ಅನಿವಾಸಿ ಕನ್ನಡಿಗರ ವಿಶೇಷ

ಸಂಕಷ್ಟಕ್ಕೊಳಗಾದ ಅನಿವಾಸಿ ಕನ್ನಡಿಗರ ಪಾಲಿಗೆ ಆಸರೆಯಾದ ಕೆಸಿಎಫ್

ಮಂಗಳೂರು ತಲುಪಿದ ಕೆಸಿಎಫ್ ಒಮಾನ್ ಪ್ರಥಮ ಚಾರ್ಟಡ್ ಪ್ಲೈಟ್

ವರದಿಗಾರ (ಜು.26): ಕೋವಿಡ್-19 ಕೊರೋನ ವೈರಸ್ ಹಿನ್ನಲೆ ವಿಮಾನಗಳು ರದ್ದಾಗಿ, ಹಲವಾರು ಕನ್ನಡಿಗರು ಅತ್ತ ಊರಿಗೂ ತೆರಳಲಾಗದ, ಇದ್ದ ಕೆಲಸವನ್ನೂ ಕಳೆದುಕೊಂಡು ಸಂಕಷ್ಟಪಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕೆಸಿಎಫ್ ಒಮಾನ್ ಪ್ರಯೋಜಕತ್ವದಲ್ಲಿ ಇಂಡಿಗೋ ವಿಮಾನವು ನಿನ್ನೆ (ಜು.25)ರಂದು ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಿದೆ.

ಅನಿವಾಸಿ ಕನ್ನಡಿಗ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ವತಿಯಿಂದ ಆಯೋಜಿಸಿದ ಪ್ರಪ್ರಥಮ  ಚಾರ್ಟಡ್ ವಿಮಾನ, ಪ್ರಯಾಣಿಕರು ಇದರ ಪ್ರಯೋಜನ ಪಡೆದಿದ್ದು, ಸಂಕಷ್ಟದಲ್ಲಿರುವ ನೂರಾರು ಕನ್ನಡಿಗರ ಪಾಲಿಗೆ ಬಹುದೊಡ್ಡ ಆಸರೆಯಾಗಿ ಮೂಡಿತು.

ಅನಾರೋಗ್ಯಕ್ಕೊಳಗಾದವರು, ಗರ್ಭಿಣಿಯರು, ಸಣ್ಣಮಕ್ಕಳು, ವೀಸಾ ಕಾಲಾವದಿ ಮುಗಿದವರು, ಉದ್ಯೋಗ ಕಳೆದುಕೊಂಡವರು ಇತ್ಯಾದಿ, ವಿಭಿನ್ನ ರೀತಿಯ ಸಂತ್ರಸ್ತರನ್ನೊಳಗೊಂಡ ಪ್ರಯಾಣಿಕರು ಈ ಮೂಲಕ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲು ಕೆಸಿಎಫ್ ತನ್ನ ಸೇವೆಯನ್ನು ನೀಡುವ ಮೂಲಕ ಮಾದರಿಯಾಗಿದೆ.

ಯಾತ್ರೆಯ ನೊಂದಾವಣಿಯಿಂದ ಪ್ರಾರಂಭಿಸಿ, ಅಗತ್ಯ ದಾಖಲೆಗಳು ಮತ್ತು ಪಾಲಿಸಬೇಕಾದ ಆರೋಗ್ಯ ಸಂಬಂಧಿತ ಸಂಪೂರ್ಣ ಮಾಹಿತಿಯನ್ನು, ಕೆಸಿಎಫ್ ಪ್ರತೀ ಪ್ರಯಾಣಿಕರಿಗೆ ನೀಡಿದ್ದು, ಮಹಾಮಾರಿ ಕೊರೋನಾ ಹರಡುವಿಕೆಯ ಮುನ್ನೆಚ್ಚರಿಕೆಯಾಗಿ ಪ್ರಯಾಣದ ಸಂದರ್ಭದಲ್ಲಿ ಧರಿಸಬೇಕಾದ ಸಂಪೂರ್ಣ ಸುರಕ್ಷಾ ಕವಚ (PPE kit) ಮತ್ತು ಲಘು ಉಪಹಾರವು ಸಂಘಟನೆಯ ಕಲ್ಪಿಸಿದೆ.

ತನ್ನ ಪ್ರಯಾಣಿಕರ ಸುರಕ್ಷೆ ಮತ್ತು ಉತ್ತಮ ಸೇವೆಯ ಉದ್ದೇಶವನ್ನಿಟ್ಟುಕೊಂಡು ಪ್ರತೀಯೋರ್ವರೊಂದಿಗೆ ಸಂಘಟನೆಯ ಕಾರ್ಯಕರ್ತರು ನಿರಂತರ ಸಂಪರ್ಕದಲ್ಲಿದ್ದು, ಕ್ವಾರಂಟೈನ್ ಮುಗಿಸಿ ಮನೆ ಸೇರುವವರೆಗೂ ಈ ಪ್ರಕ್ರಿಯೆ ಮುಂದುವರಿಯಲಿದೆ. ಇಂತಹ ಹಲವಾರು ಸಮಾಜಮುಖಿ ಚಟುವಟಿಕೆಗಳ ಮುಖಾಂತರ ಕೆಸಿಎಫ್, ಸಾರ್ವಜನಿಕ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಪ್ರಸ್ತುತ ಚಾರ್ಟರ್ ವಿಮಾನದ ವ್ಯವಸ್ಥೆ ಮತ್ತು ಅರ್ಪಣಾ ಮನೋಭಾವ ಹೊಂದಿರುವ ಕಾರ್ಯಕರ್ತರ ಸೇವಾ ವೈಖರಿಯು ಪ್ರಯಾಣಿಕರ ಪ್ರಶಂಸೆಗೆ ಪಾತ್ರವಾಗಿದೆ.

ಕೆಸಿಎಫ್ ಆಯೋಜಿಸಿದ ಚಾರ್ಟರ್ ವಿಮಾನದ ಯಶಸ್ವಿಯಲ್ಲಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್, ಕೇಂದ್ರ ಮತ್ತು ರಾಜ್ಯ ಸರಕಾರಗಳು ಮತ್ತು ಒಮಾನ್ ಭಾರತೀಯ ರಾಯಭಾರ ಕಚೇರಿಯ ಸಹಕಾರವನ್ನು ನೆನಪಿಸಿಕೊಳ್ಳುತ್ತಾ, ಅಗತ್ಯವಿರುವ ಸರ್ಕಾರೀ ಅನುಮತಿಯನ್ನು ಪಡೆಯುವಲ್ಲಿ ಸಹಕರಿಸಿದ, ದ.ಕ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್, ಕರ್ನಾಟಕ ಮುಸ್ಲಿಂ ಜಮಾ ಅತ್ ಮತ್ತು ಕೆಸಿಎಫ್ ಅಂತರಾಷ್ಟ್ರೀಯ ನಾಯಕರಿಗೆ ಹಾಗೂ ಇಂಡಿಗೋ ವ್ಯವಸ್ಥಾಪಕರಿಗೂ , ಸಹಕರಿಸಿದ ಎಲ್ಲರಿಗೂ ಕೆಸಿಎಫ್ ತನ್ನ ಪ್ರಕಟಣೆಯಲ್ಲಿ ಕೃತಜ್ಞತೆ ಸಲ್ಲಿಸಿದೆ.

ಈ ಸಂದರ್ಭ KCF ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೊಡಿ,  ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ, ಕೋಶಾಧಿಕಾರಿ ಆರಿಫ್ ಕೋಡಿ ಹಾಗೂ ಕೆಸಿಎಫ್ ಒಮಾನ್ ಚಾರ್ಟರ್ಡ್ ಫ್ಲೈಟ್ ಉಸ್ತುವಾರಿ  ಸಯ್ಯದ್ ಆಬಿದ್ ಅಲ್ ಹೈದ್ರೋಸಿ ಕೊಡಗು,  KCF ಅಂತರಾಷ್ಟ್ರೀಯ ಸಮಿತಿ ನಾಯಕರಾದ ಉಮರ್ ಸಖಾಫಿ ಮಿತ್ತೂರು, ಇಕ್ಬಾಲ್ ಬೊಲ್ಮಾರ್ ಬರ್ಕ , ಕೆಸಿಎಫ್ ಒಮಾನ್ ಚಾರ್ಟರ್ಡ್ ಫ್ಲೈಟ್ ಕ್ಯಾಪ್ಟನ್ ಹಂಝ ಹಾಜಿ ಕನ್ನಂಗಾರ್ ,ಕಾರ್ಯದರ್ಶಿ ಇರ್ಫಾನ್ ಕೂರ್ನಡ್ಕ, ಸಂಶುದ್ದೀನ್ ಪಾಲ್ತಡ್ಕ, ವಾಲಿಯಂಟಿಯರ್ ಲೀಡರ್  ಬಾಷ ತೀರ್ಥಹಳ್ಳಿ ನಿಝ್ವ, ಸಾಂತ್ವನ ವಿಭಾಗದ ಅಧ್ಯಕ್ಷರಾದ ಅತ್ರಾಡಿ ಇಬ್ರಾಹಿಮ್ ಹಾಜಿ , ಕಾರ್ಯದರ್ಶಿ ಇಕ್ಬಾಲ್ ಎರ್ಮಾಲ್, ಶಿಕ್ಷಣ ವಿಭಾಗದ ಅಧ್ಯಕ್ಷರಾದ ಉಬೈದುಲ್ಲಾ ಸಖಾಫಿ,ಮೀಡಿಯಾ ವಿಭಾಗದ ಅಧ್ಯಕ್ಷರಾದ ಖಾಸಿಂ ಹಾಜಿ,ಸಿದ್ದೀಕ್ ಮಾಂಬ್ಲಿ ಸುಳ್ಯ, ಪಬ್ಲಿಷಿಂಗ್ ವಿಭಾಗದ ಅಧ್ಯಕ್ಷರಾದ ಶಮೀರ್ ಉಸ್ತಾದ್ ಹೂಡೆ, KCF ಒಮಾನ್  ರಾಷ್ಟ್ರೀಯ ಸಮಿತಿಯ ಸದಸ್ಯರಾದ  ಹನೀಫ್ ಸಅದಿ, ಝಬೈರ್ ಸಅದಿ ಪಾಟ್ರಕೋಡಿ, ಹಾರಿಸ್ ಕೊಡಗು ಹಾಗೂ  ನವಾಝ್ ಮನಿಪುರ, ಹುಸೈನ್ ತೀರ್ಥಹಳ್ಳಿ ನಿಝ್ವ, ಸಲೀಮ್ ಮಿಸ್ಬಾಯಿ,ಕಲಂದರ್ ಬಾವ ಮುಂತಾದ ನಾಯಕರು ಉಪಸ್ಥಿತರಿದ್ದರು.

ವಿಮಾನವು ಮಂಗಳೂರಿಗೆ ತಲುಪಿದೊಡನೆ ಪ್ರಯಾಣಿಕರ ಎಲ್ಲ ರೀತಿಯ ಸೇವೆಗಳ ಉಸ್ತುವಾರಿ ವಹಿಸಿಕೊಂಡು ಸದಾ ಕಾರ್ಯನಿರತರಾಗಿರುವ ರಾಜ್ಯ ಸುನ್ನೀ ನಾಯಕರಾದ ಅಬ್ದುಲ್ ಹಮೀದ್ ಬಜ್ಪೆ, ಅಶ್ರಫ್ ಕಿನಾರ,ಅಬ್ದುಲ್ ರಹಮಾನ್ ಮೊಗರ್ಪಣೆ ಸುಳ್ಯ, ನವಾಝ್ ಸಖಾಫಿ, ಜಬ್ಬಾರ್ ಕಣ್ಣೂರು ಇವರಿಗೆ  ಮತ್ತು ಲಗೇಜುಗಳನ್ನು  ಸ್ವತಃ ಹೆಗಲಮೇಲೇರಿಸಿ  ಹೋಟೆಲ್ ಗಳಿಗೆ ಸಾಗಿಸುವುದರಿಂದ ಹಿಡಿದು ಕ್ವಾರಂಟೈನ್ ಸಮಯದುದ್ದಕ್ಕೂ ಪ್ರಯಾಣಿಕರ ಎಲ್ಲಾ ಅಗತ್ಯತೆಗಳನ್ನು ಕೇಳಿ ತಿಳಿದುಕೊಂಡು ಪರಿಹರಿಸುತ್ತಾ ನಿಸ್ವಾರ್ಥ ಸೇವೆಯಲ್ಲಿ ನಿರತರಾಗಿರುವ SSF ,SYS ನಾಯಕರು ಹಾಗೂ ಅವಿಶ್ರಾಂತ ಕಾರ್ಯಾಚರಣೆ ಮೂಲಕ ಈ ಧ್ಯೇಯವನ್ನು ಸಾಧಿಸುವಲ್ಲಿ ದುಡಿದ ಸಂಘಟನೆಯ ಎಲ್ಲಾ ಕಾರ್ಯಕರ್ತರಿಗೆ  ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯು  ಮನತುಂಬಿ ಅಭಿನಂದನೆ ಸಲ್ಲಿಸುತ್ತಿದೆ ಎಂದು KCF ಒಮಾನ್ ನಾಯಕರು ತಿಳಿಸಿರುತ್ತಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group