ವರದಿಗಾರ- ಚಂಡೀಗಡ : ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಸ್ವಯಂ ಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ಗೆ ಸಿಬಿಐನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಪ್ ಸಿಂಗ್ ಹೆಲಿಕಾಪ್ಟರ್ ಮೂಲಕ ರೋಹ್ಟಕ್ ಗೆ ಬಂದು ಸುನಾರಿಯಾದಲ್ಲಿರುವ ಜೈಲನ್ನೇ ನ್ಯಾಯಾಲಯವನ್ನಾಗಿ ಪರಿವರ್ತಿಸಿ ನೀಡಿದ ತೀರ್ಪಿನ ಎರಡನೇ ಪ್ರಕರಣದಲ್ಲೂ ಗುರ್ಮಿತ್ ಬಾಬಾನಿಗೆ ಹತ್ತು ವರ್ಷಗಳ ಶಿಕ್ಷೆಯಾಗಿದೆ. ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಒಟ್ಟು 20 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 30ಲಕ್ಷ ದಂಡವನ್ನು ವಿಧಿಸಿದೆ. ಈ ಮೂಲಕ 10 ವರ್ಷವಿದ್ದ ಜೈಲು ಶಿಕ್ಷೆಗೆ ಇನ್ನೂ 10 ವರ್ಷ ಸೇರ್ಪಡೆಗೊಂಡಿದೆ.
ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಈ ಶಿಕ್ಷೆ ವಿಧಿಸಲಾಗಿದೆ. ಬೆದರಿಕೆ, ಅಪಪ್ರಚಾರಗಳ ನಡುವೆ ನ್ಯಾಯಕ್ಕಾಗಿ ಮುಂದಿಟ್ಟಿದ್ದ ಇಬ್ಬರು ಮಹಿಳೆಯರ ದೃಢವಾದ ಹೆಜ್ಜೆಗೆ ನ್ಯಾಯ ದೊರೆತಂತಾಗಿದೆ.
ಇದನ್ನೂ ಓದಿ: ಅತ್ಯಾಚಾರಿ ರಾಮ್ ರಹೀಂ ಸಿಂಗ್ ಗೆ 10 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಸಿಬಿಐ ವಿಶೇಷ ನ್ಯಾಯಾಲಯ
