ವರದಿಗಾರ-ಅಹಮದಾಬಾದ್: ಗುಜರಾತಿನ ಪಾಟೀದಾರ್ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಹಾಗೂ ಆತನ ಸಹಚರ ದಿನೇಶ್ ಬಂಭಾನಿಯನ್ನು ದರೋಡೆ, ಬೆದರಿಕೆ ಹಾಗೂ ಹಲ್ಲೆ ಪ್ರಕರಣದ ಆರೋಪದಲ್ಲಿ ಅಹಮದಾಬಾದ್ ಕ್ರೈಂ ಬ್ರಾಂಚಿನಿಂದ ಆನಂದ್ ಜಿಲ್ಲೆಯ ಚಿಕೋಡ್ರಾ ಚೌಕಡಿಯಲ್ಲಿ ಬಂಧನಕ್ಕೊಳಗಾಗಿದ್ದಾರೆ.
ಮೆಹ್ಸಾನಾ ನಗರದ ನರೇಂದ್ರ ಪಟೇಲ್ ಎನ್ನುವವರ ದೂರಿನ ಪ್ರಕಾರ, ಹಾರ್ದಿಕ್ ಪಟೇಲ್ ತನ್ನ ಸಹಚರರೊಂದಿಗೆ ಪಟಾನ್ ನಲ್ಲಿ ಈ ಹಿಂದೆ ಮೃತಪಟ್ಟಿದ್ದ ಪಾಟೀದಾರರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಂದಿದ್ದರು. ಆಲ್ಲಿ ಹಾರ್ದಿಕ್ ಪಟೇಲ್ ಹಾಗೂ ದಿಲೀಪ್ ಸಾವೆಲಿಯ ಎಂಬವರ ಮಧ್ಯೆ ಸಣ್ಣ ವಿಷಯವೊಂದರಲ್ಲಿ ಜಗಳ ಉಂಟಾಯಿತು. ಹಾರ್ದಿಕ್ ಪಟೇಲ್ ಸಹಚರರು ದಿಲೀಪ್ ನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಆತನ ಚಿನ್ನದ ಸರವನ್ನು ದೋಚಿ, ಬೆದರಿಕೆಯೊಡ್ಡಿದ್ದಾರೆ ಎಂದು ನರೇಂದ್ರ ಆರೋಪಿಸಿದ್ದಾರೆ.
