ಜಿಝಾನ್ ಇಂಡಿಯಾ ಫ್ರೆಟರ್ನಿಟಿ ಫೋರಂ (IFF) ಕರ್ನಾಟಕ ಚಾಪ್ಟರ್ ವತಿಯಿಂದ ಸೌದಿ ಅರೇಬಿಯಾದ ಸಬ್ಯಾದಲ್ಲಿ ಯಶಸ್ವಿ ರಕ್ತದಾನ ಶಿಬಿರ

ಜಿಝಾನ್ (ಸೌದಿ ಅರೇಬಿಯಾ) : ಇಂಡಿಯಾ ಫ್ರೆಟರ್ನಿಟಿ ಫೋರಂ (IFF) ಸೌದಿ ಅರೇಬಿಯ ದಾದ್ಯಂತ ಹಮ್ಮಿಕೊಂಡತಹಾ ಪ್ಲಾಸ್ಮಾ ಹಾಗೂ ರಕ್ತದಾನ ಅಭಿಯಾನದ ಅಂಗವಾಗಿ IFF ಜಿಝಾನ್ ಕರ್ನಾಟಕ ಚಾಪ್ಟರ್ ಹಾಗೂ ಸಬ್ಯಾ ಜನರಲ್ ಆಸ್ಪತ್ರೆ ಜಿಝಾನ್ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಇತ್ತೀಚೆಗೆ ಸಬ್ಯಾ ಜನರಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಬಹಳ ಉತ್ಸಾಹದಿಂದ ನಡೆದ ಅನಿವಾಸಿಗರ ರಕ್ತದಾನ ಶಿಬಿರ
ಅನಿವಾಸಿ ಕನ್ನಡಿಗರು ವಿರಳ ಸಂಖ್ಯೆಯಲ್ಲಿರುವ ಜಿಝಾನ್ ವಲಯದಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಂನ ಕಾರ್ಯಕರ್ತರೂ ಸೇರಿದಂತೆ 65 ರಕ್ತದಾನಿಗಳು ರಕ್ತದಾನ ಮಾಡಿದರು.ಈ ಸಂಧರ್ಭದಲ್ಲಿ ಅನಿವಾಸಿ ಮಹಿಳೆಯೋರ್ವರೂ ಸಹ ಸ್ಯಯಂ ಪ್ರೇರಿತರಾಗಿ ರಕ್ತದಾನ ಮಾಡಿದ್ದು ಸಬಿಯಾ ಜನರಲ್ ಆಸ್ಪತ್ರೆಯ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರವಾಗಿದೆ. ಕೋವಿಡ್ ವೇಳೆಯಲ್ಲೂ ಬಹಳ ಸುರಕ್ಷಿತವಾಗಿ ಹಮ್ಮಿಕೊಂಡ ಈ ರಕ್ತದಾನ ಶಿಬಿರವು ರಕ್ತನಿಧಿಗಳ ವೈದ್ಯಾಧಿಕಾರಿಗಳು ಹಾಗೂ ರಕ್ತದಾನಿಗಳ ಸಹಕಾರದಿಂದ ಬಹಳ ಯಶಸ್ವಿಯಾಗಿ ನೆರವೇರಿತು.
ಪ್ರಾರಂಭದಲ್ಲಿ ಸವಾದ್ ವಳವೂರು (IFF ಬೈಶ್ ಘಟಕ) ರವರು ಸ್ವಾಗತಿಸಿದರು. ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಇಂಡಿಯಾ ಫ್ರೆಟರ್ನಿಟಿ ಫೋರಂ (IFF) ಇದರ ಜಿಝಾನ್ ಕರ್ನಾಟಕ ಚಾಪ್ಟರ್ ಅಧ್ಯಕ್ಷರಾದ ಇಕ್ಬಾಲ್ ಕೂಳೂರುರವರು ‘’ಸಕಲ ಸುರಕ್ಷಾ ಮಾರ್ಗಗಳನ್ನು ಅನುಸರಿಸಿಕೊಂಡು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಸಾಮಾಜಿಕ ಚಿಂತನೆಯಲ್ಲಿ ತೊಡಗಿಸಿಕೊಂಡಿರುವ ಯುವಕರ ಸಾಮಾಜಿಕ ಬಧ್ಧತೆಯನ್ನು ಹಾಗೂ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಂ (IFF) ಸೌದಿ ಅರೇಬಿಯಾ ಇದರ ಅಸಿರ್ ಪ್ರಾಂತ್ಯದ ಅಧ್ಯಕ್ಷರಾದ ಸಲೀಂ ಗುರುವಾಯನಕೆರೆ ರಕ್ತದಾನದ ಮಹತ್ವ ಹಾಗೂ ದಾನಿಗಳಿಗೆ ಸಿಗುವ ಆರೋಗ್ಯ ಫಲಿತಾಂಶಗಳ ಕುರಿತಾಗಿ ಮಹತ್ವದ ಸಂದೇಶ ನೀಡಿದರು.IFF ಜಿಝಾನ್ ಕರ್ನಾಟಕ ಚಾಪ್ಟರ್ ಕಾರ್ಯದರ್ಶಿ ಹನೀಫ್ ಜೋಕಟ್ಟೆ ಹಾಗೂ ಇಂಡಿಯನ್ ಸೋಷಿಯಲ್ ಫೋರಂ(ISF) ಜಿಝಾನ್ ಇದರ ನಾಯಕರುಗಳಾದ ಅಝೀಝ್ ಮೂಡಬಿದ್ರೆ ಹಾಗೂ ನೌಶಾದ್ ಕಲಂದರ್ ಕರ್ನಿರೆ ಉಪಸ್ಥಿತರಿದ್ದರು.
ಇಂಡಿಯಾ ಫ್ರೆಟರ್ನಿಟಿ ಫೋರಂ (IFF) ಕರೆಗೆ ಓಗೊಟ್ಟು ಆಗಮಿಸಿದ ಹಾಗೂ ಬಹಳ ಲವಲವಿಕೆಯಿಂದ ಸ್ವಯಂಪ್ರೇರಿತ ರಕ್ತದಾನ ಮಾಡಿದ ಎಲ್ಲಾ ರಕ್ತದಾನಿಗಳಿಗೆ ತನ್ಶೀರ್ ಬಜ್ಪೆ (ಅಧ್ಯಕ್ಷರು IFF ಬೈಶ್ ಘಟಕ)ರವರು ಧನ್ಯವಾದಗಳನ್ನು ಅರ್ಪಿಸಿದರು.
ಗೌರವ ಸ್ಮರಣಿಕೆ
ಜಿಝಾನ್ ವಲಯದಲ್ಲಿ ಪ್ರಸ್ತುತ ಸಂಧರ್ಭದಲ್ಲಿ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಸಹಕರಿಸಿದ ಇಂಡಿಯಾ ಫ್ರೆಟರ್ನಿಟಿ ಫೋರಂ (IFF)ಸಂಸ್ಥೆಗೆ ಸಬಿಯಾ ಜನರಲ್ ಹಾಸ್ಪಟಲ್ ಜಿಝಾನ್ ವಲಯ ಇದರ ಪ್ರಧಾನ ಕಾರ್ಯನಿರ್ವಾಹಕರಾದ ಗಾಲಿಬ್ ಹೂದಾನ್ ರವರು ಗೌರವಪೂರ್ವಕವಾಗಿ ಪ್ರಮಾಣ ಪತ್ರ ಹಸ್ತಾಂತರಿಸಿದರು.
