ರಾಷ್ಟ್ರೀಯ ಸುದ್ದಿ

ಕೊರೋನಾ ವೈರಸ್; ಸೋಂಕಿತರಲ್ಲಿ ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚಳ!

ವರದಿಗಾರ (ಜೂ.28): ಕೊರೋನಾ ವೈರಸ್ ಮಾಹಮಾರಿಯು ದೇಶದಲ್ಲಿ 5 ಲಕ್ಷದ ಗಡಿಯನ್ನು ದಾಟಿದ್ದು, ಎಲ್ಲರೊಳಗೂ ಭಯದ ವಾತಾವರಣವನ್ನು ನಿರ್ಮಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ವರದಿಯಾಗುತ್ತಿದ್ದು, ಇದರ ಮಧ್ಯೆ ಸೋಂಕಿತರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಚೇತರಿಸಿಕೊಳ್ಳುತ್ತಿರುವುದು ಮಾತ್ರ ಸದ್ಯ ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯೊಂದನ್ನು ಪ್ರಕಟಿಸಿದ್ದು, ‘ದೇಶದಲ್ಲಿ ಸಕ್ರಿಯ ಕೋವಿಡ್‌ ಪ್ರಕರಣಗಳು

‘ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳು ಸಕಾರಾತ್ಮಕ ಪರಿಣಾಮ ಉಂಟುಮಾಡಿವೆ. ದೇಶದಲ್ಲಿ 2,03,051 ಚಿಕಿತ್ಸೆ ಪಡೆಯುತ್ತಿರುವವರ ಪ್ರಕರಣಗಳಿದ್ದರೆ, 3,09,712 ಮಂದಿ ಗುಣಮುಖರಾದವರು ಎಂದು ವರದಿ ನೀಡಿದೆ.

ಚೇತರಿಸಿಕೊಂಡವರ ಸಂಖ್ಯೆಯು ಸಕ್ರಿಯ ಪ್ರಕರಣಗಳಿಗಿಂತ 1,06,661ರಷ್ಟು ಹೆಚ್ಚಿದೆ. ಚೇತರಿಕೆಯ ಪ್ರಮಾಣವು ಶೇ 58.56ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

ಕೋವಿಡ್‌ ಪರೀಕ್ಷೆಗಾಗಿಯೇ 1,036 ಪ್ರಯೋಗಾಲಯಗಳು ಮೀಸಲಿವೆ. ಇಲ್ಲಿ ಪ್ರತಿದಿನ 2,31,095 ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಈವರೆಗೆ ಒಟ್ಟು 82.27 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಆರೋಗ್ಯ ಮೂಲ ಸೌಲಭ್ಯಗಳನ್ನೂ ಹೆಚ್ಚಿಸಲಾಗಿದೆ. ಕೋವಿಡ್‌ ರೋಗಿಗಳಿಗಾಗಿಯೇ 1,055 ಆಸ್ಪತ್ರೆಗಳನ್ನು ಮೀಸಲಿಡಲಾಗಿದೆ. ಇವುಗಳಲ್ಲಿ 1,77,529 ಪ್ರತ್ಯೇಕಿತ ಹಾಸಿಗೆಗಳಿವೆ. 23,168 ಐಸಿಯು ಹಾಗೂ 78,060 ಆಕ್ಸಿಜನ್‌ ವ್ಯವಸ್ಥೆಯ ಹಾಸಿಗೆಗಳಿವೆ.

ಕೋವಿಡ್‌ಗಾಗಿಯೇ ಮೀಸಲಾದ 2,400 ಆರೋಗ್ಯ ಕೇಂದ್ರಗಳಿವೆ. ಇವುಗಳಲ್ಲಿ 1,40,09 ಪ್ರತ್ಯೇಕಿತ ಹಾಸಿಗೆಗಳು, 11,508 ಐಸಿಯು ಹಾಸಿಗೆ ಹಾಗೂ 51,371 ಆಕ್ಸಿಜನ್‌ ಸಹಿತ ಹಾಸಿಗೆಗಳಿವೆ. ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ ದೇಶದಲ್ಲಿ ಒಟ್ಟು 8,34,128 ಹಾಸಿಗೆಗಳು ಸಿದ್ಧವಿವೆ. ಕೇಂದ್ರವು ಈವರೆಗೆ ಒಟ್ಟು 1.87 ಕೋಟಿ ಎನ್‌-95 ಮಾಸ್ಕ್‌ ಹಾಗೂ 1.16 ಕೋಟಿ ಪಿಪಿಇ ಕಿಟ್‌ಗಳನ್ನು ರಾಜ್ಯಗಳಿಗೆ ಒದಗಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group