ರಾಷ್ಟ್ರೀಯ ಸುದ್ದಿ

ರಫೇಲ್ ವಿಮಾನ ಖರೀದಿ ಒಪ್ಪಂದದ ಮತ್ತೊಂದು ಹುಳುಕು ಬೆಳಕಿಗೆ; ಕೇಂದ್ರದ ವಿರುದ್ಧ ರಾಹುಲ್ ಮತ್ತೆ ವಾಗ್ದಾಳಿ

ವರದಿಗಾರ (ಆ.22): ವಿವಾದಿತ ರಫೇಲ್ ವಿಮಾನ ಖರೀದಿ ಒಪ್ಪಂದ ಕುರಿತ ಲೋಪಗಳು ಒಂದೊಂದಾಗಿ ಹೊರ ಬರುತ್ತಿವೆ.

ಫ್ರೆಂಚ್ ಕಂಪನಿಯಿಂದ ಖರೀದಿಸಿದ ರಫೇಲ್ ವಿಮಾನಕ್ಕೆ ಸಂಬಂಧಿಸಿದ ಆಫ್‌ಸೆಟ್ ಒಪ್ಪಂದಗಳ ಬಗ್ಗೆ ರಕ್ಷಣಾ ಕುರಿತ ಮಹಾಲೆಕ್ಕಪರಿಶೋಧಕರ -ಸಿಎಜಿ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲವಿರುವುದು ಇದೀಗ ಬೆಳಕಿಗೆ ಬಂದಿದೆ. ಈ ವರದಿಯನ್ನು ಸರ್ಕಾರ ಇನ್ನೂ ಸಂಸತ್ತಿನ ಮುಂದೆ ಮಂಡಿಸಿಲ್ಲ.

ರಫೇಲ್‌ ಒಪ್ಪಂದದ ಬಗ್ಗೆ ರಕ್ಷಣಾ ಕುರಿತ ಮಹಾಲೆಕ್ಕಪರಿಶೋಧಕರು (ಸಿಎಜಿ), ಆಫ್‌ಸೆಟ್ ಒಪ್ಪಂದಗಳ ಬಗ್ಗೆ ತನ್ನ ಕಾರ್ಯಕ್ಷಮತೆ ಲೆಕ್ಕಪರಿಶೋಧನಾ ವರದಿಯನ್ನು ಎಂಟು ತಿಂಗಳ ಹಿಂದೆ ಸರ್ಕಾರಕ್ಕೆ ಸಲ್ಲಿಸಿತ್ತು.

ರಫೇಲ್ ಆಫ್‌ಸೆಟ್ ವ್ಯವಹಾರಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಆಡಿಟರ್‌ಗೆ ನೀಡಲು ರಕ್ಷಣಾ ಸಚಿವಾಲಯ (ಎಂಒಡಿ) ನಿರಾಕರಿಸಿದೆ.

ಫ್ರಾನ್ಸ್‌ನ ರಫೇಲ್‌ ತಯಾರಕ ಸಂಸ್ಥೆಯಾದ ಡಸಾಲ್ಟ್ ಏವಿಯೇಷನ್, ತನ್ನ ಆಫ್‌ಸೆಟ್ ಪಾಲುದಾರರ ಯಾವುದೇ ವಿವರಗಳನ್ನು ಒಪ್ಪಂದದ ಮೂರು ವರ್ಷಗಳ ನಂತರ ಮಾತ್ರ ಹಂಚಿಕೊಳ್ಳುವುದಾಗಿ ಹೇಳಿದೆ ಎಂದು ರಕ್ಷಣಾ ಸಚಿವಾಲಯ,ಲೆಕ್ಕಪರಿಶೋಧಕರಿಗೆ ತಿಳಿಸಿದೆ.

ಈ ವಿಷಯವನ್ನು ಮುಂದಿಟ್ಟು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಮತ್ತೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಫೇಲ್ ವಿಮಾನದ ಹೆಸರಿನಲ್ಲಿ ದೇಶದ ಖಜಾನೆಯಿಂದ ಹಣ ಲೂಟಿ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ನೇರ ಆರೋಪ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ರಫೇಲ್‌ ಹೆಸರಿನಲ್ಲಿ ಭಾರತೀಯ ಬೊಕ್ಕಸದಿಂದ ಹಣ ಕಳವು ಮಾಡಲಾಗಿದೆ ಎಂದು ಆಪಾದಿಸಿದ್ದಾರೆ.

ಫ್ರೆಂಚ್ ಕಂಪನಿ  ಡಸಾಲ್ಟ್ ಏವಿಯೇಷನ್‌ನಿಂದ ಖರೀದಿಸಿದ ರಫೇಲ್ ವಿಮಾನಕ್ಕೆ ಸಂಬಂಧಿಸಿ ಸರ್ಕಾರಕ್ಕೆ ಸಲ್ಲಿಸಲಾಗಿರುವ ರಕ್ಷಣಾ ಆಫ್‌ಸೆಟ್ ಒಪ್ಪಂದಗಳ ಕುರಿತಾದ  ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಕಾರ್ಯಕ್ಷಮತೆಯ ಲೆಕ್ಕಪರಿಶೋಧನಾ ವರದಿಯಲ್ಲಿ ಯಾವುದೇ  ಆಫ್‌ ಸೆಟ್ ಒಪ್ಪಂದಗಳ ಬಗ್ಗೆ ಪ್ರಸ್ತಾಪವಿಲ್ಲ ಎಂಬುದರ ಕುರಿತು ವರದಿಯಾದ ಸುದ್ದಿಯನ್ನು ಅವರು ಟ್ವೀಟ್ ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ರಫೇಲ್ ಆಫ್‌ಸೆಟ್ ವ್ಯವಹಾರಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಆಡಿಟರ್‌ಗೆ ನೀಡಲು ರಕ್ಷಣಾ ಸಚಿವಾಲಯ (ಎಂಒಡಿ) ನಿರಾಕರಿಸಿದೆ ಎಂದು ಆ ಸುದ್ದಿಯಲ್ಲಿ ವರದಿಯಾಗಿದೆ.

ಈ ಸಂದರ್ಭದಲ್ಲಿ, ರಾಹುಲ್ ಗಾಂಧಿಯವರು ಮಹಾತ್ಮ ಗಾಂಧಿಯವರ “ಸತ್ಯವು  ಒಂದು, ಮಾರ್ಗಗಳು ಹಲವು, ಎಂಬ ನುಡಿಯನ್ನು ಉಲ್ಲೇಖಿಸಿದ್ದು, ಈ ಒಪ್ಪಂದದಲ್ಲಿ ಸತ್ಯವು ಅಂತಿಮವಾಗಿ ಬೆಳಕಿಗೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎ ಸರ್ಕಾರದ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದು, ಈ ಒಪ್ಪಂದದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group