ರಾಷ್ಟ್ರೀಯ ಸುದ್ದಿ

ಕೊರೊನಾ ತಡೆಯುವಲ್ಲಿ ವಿಫಲವಾದ ಗುಜರಾತ್ ಮಾದರಿಯ ಬಣ್ಣ ಬಯಲು: ರಾಹುಲ್ ಗಾಂಧಿ

ವರದಿಗಾರ (ಜ. 16): ‘ಕೊರೊನಾ ಸೋಂಕು ತಡೆಯುವಲ್ಲಿ ಗುಜರಾತ್‌ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗುಜರಾತ್‌ ಮಾದರಿ ಎಂಬುದರ ನಿಜ ಬಣ್ಣ ಬಯಲಾಗಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗುಜರಾತ್ ಸರಕಾರವನ್ನು ಟೀಕಿಸಿದ್ದಾರೆ.

ಕೊರೊನಾ ಸೋಂಕು ಪ್ರಸರಣ ನಿರ್ವಹಣೆಗೆ ಸಂಬಂಧಿಸಿ ಈವರೆಗೆ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದ ರಾಹುಲ್‌ ಗಾಂಧಿ ಈಗ ಗುಜರಾತ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಗುಜರಾತ್‌ನಲ್ಲಿ ಮರಣ ಪ್ರಮಾಣ ಹೆಚ್ಚಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಯನ್ನು ಉಲ್ಲೇಖಿಸಿ, ‘ಕೋವಿಡ್‌-19ನಿಂದಾಗಿ ಗುಜರಾತ್‌ನಲ್ಲಿ ಹೆಚ್ಚು ಸಾವು ಸಂಭವಿಸಿವೆ. ಗುಜರಾತ್‌ನಲ್ಲಿ ಮರಣ ಪ್ರಮಾಣ ಶೇ 6.25 ಇದ್ದರೆ, ಮಹಾರಾಷ್ಟ್ರದಲ್ಲಿ ಶೇ 3.73, ರಾಜಸ್ಥಾನ- ಶೇ 2.32, ಪಂಜಾಬ್‌- ಶೇ2.17, ಪುದುಚೇರಿ- ಶೇ 1.98, ಜಾರ್ಖಂಡ್‌- ಶೇ 0.5 ಹಾಗೂ ಛತ್ತೀಸಗಡದಲ್ಲಿ ಶೇ 0.35ರಷ್ಟಿದೆ’ ಎಂದು ರಾಹುಲ್ ಗಾಂಧಿ ಟ್ವೀಟ್‌ ಮೂಲಕ ಗುಜರಾತ್ ಸರಕಾರವನ್ನು ಟೀಕಿಸಿದ್ದಾರೆ. ಗುಜರಾತ್‌ನಲ್ಲಿ ಒಟ್ಟು 24,055 ಪ್ರಕರಣಗಳು ವರದಿಯಾಗಿದ್ದು ದೇಶದಲ್ಲಿ 4ನೇ ಸ್ಥಾನದಲ್ಲಿದೆ. ಇದುವರೆಗೆ 1,505 ಮಂದಿ ಕೋವಿಡ್‌ನಿಂದಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group