ರಾಷ್ಟ್ರೀಯ ಸುದ್ದಿ

ಪಿಎಂ ಕೇರ್ಸ್ ಫಂಡ್‌ನಿಂದ ಖರೀದಿಸಿದ ವೆಂಟಿಲೇಟರ್‌ ಕಳಪೆ; ಆರೋಗ್ಯ ಇಲಾಖೆಯ ತಾಂತ್ರಿಕ ಸಮಿತಿ ನಡೆಸಿದ ಪರೀಕ್ಷೆಯಲ್ಲಿ ಫೇಲ್

ವರದಿಗಾರ (ಆ.22): ಪಿಎಂ ಕೇರ್ಸ್‌ ಫಂಡ್‌ನಿಂದ ಖರೀದಿಸಿದ ವೆಂಟಿಲೇಟರ್‌ಗಳು ಗುಣಮಟ್ಟ ಹೊಂದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಆರೋಗ್ಯ ಸಚಿವಾಲಯದ ತಾಂತ್ರಿಕ ಸಮಿತಿ ನಡೆಸಿದ ಪರೀಕ್ಷೆಗಳಲ್ಲಿ ಈ ವೆಂಟಿಲೇಟರ್‌ಗಳು ವಿಫಲವಾಗಿವೆ.
ಪಿಎಂ ಕೇರ್ಸ್‌ ಫಂಡ್‌ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಅದನ್ನು ಪುಷ್ಟೀಕರಿಸುವಂತೆ ಕಳಪೆ ವೆಂಟಿಲೇಟರ್‌ ಖರೀದಿಸಿರುವುದು ದೃಢಪಟ್ಟಿದೆ. ತಜ್ಞರನ್ನು ಒಳಗೊಂಡ ತಾಂತ್ರಿಕ ಸಮಿತಿ ನಡೆಸಿದ ಪರೀಕ್ಷೆಯಲ್ಲಿ ವೆಂಟಿಲೇಟರ್‌ ನಿರ್ದಿಷ್ಟ ಸಾಮರ್ಥ ಹೊಂದಿಲ್ಲ ಎಂಬುದು ಬೆಳಕಿಗೆ ಬಂದಿದೆ.

ಎಐಸಿಸಿ ಮಾಧ್ಯಮ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಈ ವಿಷಯವನ್ನು ಮುಂದಿಟ್ಟು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ
ನಿಮಗೆ ಗೊತ್ತಾ, ಪಿಎಂ ಕೇರ್ಸ್‌ ಫಂಡ್‌ ಬಗ್ಗೆ ಪ್ರಶ್ನೆ ಕೇಳುವುದು ರಾಷ್ಟ್ರ ವಿರೋಧಿ. ಆದ್ದರಿಂದ ಸಾರ್ವಜನಿಕ ಹಣದಿಂದ ಖರೀದಿಸಿದ ವೆಂಟಿಲೇಟರ್‌ಗಳು ವಿಫಲವಾಗಿವೆ. ವೆಂಟಿಲೇಟರ್‌ಗಳಿಗೆ ಮುಂಗಡವಾಗಿ ಮತ್ತೆ ಕೋಟ್ಯಂತರ ರೂಪಾಯಿ ಪಾವತಿಸಲಾಗುತ್ತಿದೆ. ಅದಕ್ಕಿಂತ ಹೆಚ್ಚಾಗಿ ಸಿಎಜಿ ಆಡಿಟ್ ಕೂಡ ನಡೆಸುವಂತಿಲ್ಲ ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಹೇಳಿದೆ ? ಎಂದು ಸುರ್ಜೇವಾಲಾ ವ್ಯಂಗ್ಯವಾಡಿದ್ದಾರೆ.

ಆರೋಗ್ಯ ಸಚಿವಾಲಯವು ವೆಂಟಿಲೇಟರ್‌ಗಳನ್ನು ಖರೀದಿಸಿದ ಕಂಪನಿಗಳಿಗೆ 22 ಕೋಟಿ ರೂ.ಗಳ ಮುಂಗಡ ಹಣವನ್ನು ಪಾವತಿಸಿದೆ ಎಂದು ಸುರ್ಜೆವಾಲಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group