ರಾಷ್ಟ್ರೀಯ ಸುದ್ದಿ

ಕೊರೋನಾ, ಲಾಕ್ ಡೌನ್ ನಿಂದ ಭಾರತದಲ್ಲಿ ಉದ್ಯೋಗ ಕಳೆದುಕೊಂಡವರು ಬರೊಬ್ಬರಿ 12.2 ಕೋಟಿ!!

ಇನ್ನೂ ಹೆಚ್ಚಾಗ್ತಿದೆ ದೇಶಲ್ಲಿ ಕೋವಿಡ್ ಪ್ರಕರಣಗಳು

ವರದಿಗಾರ (ಆ.22): ಕೊರೊನಾ ಮತ್ತು ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ಸುಮಾರು 12.2 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಕೊರೊನಾ ಸೋಂಕಿನಿಂದ ಭಾರತಕ್ಕಿಂತ ಇತರ ದೇಶಗಳು ಹೆಚ್ಚು ತತ್ತರಿಸಿವೆ. ಆದಾಗ್ಯೂ, ಭಾರತದ ನಿರುದ್ಯೋಗ ದರ ಮಾತ್ರ ಇತರ ರಾಷ್ಟ್ರಗಳಿಗಿಂತ ಹೆಚ್ಚಾಗಿದೆ. ವಿಶೇಷವಾಗಿ ಮೆಟ್ರೋಪಾಲಿಟನ್ ನಗರಗಳಲ್ಲಿ ಉದ್ಯೋಗ ನಷ್ಟ ಶೇಕಡಾ 27.1ರಷ್ಟು ಏರಿಕೆ ಕಂಡಿದೆ.
ಕೋವಿಡ್ -19ನಿಂದ ಭಾರತ ಮಾತ್ರವಲ್ಲ ಅಮೆರಿಕ ಕೂಡ ಬಾಧಿತವಾಗಿದೆ. ಅಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ಕೊರೊನಾ ಸೋಂಕು ದೃಢಪಟ್ಟಿದೆ. ಆದರೂ ಅಲ್ಲಿ ಇಷ್ಟು ಪ್ರಮಾಣದ ನಿರುದ್ಯೋಗ ಕಂಡುಬಂದಿಲ್ಲ.
ಭಾರತದಲ್ಲಿ ಕೋವಿಡ್‌-19ನಿಂದಾಗಿ ಸುಮಾರು 12.2 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ -ಎಂಎಸ್‌ಎಂಇ ಮತ್ತು ಅಸಂಘಟಿತ ವಲಯದಲ್ಲಿದ್ದವರು ಅತಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ.

ಲಕ್ಷಾಂತರ ವಲಸೆ ಕಾರ್ಮಿಕರು ಲಾಕ್‌ಡೌನ್‌ ನಿಂದಾಗಿ ತಮ್ಮ ಮನೆಗಳಿಗೆ ತೆರಳಲಾಗದೆ ಸಂಕಷ್ಟಕ್ಕೀಡಾಗಿದ್ದರು. ಉದ್ಯೋಗ ಕಳೆದುಕೊಂಡ 12.2 ಕೋಟಿ ಜನರಲ್ಲಿ ಶೇಕಡಾ 75ರಷ್ಟು ಮಂದಿ ಸಣ್ಣ ವ್ಯಾಪಾರಿಗಳು ಮತ್ತು ದಿನ ಕೂಲಿ ಕಾರ್ಮಿಕರಾಗಿದ್ದಾರೆ. ಆಹಾರ ಸೇವೆ, ಟ್ರಾವೆಲ್‌, ರಿಟೈಲ್, ಮನರಂಜನೆ, ಫಿಟ್ನೆಸ್, ರಿಯಲ್ ಎಸ್ಟೇಟ್ ಕ್ಷೇತ್ರಗಳು ಕೊರೊನಾದಿಂದಾಗಿ ಅತಿ ಹೆಚ್ಚಿನ ನಷ್ಟ ಅನುಭವಿಸಿದೆ.

ಕೊರೊನಾ ಸಾಂಕ್ರಾಮಿಕದಿಂದಾಗಿ ಪ್ರತಿ ವಲಯದಲ್ಲೂ ಉದ್ಯೋಗ ನಷ್ಟ ಉಂಟಾಗಿದೆ. ಲಾಕ್‌ಡೌನ್‌ನಿಂದಾಗಿ ಅನೇಕ ಉದ್ಯಮಗಳು ನಷ್ಟದಲ್ಲಿರುವುದರಿಂದ ಈಗಾಗಲೇ ಕೆಲಸಕ್ಕೆ ಹೋಗುತ್ತಿರುವ 60 ಕೋಟಿ ಜನರ ಪೈಕಿ 6 ಕೋಟಿ ಭಾರತೀಯರು (ಅಥವಾ 10ರಲ್ಲಿ ಒಬ್ಬರು) ಭಾರತದಲ್ಲಿ ಉದ್ಯೋಗ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಬಹುತೇಕ ಕಂಪನಿಗಳು ಮನೆಯಲ್ಲೇ ಕೆಲಸ ಮಾಡುವಂತೆ ತಮ್ಮ ಸಿಬ್ಬಂದಿಗೆ ಸೂಚಿಸುತ್ತಿದ್ದು, ಅರ್ಧ ವೇತನ ಪಾವತಿಸುತ್ತಿದೆ. ಹೊಸ ನೇಮಕಾತಿ ಬಹುತೇಕ ಸ್ಥಗಿತಗೊಂಡಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದೇಶದ ಆರ್ಥಿಕತೆ ಇನ್ನಷ್ಟು ಕುಸಿತ ಕಾಣುವುದು ನಿಶ್ಚಿತ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group