ರಾಜ್ಯ ಸುದ್ದಿ

ಬೇರೆಯವರಿಗೆ ಕಿಟ್ ಕೊಡುವಷ್ಟು ಶಕ್ತಿ ನನಗಿಲ್ಲ. ಕಿಟ್ ನೀಡಿದರೆ ತೆಗೆದುಕೊಳ್ಳುತ್ತೇನೆ: ಮಾಜಿ ಸ್ಪೀಕರ್ ರಮೇಶ್ ಕುಮಾರ್

ವರದಿಗಾರ(ಮೇ.20): ‘ಬೇರೆಯವರಿಗೆ ಕಿಟ್ ಕೊಡುವಷ್ಟು ಶಕ್ತಿ ನನಗಿಲ್ಲ. ಯಾರಾದರೂ ಕಿಟ್ ನೀಡಿದರೆ ತೆಗೆದುಕೊಳ್ಳುತ್ತೇನೆ’ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ನೀಡಿ ರಾಜಕೀಯ ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದ್ದು, ಸದ್ಯ ಇವರ ಈ ಹೇಳಿಕೆಯು ಚರ್ಚೆಗೆ ಗ್ರಾಸವಾಗುವ ಎಲ್ಲಾ ಸಾಧ್ಯತೆಯಿದೆ.

ಮಹಾಮಾರಿ ಕೊರೋನಾ ವಿರುದ್ಧ ಪ್ರಪಂಚವೇ ಹೋರಾಡುತ್ತಿದೆ. ಭಯದ ನೆರಳಲ್ಲಿ ಜನತೆ ಜೀವನ ನಡೆಸುವಂತಾಗಿದೆ. ಜನತೆ ಆತಂಕಕ್ಕೊಳಗಾಗಿದ್ದಾರೆ. ಹಸಿವಿನಿಂದ ಜೀವಗಳು ಪ್ರಾಣ ಬಿಟ್ಟ ಸುದ್ದಿಗಳು ಕಿವಿಗಳನ್ನು ಅಪ್ಪಳಿಸುತ್ತಿದೆ.

ಭಾರತ ಕಳೆದ 2 ತಿಂಗಳಿನಿಂದ ವೈರಸ್ ವಿರುದ್ಧ ಸಮರ ಸಾರಿದೆ. ವಿಪರ್ಯಾಸವೆಂದರೆ, ಲಾಕ್ ಡೌನ್ ಘೋಷಣೆ ಬಳಿಕ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ. ಸದ್ಯದ ವರದಿ ಪ್ರಕಾರ ಭಾರತದಲ್ಲಿ ಒಂದು ಲಕ್ಷ ಆರು ಸಾವಿರದ ನಾಲ್ಕುನೂರ ಎಪ್ಪತ್ತೈದು (1,06,475) ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ವಲಸೆ ಕಾರ್ಮಿಕರು ಮನೆಗೆ ತಲುಪುವ ದಾರಿ ಮಧ್ಯೆ ಜೀವವನ್ನು ಅರ್ಪಿಸುತ್ತಿದ್ದಾರೆ. ದೇಶದ ಬೆನ್ನೆಲುಬಾಗಿದ್ದ ಕಾರ್ಮಿಕರ ಬೆನ್ನುಮೂಳೆಯನ್ನು ಮುರಿಯಲಾಗುತ್ತಿದೆ.

ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ದಿನ ಕೂಲಿ ಕಾರ್ಮಿಕರು, ಬಡವರು ಹಾಗೂ ಕಾರ್ಮಿಕರು ಕೆಲಸವಿಲ್ಲದೆ ಒಪ್ಪೊತ್ತಿನ ಊಟಕ್ಕೂ ಸಂಕಷ್ಟ ಎದುರಿಸುತ್ತಿದ್ದಾರೆ. ನರಳಾಟ, ಕಣ್ಣೀರು, ಹಸಿವು ದೇಶವನ್ನು ಕಾಡಲಾರಂಭಿಸಿದೆ.
ಹೀಗಾಗಿ ಸಂಕಷ್ಟ ಪೀಡಿತ ಜನತೆಯ ನೆರವಿಗೆ ಜನಪ್ರತಿನಿಧಿಗಳು, ಸಂಘ – ಸಂಸ್ಥೆಗಳು ಧಾವಿಸಿದ್ದು, ಆಹಾರದ ಕಿಟ್ ವಿತರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಾಜಿ ಸ್ಪೀಕರ್ ಮೇಲಿನ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಲ್ಲದೆ ತನ್ನಲ್ಲಿರುವ ಸರಳತೆಯನ್ನು ಪ್ರದರ್ಶಿಸಿಕೊಂಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group