಾಮೂಹಿಕ ಶಿಕ್ಷೆಗೆ ಗುರಿಪಡಿಸುತ್ತಿರುವಾಗ, ಅದರ ಕುರಿತು ಜಗತ್ತು ಕೇವಲ ಮೂಕಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ.

ವಿಶ್ವಸಂಸ್ಥೆಯ ನಿರ್ಬಂಧಗಳು ಸೇರಿದಂತೆ ಕಠಿಣ ಕ್ರಮಗಳ ಮೂಲಕ ಮಾತ್ರವೇ ಇಸ್ರೇಲಿ ಬಾಂಬ್ ದಾಳಿ ಮತ್ತು ಗಾಝಾದ ಕತ್ತು ಹಿಸುಕುವಿಕೆಯನ್ನು ತಡೆಯಬಹುದಾಗಿದೆ ಎಂದು ಒ.ಎಂ.ಎ. ಸಲಾಂ ಹೇಳಿದ್ದಾರೆಂದು ಪಿಎಫ್ಐ ಮಾಧ್ಯಮ ಮತ್ತು ಸಂಪರ್ಕ ವಿಭಾಗ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group