ವೀಡಿಯೋ

ವೀಡಿಯೋ: ರಾಜ್ಯಗಳ ಗಡಿಗಳಲ್ಲಿ ಹೆಚ್ಚಿದ ಭದ್ರತೆ; ಹರಿಯಾಣದಿಂದ ನದಿ ದಾಟಿ ಉತ್ತರ ಪ್ರದೇಶ ಪ್ರವೇಶಿಸುತ್ತಿರುವ ವಲಸಿಗರು!!

ಸರಕಾರದ ನಿರ್ಲಕ್ಷ್ಯದಿಂದ ಅಪಾಯಕಾರಿ ದಾರಿ ಮೂಲಕ ಸಾಗುತ್ತಿರುವ ವಲಸೆ ಕಾರ್ಮಿಕರು!

ವಲಸಿಗರಿಗೆ ನದಿ ದಾಟಲು ಸಹಾಯ ಮಾಡಿದ ಸ್ಥಳೀಯರ ಬಂಧನ!

ವರದಿಗಾರ (ಮೇ.20):  ಲಾಕ್ ಡೌನ್ ಕಾರಣ ಒಪ್ಪೊತ್ತಿನ ಆಹಾರವಿಲ್ಲದೇ ತತ್ತರಿಸಿರುವ ವಲಸೆ ಕಾರ್ಮಿಕರು, ಹೇಗಾದರೂ ತಮ್ಮ -ತಮ್ಮ ಊರಿಗೆ ತಲುಪಲು ಪ್ರಯತ್ನಿಸುತ್ತಿದ್ದಾರೆ. ಸರಕಾರದಿಂದ ನಿರೀಕ್ಷಿತ ಸಹಾಯ-ಸೌಲಭ್ಯಗಳು ದೊರಕದ ಕಾರಣ, ಅವರು ಪಾದಯಾತ್ರೆ ಪ್ರಾರಂಭಿಸಿದ್ದರು.

ಆದರೆ, ಇದೀಗ ರಾಜ್ಯಗಳ ಗಡಿಗಳಲ್ಲಿ ಭದ್ರತಾ ಪಹರೆ ಹೆಚ್ಚಿದ ಕಾರಣ ಇದೀಗ ವಲಸೆ ಕಾರ್ಮಿಕರು ಟ್ಯೂಬ್’ಗಳ ಸಹಾಯದಿಂದ ಯಮುನಾ ನದಿ ದಾಟಿ ಉತ್ತರ ಪ್ರದೇಶ ಪ್ರವೇಶಿಸುತ್ತಿದ್ದಾರೆ. ಹರಿಯಾಣದಿಂದ ಯಮುನಾ ನದಿ ದಾಟಿ ಉತ್ತರ ಪ್ರದೇಶದ ಸಹ್ರಾನ್’ಪುರಕ್ಕೆ ಪ್ರಯಾಣಿಸುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೋ ವೀಕ್ಷಿಸಿ

ಸಣ್ಣದಾದ ರಬ್ಬರ್ ಟ್ಯೂಬೊಂದರಲ್ಲಿ ನಾಲ್ಕು ಜನರನ್ನು ಅವರ ಲಗೇಜ್ ಸಮೇತ ಕುಳ್ಳಿರಿಸಿ, ಸ್ಥಳೀಯ ವ್ಯಕ್ತಿಯು ಟ್ಯೂಬನ್ನು ಎಳೆಯುತ್ತಾ ನದಿಯನ್ನು ಈಜಿ ದಾಟುತ್ತಿರುವ ಅಪಾಯಕಾರಿ ದೃಶ್ಯವು ಮನ ಕಲುಕುವಂತಿದೆ.

ಸುದ್ದಿ ತಿಳಿದ ಪೊಲೀಸರು ವಲಸಿಗರನ್ನು ನದಿ ದಾಟಲು ಸಹಾಯ ಮಾಡಿದ ಸ್ಥಳೀಯರ ಬಂಧಿಸಿದ್ದಾರೆ.

To Top
error: Content is protected !!
WhatsApp Join our WhatsApp group