ರಾಜ್ಯ ಸುದ್ದಿ

ಸರಕಾರದ ‘20 ಲಕ್ಷ ಕೋಟಿ’ ಸುಳ್ಳಿನ ಸರಮಾಲೆಯ ಪ್ಯಾಕೇಜ್: ಕುಮಾರಸ್ವಾಮಿ

‘ಇದು ಜನರನ್ನು ಮೂರ್ಖರನ್ನಾಗಿಸುವ ತಂತ್ರ’

‘ನಿರ್ಮಲಾ ಸೀತಾರಾಮನ್ ಘೋಷಣೆಯು ಸೀರಿಯಲ್ ನೋಡಿದಂತಾಯಿತು’

ವರದಿಗಾರ(ಮೇ.20): ಕೊರೋನಾ ಮಾಹಾಮಾರಿ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಿಸಿದ್ದು, ಪ್ಯಾಕೇಜ್ ಬಗ್ಗೆ ವ್ಯಾಪಕ ಟೀಕೆಗಳ ಸುರಿಮಾಲೆ ಬರ ತೊಡಗಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೇಂದ್ರ ಸರ್ಕಾರದ ಪ್ಯಾಕೇಜ್ ಸುಳ್ಳಿನ ಸರಮಾಲೆ ಎಂದು ಹೇಳಿದ್ದು, ಇದೊಂದು ಜನರನ್ನು ಮೂರ್ಖರನ್ನಾಗಿಸುವ ತಂತ್ರ ಎಂದು ವ್ಯಂಗ್ಯವಾಡಿದ್ದಾರೆ.

‘ಈ ಪ್ಯಾಕೇಜ್ ಘೋಷಿಸಿರುವ ಕೇಂದ್ರ ಸರ್ಕಾರ ಬೊಕ್ಕಸದಿಂದ ಒಂದು ಬಿಡಿಗಾಸನ್ನೂ ನೀಡುತ್ತಿಲ್ಲ. ಈ ಕುರಿತು ನಾವು ಬಹಿರಂಗವಾಗಿ ಸತ್ಯ ಹೇಳಿದರೆ ದೇಶದ್ರೋಹಿ ಎಂದು ಬಿಂಬಿಸಲಾಗುತ್ತದೆ. ಪರಿಹಾರ ಎಂದರೆ ಸಾಲ ನೀಡುವುದಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣವಾಗಿ ಮಾತನಾಡಿದ್ದಾರೆ.

‘20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದು, ಸೀರಿಯಲ್ ನೋಡಿದಂತಾಯಿತು’ ಎಂದು ಕುಮಾರಸ್ವಾಮಿ ಬಣ್ಣಿಸಿದ್ದು, ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ  ನಡೆಸಿದ್ದಾರೆ.

To Top
error: Content is protected !!
WhatsApp Join our WhatsApp group