ರಾಜ್ಯ ಸುದ್ದಿ

ಅವಮಾನಕ್ಕೊಳಗಾದ ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾದರಿಯಾದ ಯುವಕರು!

ವರದಿಗಾರ (ಜೂ.28): ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಈ ಸಂದರ್ಭದಲ್ಲಿ ನಗರವನ್ನು ಎಂದಿನಂತೆ ಸ್ವಚ್ಚತೆಗೊಳಿಸುತ್ತಿದ್ದ ಪೌರಕಾರ್ಮಿಕರನ್ನು ಕೇವಲ ನೀರು ಕೇಳಿದ ಕಾರಣಕ್ಕೆ ಅವಮಾನಿಸಿದ ಘಟನೆಗೆ ರಾಜ್ಯವೇ ಖಂಡನೆ ವ್ಯಕ್ತಪಡಿಸಿದ್ದಲ್ಲದೆ ಅಮಾನವೀಯ ರೀತಿಯಲ್ಲಿ ವರ್ತಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಕೇಳಿ ಬಂದಿದ್ದವು.

ಕಳೆದವಾರ ಬೆಂಗಳೂರಿನ  ಜಯನಗರದಲ್ಲಿ ನೀರು ಕೇಳಿದ ಪೌರಕಾರ್ಮಿಕರಿಗೆ ಅವಮಾನ ಮಾಡಿದ ವಿಡಿಯೋ ತುಣುಕು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಗಣನೆಗೆ ತೆಗೆದ ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಘರ್ಜನೆ ಸಂಘಟನೆಯ ಸದಸ್ಯರು ಅದೇ ಪೌರ ಕಾರ್ಮಿಕರನ್ನು ಅಭಿನಂದಿಸಿ ಸನ್ಮಾನಿಸುವ ಮೂಲಕ ಪೌರ ಕಾರ್ಮಿಕರ ಸೇವೆಗೆ ಕೃತಜ್ಞತೆಯನ್ನು ಸಲ್ಲಿಸಿರುವ ಮಾನವೀಯ ಸೇವೆಯ ಬಗ್ಗೆ ವರದಿಯಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಘರ್ಜನೆ ಸಂಘಟನೆಯ ಸದಸ್ಯರು ಲಾಕ್ ಡೌನ್ ಬಳಿಕ ಹಲವು ಹಸಿವಿನಿಂದಿದ್ದ ಹೊಟ್ಟೆಗಳಿಗೆ ಆಹಾರವನ್ನು ನೀಡಿ ಸಂತೈಸುತ್ತಿದೆ. ಪ್ರತೀ ದಿನ ಜನರ ಬಳಿಗೆ ತಲುಪಿ ತಮ್ಮ ಕೈಯ್ಯಲ್ಲಾಗುವ ಆಹಾರವನ್ನು ನೀಡಿ, ದಿನ ಬಳಕೆಯ ವಸ್ತುಗಳನ್ನು ನೀಡುವ ಮೂಲಕ ಮಾನವೀಯ ಸೇವೆಯನ್ನು ಮಾಡುತ್ತಿದೆ. ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ಯುವಕರ ನಿಸ್ವಾರ್ಥ ಸೇವೆ ಅಭಿನಂದನಾರ್ಹ.

ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ನಮ್ಮ ಧ್ವನಿ ಬಳಗದ ಲೋಹಿತ್ ನಾಯ್ಕ್ ಮಾತನಾಡುತ್ತಾ, ಪೌರ ಕಾರ್ಮಿಕರ ಸೇವೆಯು ಅತ್ಯಂತ ಮಹತ್ತರ ಸೇವೆಯಾಗಿದೆ. ಸಾಧ್ಯವಿದ್ದರೆ ಅವರೊಂದಿಗೆ ಕೈ ಜೋಡಿಸಿ ಆದರೆ ಅವರನ್ನು ಅವಮಾನಿಸಬೇಡಿ. ನೀವು ನಿರ್ಭಯವಾಗಿ ಉಸಿರಾಡುವ ಗಾಳಿಯಲ್ಲಿ ಅವರ ಪಾತ್ರವಿದೆ. ನೀವು ಆರೋಗ್ಯವಂತರಾಗಿದ್ದರೆ ಅದರ ಹಿಂದೆ ಕಾರ್ಮಿಕರ ಪ್ರಯತ್ನವಿದೆ. ಇಂತಹ ಘಟನೆಗಳಿಂದ ಕಾರ್ಮಿಕರು ದೃತಿಗೆಡದೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕೆಂದು ಈ ಸಂದರ್ಭ ಅವರು ಹೇಳಿದರು. ಕೊರೋನಾ ವೈರಸ್ ಮಹಾಮಾರಿಯನ್ನು ತಡೆಯಲು ನಾವೆಲ್ಲರೂ ಜೊತೆಯಾಗಿ ಪ್ರಯತ್ನಿಸೋಣ. ಇನ್ನೊಬ್ಬರಿಗೆ ಸಹಾಯ ಮಾಡುವ ದೊಡ್ಡ ಮನಸ್ಸನ್ನು ನಮ್ಮೊಳಗೆ ಸೃಷ್ಟಿಮಾಡಿಕೊಳ್ಳೋಣವೆಂದು ಹೇಳಿದರು.

ವೀರ ಕನ್ನಡಿಗರ ಘರ್ಜನೆ ಸಂಘಟನೆಯ ಅಧ್ಯಕ್ಷರಾದ ಮಂಜುನಾಥ ಮಾತನಾಡಿ, ಇನ್ನು ಮುಂದೆ ಪೌರಕಾರ್ಮಿಕರಿಗೆ ಏನೇ ಸಮಸ್ಯೆ ಬಂದರೂ ನಾವು ಅವರ ಜೊತೆ ನಿಲ್ಲುತ್ತೇವೆ ಎಂದು ಪೌರ ಕಾರ್ಮಿಕರ ಸೇವೆಗೆ ಬೆಂಬಲ ವ್ಯಕ್ತಪಡಿಸಿದರು.

ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ ಯೋಧ ಸುರೇಶ್ ಹಾಗೂ ಇನ್ನಿತರ ಸಮಾಜಮುಖಿ ಸೇವೆ ಮಾಡಿದ ಲೋಹಿತ್ ನಾಯ್ಕ್ ಮತ್ತು ಅಶ್ರಫ್ ರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವೀರ ಕನ್ನಡಿಗರ ಘರ್ಜನೆ ಸಂಘಟನೆಯ ಅಬೂಬಕರ್ ಜೇಪಿನಗರ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group