ರಾಷ್ಟ್ರೀಯ ಸುದ್ದಿ

ಇಂಧನ ಬೆಲೆಯೇರಿಸುತ್ತಿರುವ ಸರಕಾರ ಜನರಿಗೆ ಮತ್ತಷ್ಟು ಸಂಕಷ್ಟವನ್ನು ನೀಡುತ್ತಿದೆ: ಸೋನಿಯಾ ಗಾಂಧಿ

‘ಜನರ ಕಷ್ಟಗಳನ್ನು ಹೋಗಲಾಡಿಸುವುದು ಸರಕಾರದ ಕರ್ತವ್ಯವೇ ಹೊರತು ಅವರ ಕಷ್ಟವನ್ನು ಹೆಚ್ಚಿಸುವುದಲ್ಲ’

ವರದಿಗಾರ (. 16): ಕೋವಿಡ್-19ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಜನತೆಯ ಪಾಲಿಗೆ ಮತ್ತಷ್ಟು ಹೊರೆಯಾಗುವಂತೆ ಸರಕಾರ ಮಾಡುತ್ತಿದೆ. ಸರಕಾರ ಸತತ ಹತ್ತನೇ ದಿನವೂ ಇಂಧನ ದರ ಬೆಲೆಯೇರಿಕೆ ಮಾಡಿರುವುದು ‘ಸಂಪೂರ್ಣವಾಗಿ ಅಸಂವೇದಿತನದಿಂದ’ ಕೂಡಿದ ಕ್ರಮ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಸೋನಿಯಾ ಗಾಂಧಿ ಸರಕಾರವು ತಕ್ಷಣ ಇಂಧನ ದರ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತಂತೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಇಂಧನ ದರ ಏರಿಕೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.

“ಕೋವಿಡ್-19 ಸಮಸ್ಯೆಯಿಂದಾಗಿ ದೇಶದಲ್ಲಿ ಲಕ್ಷಾಂತರ ಜನರು ತಮ್ಮ ಉದ್ಯೋಗ ಹಾಗೂ ಜೀವನೋಪಾಯಗಳನ್ನು ಕಳೆದುಕೊಂಡಿರುವಾಗ ಸರಕಾರವು ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿರುವ ಹಿಂದೆ ನನಗೆ ಯಾವುದೇ ತರ್ಕ ಕಾಣುತ್ತಿಲ್ಲ” ಎಂದು ಪತ್ರದಲ್ಲಿ ಹೇಳಿರುವ ಸೋನಿಯಾ, ‘ನಿಮ್ಮ ಸರಕಾರ ಈ ಅಸಮರ್ಥನೀಯ ದರ ಏರಿಕೆಯ ಮೂಲಕ ಸುಮಾರು 2.6 ಲಕ್ಷ ಕೋಟಿ ಹೆಚ್ಚುವರಿ ಆದಾಯ ಗಳಿಸಲು ಯತ್ನಿಸುತ್ತಿದೆ. ಈ ದರ ಏರಿಕೆ ಜನರ ಮೇಲೆ ಹೆಚ್ಚುವರಿ ಹೊರೆಯನ್ನು ಸೃಷ್ಟಿಸುತ್ತಿದೆ, ಜನರ ಕಷ್ಟಗಳನ್ನು ಹೋಗಲಾಡಿಸುವುದು ಸರಕಾರದ ಕರ್ತವ್ಯವೇ ಹೊರತು ಅವರ ಕಷ್ಟವನ್ನು ಹೆಚ್ಚಿಸುವುದಲ್ಲ, ಕಚ್ಛಾ ತೈಲ ಬೆಲೆ ಶೇ 9ರಷ್ಟು ಇಳಿಕೆ ಕಂಡಿರುವಾಗ ಸರಕಾರ ಇಂಧನ ಬೆಲೆ ಏರಿಸಿ ಜನರನ್ನು ಕಷ್ಟಕ್ಕೆ ತಳ್ಳಿ ಲಾಭ ಗಿಟ್ಟಿಸಲು ಯತ್ನಿಸುತ್ತಿದೆ” ಎಂದು ಸೋನಿಯಾ ತಮ್ಮ ಪತ್ರದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

 

 

To Top
error: Content is protected !!
WhatsApp Join our WhatsApp group