ಸುತ್ತ-ಮುತ್ತ

ಕನ್ನಡತಿ ಉತ್ಸವ –2020 “ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ ” ಸಮಾವೇಶಕ್ಕಾಗಿ ನೋಂದಣಿ ಆರಂಭ

ವರದಿಗಾರ (ಜೂ. 23): ಅವಳಹೆಜ್ಜೆಯ 4ನೇ ವರ್ಷದ ಕನ್ನಡತಿ ಉತ್ಸವದ ಅಂಗವಾಗಿ “ ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ” ಎಂಬ ಶೀರ್ಷಿಕೆಯಡಿ ಮಹಿಳಾ ನಾಯಕತ್ವದ ಹಾದಿಯಲ್ಲಿನ ಹಲವಾರು ಸವಾಲುಗಳು ಮತ್ತು ಯಶಸ್ಸುಗಳ ಕುರಿತ ಸಮಾವೇಶವನ್ನು ನವೆಂಬರ್ ತಿಂಗಳಿನಲ್ಲಿ ಹಮ್ಮಿಕೊಳ್ಳುತ್ತಿದ್ದು, ಈ ಸಮಾವೇಶದಲ್ಲಿ ನೋಂದಾಯಿಸಲು, ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಪ್ರತಿನಿಧಿಗಳನ್ನು/ ಸಂಘಸಂಸ್ಥೆಗಳನ್ನು ಆಹ್ವಾನಿಸುತ್ತಿದ್ದೇವೆ.

ಅನಿರೀಕ್ಷಿತ ಜಾಗತಿಕ ದುರಂತದಿಂದ ತತ್ತರಿಸಿ, ಮತ್ತೆ ಚೇತರಿಕೆ ಕಂಡುಕೊಳ್ಳುವ ಹೊತ್ತಿನಲ್ಲಿ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ, ನಮ್ಮ ಸುತ್ತಮುತ್ತಲೂ ಸಮಯಪ್ರಜ್ಞೆಯನ್ನು ಮೆರೆದ ಹಲವಾರು ಮಹಿಳೆಯರ ಯಶೋಗಾಥೆಗಳನ್ನು ಸ್ಮರಿಸುವುದು ಈ ವರ್ಷದ ಕನ್ನಡತಿ ಉತ್ಸವದ ಮುಖ್ಯ ಉದ್ದೇಶ.

ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ, ಕನ್ನಡತಿಯರ ಪಾತ್ರವನ್ನು ಮರೆಯದೇ ಸ್ಮರಿಸುವ ಆಶಯದಿಂದ 2017ರಲ್ಲಿ ಅವಳಹೆಜ್ಜೆ ವತಿಯಿಂದ ಪ್ರಾರಂಭಿಸಿದ ವಾರ್ಷಿಕ ಹಬ್ಬ “ಕನ್ನಡತಿ ಉತ್ಸವ”. ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಮುಖಾಂತರ ಸ್ತ್ರೀ ನೋಟ ದ ಅನಾವರಣ ಕನ್ನಡತಿ ಉತ್ಸವದ ಧ್ಯೇಯ ಮತ್ತು ಆ ಮೂಲಕ ಸಮಾನತೆಯತ್ತ ಪುಟ್ಟ ಹೆಜ್ಜೆಗಳನ್ನು ಇಡುವ ಪ್ರಯತ್ನ ಅವಳಹೆಜ್ಜೆಯದು.

ಈ ನಿಟ್ಟಿನಲ್ಲಿ 2017 ರ ಕನ್ನಡತಿ ಉತ್ಸವ ದಲ್ಲಿ ಸ್ತ್ರೀ ಕೇಂದ್ರಿತ ಕಲಾಕೃತಿಗಳ ಪ್ರದರ್ಶನ ವನ್ನು ಹಮ್ಮಿಕೊಳ್ಳಲಾಗಿತ್ತು. 2018 ರಲ್ಲಿ, ಮಹಿಳೆಯರೇ ತಯಾರಿಸಿದ ಕಿರುಚಿತ್ರಗಳ ಪ್ರದರ್ಶನ ವನ್ನು ರಾಜ್ಯದ ಹಲವೆಡೆ ನಡೆಸಲಾಗಿತ್ತು. 2019ರಲ್ಲಿ ಮಹಿಳೆಯರೇ ರಚಿಸಿ ಮತ್ತು ನಿರ್ದೇಶಿಸಿದ ಕಿರುನಾಟಕ ಸ್ಪರ್ಧೆ ಯನ್ನು ಅಂತರ ಕಾಲೇಜು ಮಟ್ಟದಲ್ಲಿಏರ್ಪಡಿಸಲಾಗಿತ್ತು.

ಮುಂದುವರೆದ ಭಾಗವಾಗಿ ಈ ವರ್ಷದ ಕನ್ನಡತಿ ಉತ್ಸವದಲ್ಲಿ“ ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ “ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸಲು ಆಸಕ್ತ ಪ್ರತಿನಿಧಿಗಳು /ಸಂಘ ಸಂಸ್ಥೆಗಳು ಆಗಸ್ಟ್ 15, 2020ರ ಒಳಗೆ ‘ಅವಳ ಹೆಜ್ಜೆ’ ವೆಬ್ ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಮತ್ತು ತಾವು ಪ್ರಸ್ತುತ ಪಡಿಸಲಿರುವ ಲೇಖನವನ್ನು ಕಳುಹಿಸಿಕೊಡಬಹುದು ಎಂದು ಅವಳಹೆಜ್ಜೆ ಸಂಸ್ಥೆಯ ಸ್ಥಾಪಕಿ ಶಾಂತಲಾ ದಾಮ್ಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group