ಅನಿವಾಸಿ ಕನ್ನಡಿಗರ ವಿಶೇಷ

ಕತಾರ್: 2 ತಿಂಗಳಿನಿಂದ ಶವಗಾರದಲ್ಲಿದ್ದ ಶವವನ್ನು ಅಂತ್ಯ ಸಂಸ್ಕಾರಕ್ಕೆ ಸಹಕರಿಸಿದ QISF

ಧರ್ಮಗಳ ಗೋಡೆಯನ್ನು ದಾಟಿ ಮಾನವೀಯತೆಗೆ ಸಾಕ್ಷಿಯಾದ ಐ.ಎಸ್.ಎಫ್ ನ ಕಾರ್ಯ

ವರದಿಗಾರ(ಜು.03): ಹೊಟ್ಟೆಪಾಡಿಗಾಗಿ ಹಾಗೂ ಕುಟುಂಬಕ್ಕೆ ನೆರವಾಗಲು ಉದ್ಯೊಗ ಹುಡುಕಿಕೊಂಡು ಹೋಗಿ, ಕುಟುಂಬದ ಕಲ್ಯಾಣಕ್ಕಾಗಿ ದುಡಿಯುವ ಹಾಗೂ ಕೆಲಸದ ಒತ್ತಡದ ನಡುವೆಯೂ ಜಾತಿ ಭೇದ ಮರೆತು ಮಾನವೀಯ ಸೇವೆಗೆ ಸಾಕ್ಷಿಯಾದ ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ನ ಸೇವೆಯು ಮತ್ತೊಮ್ಮೆ ಪ್ರಶಂಸೆಗೆ ಕಾರಣವಾಗಿದೆ.

ದಿನಾಂಕ 24-04-2020 ರಂದು ಕತಾರಿನ ಕೈಗಾರಿಕ ಪ್ರದೇಶದಲ್ಲಿ ಟೆಕ್ನಿನಿಶೀಯನ್ ವೃತಿಯಲ್ಲಿದ್ದ ತಮಿಳುನಾಡಿನ ಪಡುಕೊಟೈ ಜಿಲ್ಲೆಯ ಸುಬ್ರಹ್ಮಣ್ಯಂ ರವರ ಪುತ್ರ ಸೆಲ್ವಂ (46 ವರ್ಷ) ಎಂಬುವರು ತನ್ನ ಉದ್ಯೋಗವನ್ನು ಕಳೆದುಕೊಂಡು ಮಾನಸಿಕ ಒತ್ತಡದಿಂದ ಕುಗ್ಗಿ, ತನ್ನ ವಾಸ ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ನಡೆದು ಎರಡು ತಿಂಗಳು ಕಳೆದರೂ ಶವಾಗಾರದಲ್ಲಿದ್ದ ಮೃತದೇಹವನ್ನು ಏನು ಮಾಡುವುದು? ಯಾರನ್ನು ಸಂಪರ್ಕಿಸುವುದು? ಎಂದು ತೋಚದೇ ಕಂಗಾಲಾಗಿದ್ದ ಮೃತ ಸೆಲ್ವಂ ರವರ ಕುಟುಂಬವು‌ ತಮಿಳುನಾಡಿನ SDPI ಕಛೇರಿಗೆ ವಿಷಯವನ್ನು ತಿಳಿಸಿದರು. SDPI ಪಕ್ಷದ ಕಾರ್ಯಕರ್ತರು QISF ನ ತಮಿಳುನಾಡು ಘಟಕದ ರಿಝ್ವಾನ್ ಎಂಬುವರಿಗೆ ಈ ಬಗ್ಗೆ ವಿಷಯವನ್ನು ತಿಳಿಸಿದರು.

ತಕ್ಷಣ ಕಾರ್ಯಪ್ರವೃತರಾದ ಕತಾರ್ ಇಂಡಿಯನ್ ಸೋಶಿಯಲ್ ಫೋರಂ ನ ಮಾನವೀಯ ಸೇವೆಯ (Humanitarian Team) ಮುಖ್ಯಸ್ಥರಾದ ಅಬ್ದುಲ್ ಲತೀಫ್ ಮಡಿಕೇರಿ‌ ಮತ್ತು QISF ನ ಪ್ರಧಾನ ಕಾರ್ಯದರ್ಶಿ ಬಶೀರ್ ಅಹಮದ್ ತಮಿಳುನಾಡು ಹಾಗೂ ರಿಝ್ವಾನ್ ತಮಿಳುನಾಡು ಇವರನ್ನು ಒಳಗೊಂಡ ಒಂದು ತಂಡವನ್ನು ರಚಿಸಿ, ಕಳೆದೆರಡು ತಿಂಗಳಿನಿಂದ ಮೃತದೇಹವನ್ನು ದಫನ್ ಮಾಡಲು ಉಂಟಾದ ಅಡೆತಡೆಗಳನ್ನು‌ ಅವಲೋಕಿಸಿ, ಅದರ ಬಗ್ಗೆ ಚರ್ಚಿಸಿ ಕೂಡಲೇ ಮುಂದಾದರು.

ಸೆಲ್ವಂ ಕುಟುಂಬ ಮತ್ತು QISF ನ ತೀರ್ಮಾನದ ಪ್ರಕಾರ, ಕತಾರ್ ನಲ್ಲೇ ದಫನ್ ಮಾಡಲು ಬೇಕಾದಂತಹ ಎಲ್ಲಾ ದಾಖಲೆಗಳನ್ನು ಊರಿನಿಂದ ತರಿಸಿ, ಸಂಸ್ಥೆಯ ಅಧಿಕಾರಿಗಳನ್ನು ಕಂಡು ಪೋಲಿಸ್ ಠಾಣೆ, ಆರೋಗ್ಯ ಇಲಾಖೆ, ಭಾರತೀಯ ರಾಯಭಾರಿ ಕಚೇರಿ ಹಾಗೂ ಹಮದ್ ಮೆಡಿಕಲ್ ಕಾರ್ಪೊರೇಷನಿಂದ ಬೇಕಾದಂತಹ ಎಲ್ಲಾ ದಾಖಲೆ ಪತ್ರಗಳನ್ನು ಸಂಗ್ರಹಿಸಿದರು.

ಊರಿನ ಕುಟುಂಬಸ್ಥರು ಮತ್ತು QISF ನ ಕಾರ್ಯಕರ್ತರು ವಾಟ್ಸ್ ಆಫ್ ಗ್ರೂಪ್ ರಚಿಸಿಕೊಂಡು, ಕೇವಲ ನಾಲ್ಕು ದಿನದಲ್ಲಿ ಎಲ್ಲಾ ಏರ್ಪಾಡುಗಳನ್ನು ಮಾಡಿ, ದಿನಾಂಕ 01-07-2020 ರ ಬುಧವಾರ ಬೆಳ್ಳಿಗ್ಗೆ 10 ಕ್ಕೆ ಕತಾರಿನ ದುಕಾನ್ ನಲ್ಲಿರುವ ಧಫನ ಭೂಮಿಯಲ್ಲಿ, QISF ಕಾರ್ಯಕರ್ತರಾದ ಅಬ್ದುಲ್ ಲತೀಫ್ ಮಡಿಕೇರಿ, ಖಾಲೀದ್ ಮೋಹಸೀನ್ ಮಂಗಳೂರು, ಬಾವಾ ಮೊಹಿಯುದ್ದೀನ್ ತಮಿಳುನಾಡು ಹಾಗೂ ಖಾಲೀದ್ ಕೇರಳ ರವರ ನೇತೃತ್ವದಲ್ಲಿ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲಾಯಿತು.

ಸಾಂಕ್ರಮಿಕ ರೋಗ ಕೊರೋನದ ನಡುವೆಯೂ, ಸಾಮಾಜಿಕ ಅಂತರ ಕಾಪಾಡುವ ಮೂಲಕ ಎಲ್ಲಾ ರೀತಿಯ ಮುನ್ನೆಚ್ಚರಿಕೆಯೊಂದಿಗೆ, ಕೇವಲ ಬೆರಳೆಣಿಕೆಯ ಕತಾರ್ ಇಂಡಿಯನ್ ಸೋಶಿಯಲ್ ಫೋರಂ ನ ಕಾರ್ಯಕರ್ತರನ್ನೊಳಗೊಂಡ ತಂಡವು ತಮ್ಮ ಮಾನವೀಯ ಸೇವೆಯನ್ನು ಪೂರ್ತಿಗೊಳಿಸಿದರು.

ಮರಣ ಹೊಂದಿದ ವ್ಯಕ್ತಿ ಕೆಲಸದಲ್ಲಿದ್ದ ಸಂಸ್ಥೆಯಿಂದ ಅವರಿಗೆ ಸೀಗಬೇಕಾಗಿದ್ದ ಸೇವಾ ಭತ್ಯೆಯ ಹಣ ಆದಷ್ಟು ಬೇಗ ಪಡೆಯಲು, ಕಂಪನಿಯ ಮುಖ್ಯಸ್ಥರೊಂದಿಗೆ ಮಾತನಾಡಿ ಕುಟುಂಬಕ್ಕೆ ತಲುಪಿಸುವುದಾಗಿ QISF ನ‌ ನಾಯಕರು ಭರವಸೆಯನ್ನು ನೀಡಿರುವುದಾಗಿ ತಿಳಿದು ಬಂದಿದೆ.

ಜಾತಿ, ಭೇದ, ವರ್ಣವನ್ನು ಲೆಕ್ಕಿಸದೇ, ಅಚ್ಚುಕಟ್ಟಾಗಿ ಮಾನವೀಯ ಸೇವೆಯಲ್ಲಿ ಕೈಜೋಡಿಸಿದ QISF ನ ಎಲ್ಲಾ ನಾಯಕರಿಗೂ ಹಾಗೂ ಸದಸ್ಯರಿಗೂ ಸೆಲ್ವಂ ನ ಕುಟುಂಬಸ್ಥರು ಧನ್ಯವಾದವನ್ನು ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group