ವರದಿಗಾರ-ದೆಹಲಿ: ಜಗತ್ತಿನ ಮುಂದೆ ಭಾರತವನ್ನು ತಲೆತಗ್ಗಿಸುವಂತೆ ಮಾಡಿದ 2002 ರ ಗುಜರಾತ್ ಗಲಭೆಯಲ್ಲಿ ದ್ವಂಸಗೊಂಡ ಮಸೀದಿಗಳ ಪುನರ್ ನಿರ್ಮಾಣದ ಖರ್ಚನ್ನು ಗುಜರಾತ್ ಸರಕಾರ ವಹಿಸಬೇಕೇ ಎನ್ನುವುದರ ಬಗ್ಗೆ ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ.
14 ವರ್ಷಗಳ ಸುದೀರ್ಘ ಕಾನೂನು ಸಮರದ ಬಳಿಕ ಇಂದು ಬೆಳಿಗ್ಗೆ 10:30ಕ್ಕೆ ಸುಪ್ರೀಂ ಕೋರ್ಟ್ ತನ್ನ ತೀರ್ಪು ಪ್ರಕಟಿಸಲಿದೆ.
2002 ರ ಗಲಭೆಯಲ್ಲಿ ದ್ವಂಸಗೊಂಡ 535 ಮಸೀದಿಗಳ ನವೀಕರಣದ ಖರ್ಚನ್ನು ಗುಜರಾತ್ ಸರಕಾರ ವಹಿಸಬೇಕೆಂದು ಕೋರಿ 2003 ರಲ್ಲಿ ಇಸ್ಲಾಮಿಕ್ ರಿಲೀಫ್ ಕಮಿಟಿ – ಗುಜರಾತ್(IRCG) ರಾಜ್ಯದ ಉಚ್ಚ ನ್ಯಾಯಾಲಯದ ಬಾಗಿಲು ತಟ್ಟಿತ್ತು. ರಾಜ್ಯದ ಜನರ ಆಸ್ತಿಯನ್ನು ಕಾಪಾಡುವುದು ರಾಜ್ಯ ಸರಕಾರದ ಕರ್ತವ್ಯ, ಆದರೆ ಸರಕಾರವು ಆರಾಧನಾಲಯಗಳನ್ನು ರಕ್ಷಿಸುವುದರಲ್ಲಿ ವಿಫಲವಾಗಿದೆ ಎಂದು ಕಮಿಟಿ ವಾದಿಸಿತ್ತು. ಆದರೆ, ನರೇಂದ್ರ ಮೋದಿ ನೇತೃತ್ವದ ಅಂದಿನ ಸರಕಾರವು, ಧಾರ್ಮಿಕ ಕಟ್ಟಡಗಳ ಮರುನಿರ್ಮಾಣ ಜಾತ್ಯತೀತ ಸರಕಾರದ ಜವಾಬ್ದಾರಿಯಲ್ಲವೆಂದು ವಾದಿಸಿತ್ತು.
