ಸುತ್ತ-ಮುತ್ತ

ಎಸ್.ಎಸ್.ಎಫ್ ಕ್ಯೂ ಟೀಂ ನಿಂದ ಸರಕಾರಿ ಆಸ್ಪತ್ರೆ ಅವರಣ ಸ್ವಚ್ಛತೆ

ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗಾಗಿ ವಿಶೇಷ ಕಾರ್ಯಕ್ರಮ

ವರದಿಗಾರ (ಜೂ.28): ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್(ಎಸ್.ಎಸ್.ಎಫ್) ಸುಳ್ಯ ಡಿವಿಷನ್ ಕ್ಯೂ ಟೀಂ ವತಿಯಿಂದ ಸುಳ್ಯ ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರದ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.

ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಸಾರ್ವಜನಿಕ ತಾಲೂಕು ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಕರುಣಾಕರ ಕೆ.ವಿ ರವರು ಎಸ್.ವೈ.ಎಸ್ ಹಾಗೂ ಎಸ್.ಎಸ್.ಎಫ್ ಇದರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ತಾಲೂಕು ಆಸ್ಪತ್ರೆಯ ಶವಾಗಾರದ ಪರಿಸರದಲ್ಲಿ ಶೇಖರಣೆಗೊಂಡಿದ್ದ ಕಸ ತ್ಯಾಜ್ಯಗಳನ್ನು ಜೆಸಿಬಿ ಯಂತ್ರದ ಮೂಲಕ ಅಲ್ಲಿಂದ ತೆಗೆಸಿ ಶುಚಿಗೊಳಿಸಲಾಯಿತು. ಆಸ್ಪತ್ರೆಯ ಮುಂಭಾಗದ ಮೂಲಕ ಶವಾಗಾರಕ್ಕೆ ತೆರಳುವ ದಾರಿ ಮತ್ತು ಆಸ್ಪತ್ರೆಯ ಸುತ್ತಮುತ್ತಲೂ ಬೆಳೆದಿದ್ದ ಕಾಡು ಕೊಳೆಗಳನ್ನು ಕಟಾವು ಯಂತ್ರದ ಮೂಲಕ ತೆರವುಗೊಳಿಸಿ ಶುಚೀಕರಣ ನಡೆಸಲಾಯಿತು.

ಎಸ್. ಎಸ್. ಎಫ್ ಸುಳ್ಯ ಡಿವಿಷನ್ ಅಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿ, ದ.ಕ ಈಸ್ಟ್ ಝೋನ್ ಬ್ಲಡ್ ಸೈಬೋ ಉಸ್ತುವಾರಿ ಸಿದ್ದೀಖ್ ಗೂನಡ್ಕ, ಎಸ್.ವೈ.ಎಸ್ ನಾಯಕರುಗಳಾದ ಅಶ್ರಫ್ ಸಖಾಫಿ ಕುಂಬಕ್ಕೋಡು, ಹಸೈನಾರ್ ಗುತ್ತಿಗಾರು, ಸಂಶುದ್ದೀನ್ ಪಳ್ಳಿಮಜಲು ಮುಂತಾದವರ ನೇತೃತ್ವದಲ್ಲಿ ಸುಮಾರು ಮೂವತ್ತರಷ್ಟು ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಕಾರ್ಯಕರ್ತರನ್ನು ಸುಳ್ಯ ನಗರ ಪಂಚಾಯತ್ ಸದಸ್ಯ ಉಮರ್ ಕೆ.ಎಸ್. ರವರು ಪಾಲ್ಗೊಂಡು ಮಾರ್ಗದರ್ಶನಗಳನ್ನು ನೀಡಿ ಕಾರ್ಯಕರ್ತರಿಗೆ ಸಹಕರಿಸಿದರು. ಎಸ್‌ಎಸ್‌ಎಫ್ ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹುದ್ದೀನ್ ಹಿಮಮಿ, ಕೆಸಿಎಫ್ ಅಬುಧಾಬಿ ಪಬ್ಲೀಕೇಶನ್ ಕನ್ವಿನರ್ ಕಬೀರ್ ಜಟ್ಟಿಪಳ್ಳ ಸ್ವಚತೆ ಬಗ್ಗೆ ಮಾಹಿತಿ ನೀಡಿದರು.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group