ರಾಷ್ಟ್ರೀಯ ಸುದ್ದಿ

ರಕ್ಷಣಾ ಸಚಿವರ ಹೇಳಿಕೆಯು ಕೇವಲ ವಾಕ್ಚಾತುರ್ಯವಷ್ಟೆ: ಪಿ.ಚಿದಂಬರಂ

ದೇಶದ ಒಂದಿಂಚು ಭೂಮಿಯನ್ನು ಯಾರಿಗೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ರಕ್ಷಣಾ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ

‘ವಾಸ್ತವವನ್ನು ಒಪ್ಪಿಕೊಳ್ಳುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು’

ವರದಿಗಾರ (ಜು.19): “ಭಾರತದ ಭೂಪ್ರದೇಶದ ಒಂದಿಂಚೂ ಕೂಡ ವಶಪಡಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ” ಎಂಬ ಕೇಂದ್ರ ರಕ್ಷಣಾ ಸಚಿವ ಹೇಳಿಕೆಯು ಕೇವಲ ‘ವಾಕ್ಚಾತುರ್ಯ’ವಷ್ಟೇ ಎಂದು ಕಾಂಗ್ರೆಸ್ ಪಕ್ಷದ ನಾಯಕ ಪಿ.ಚಿದಂಬರಂ ಪ್ರತಿಕ್ರಿಯಿಸಿದ್ದಾರೆ.

‘ಎಲ್‌ಎಸಿಯ ಭಾರತದ ಭಾಗದ 1.5 ಕಿ.ಮೀ ದೂರದಲ್ಲಿ ಚೀನಾದ ಸೈನ್ಯವು ಇನ್ನೂ ಇದೆ ಎಂದು ಭಾರತದ ಭದ್ರತಾ ಸಂಸ್ಥೆಗಳು ಅಂದಾಜಿಸಿವೆ (ಭಾರತದ ಗ್ರಹಿಕೆಗೆ ಅನುಗುಣವಾಗಿ). ಮೇ ತಿಂಗಳಲ್ಲಿ, ಚೀನಾದ ಸೈನ್ಯವು ನಮ್ಮ ಎಲ್‌ಎಸಿಯ ಬದಿಯಲ್ಲಿ 5 ಕಿ.ಮೀ.ವರೆಗೆ ಒಳನುಗ್ಗಿದೆ’ ಎಂದು ಪಿ.ಚಿದಂಬರಂ ಅವರು ಹೇಳಿಕೆ ನೀಡಿದ್ದಾರೆ.

‘ಭಾರತದ ಭೂಪ್ರದೇಶಕ್ಕೆ ಯೊರೊಬ್ಬರು ಒಳನುಗ್ಗಿಲ್ಲ ಮತ್ತು ಯಾರೂ ಕೂಡ ಭಾರತದ ಭೂಪ್ರದೇಶದೊಳಗೆ ಇಲ್ಲ’ ಎಂಬ ಎಲ್ಲಾ ಮಾತುಗಳು ಕೇವಲ ಖಾಲಿ ವಾಕ್ಚಾತುರ್ಯವಾಗಿವೆ. ಭಾರತದ ಭೂಪ್ರದೇಶದ ಒಂದು ಇಂಚನ್ನು ಕೂಡ ಯಾರು ಸ್ಪರ್ಶಿಸಲು ಸಾಧ್ಯವಿಲ್ಲ ಎನ್ನುವುದು ಹೆಚ್ಚಿನ ವಾಕ್ಚಾತುರ್ಯವಷ್ಟೇ ಎಂದು ತನ್ನ ಮತ್ತೊಂದು ಟ್ವೀಟ್ ನಲ್ಲಿ ಅವರು ಹೇಳಿಕೊಂಡಿದ್ದಾರೆ.

ವಾಸ್ತವವನ್ನು ಒಪ್ಪಿಕೊಳ್ಳುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು. ಇಲ್ಲದಿದ್ದರೆ ಯಥಾಸ್ಥಿತಿ ಕಾಪಾಡಿಕೊಳ್ಳುವ ಮೂಲಕ ವಾಸ್ತವ ನಿಯಂತ್ರಣ ರೇಖೆಯವರೆಗಿನ ಭೂಸ್ವಾಮ್ಯ ಪ್ರತಿಪಾದಿಸುವುದು ಕಷ್ಟವಾಗುತ್ತದೆ. ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂಬ ಆಶಯ ಈಡೇರಲು ವಾಸ್ತವ ಒಪ್ಪಿಕೊಳ್ಳುವುದು ಮುಖ್ಯ ಎಂದು ಚಿದಂಬರಂ ಕೇಂದ್ರ ಸರಕಾರಕ್ಕೆ ಸಲಹೆ ನೀಡುವ ಪ್ರಯತ್ನ ಮಾಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group