
‘ಬಿಜೆಪಿಗರು ಕೆಸರಿಗೆ ಕಲ್ಲು ಹೊಡೆಯುವ ಕೆಲಸವನ್ನು ಮಾಡುತ್ತಿದ್ದಾರೆ’
‘ಭಾರತಕ್ಕೆ 2 ಬಾರಿ ಭೇಟಿ ನೀಡಿದ ಚೀನಾ ವಿಶ್ವಾಸ ಘಾತಕ ಕೆಲಸ ಮಾಡಿದೆ’
ವರದಿಗಾರ (ಜೂ.28): “ಬಿಜೆಪಿಗರು ಕಾಂಗ್ರೆಸ್ ನ್ನು ಟೀಕಿಸುವ ಮೊದಲು ಚೀನಾದ ಜೊತೆ ಹೋರಾಡಲಿ”ಎಂದು ಶಿವಸೇನೆ ಬಿಜೆಪಿಗೆ ಸಲಹೆ ನೀಡಿದೆ.
ಚೀನಾ ದೂತಾವಾಸದಿಂದ, ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಫೌಂಡೇಶನ್ ದೇಣಿಗೆ ಸ್ವೀಕರಿಸಿರುವ ಬಗೆಗಿನ ಬಿಜೆಪಿ-ಕಾಂಗ್ರೆಸ್ ವಾಕ್ಸಮರಕ್ಕೆ ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯಲ್ಲಿ ಪ್ರತಿಕ್ರಿಯಿಸಿದೆ.
ಸಂಪಾದಕೀಯದಲ್ಲಿ, “ಕಾಂಗ್ರೆಸ್ ಅನ್ನು ದೂರುವ ಮೊದಲು ಚೀನಾ ಗಡಿ ಅತಿಕ್ರಮಣದ ವಿಚಾರದಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ಎತ್ತಿರುವ ಪ್ರಶ್ನೆಗೆ ಬಿಜೆಪಿಗರು ಉತ್ತರ ನೀಡಲಿ” ಎಂದು ಹೇಳಿದೆ.
“ಕಾಂಗ್ರೆಸ್ ಪಕ್ಷವನ್ನು ಚೀನಾದ ಏಜೆಂಟ್ ಎಂದು ಕರೆದ ಕೂಡಲೇ, ಚೀನಾದ ಗಡಿನುಸುಳುವಿಕೆ ನಿಲ್ಲುವುದೇ”ಎಂದು ಶಿವಸೇವೆ ಬಿಜೆಯನ್ನು ತೀಕ್ಷ್ಣ ಮಾತಿನಲ್ಲಿ ಪ್ರಶ್ನಿಸಿದೆ.
“ನಮ್ಮ ದೇಶದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ/ಮುಖಂಡರಿಗೆ ವಿದೇಶೀ ದೇಣಿಗೆ ಹರಿದು ಬರುತ್ತಿದೆ. ಕಾಂಗ್ರೆಸ್ಸಿಗೆ ಮಾತ್ರ ಹಣ ಬರುತ್ತಿರುವುದಲ್ಲ. ಬಿಜೆಪಿಯವರು ಈ ವಿಚಾರವನ್ನು ಪದೇಪದೇ ಕೆದಕಿ ಕೆಸರಿಗೆ ಕಲ್ಲು ಹೊಡೆಯುವ ಕೆಲಸವನ್ನು ಮಾಡುತ್ತಿದ್ದಾರೆ”ಎಂದು ಹೇಳಿದೆ.
“ಕಳೆದ ಕೆಲವು ವರ್ಷಗಳಲ್ಲಿ ಚೀನಾದ ಅಧ್ಯಕ್ಷರು ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಒಂದು ಕಡೆ ಮಾತುಕತೆ ನಡೆಸುವುದು ಇನ್ನೊಂದು ವಿಶ್ವಾಸ ಘಾತಕ ಕೆಲಸ ಮಾಡುವುದು ಚೀನಾದ ಬುದ್ದಿ” ಎಂದು ಶಿವಸೇನೆ ಚೀನಾ ವಿರುದ್ಧ ಕಿಡಿಕಾರಿದೆ.
