ರಾಷ್ಟ್ರೀಯ ಸುದ್ದಿ

“ಬೇಕಿದ್ದರೆ ಬಸ್ಸುಗಳಿಗೆ ನಿಮ್ಮ ಬ್ಯಾನರ್ ಕಟ್ಟಿ, ಪೋಸ್ಟರ್ ಅಂಟಿಸಿ. ಆದರೆ ನಮ್ಮ ಸೇವೆಯನ್ನು ತಿರಸ್ಕರಿಸಬೇಡಿ”: ಯೋಗಿ ಸರಕಾರಕ್ಕೆ ಪ್ರಿಯಾಂಕಾ ಗಾಂಧಿ ಮನವಿ

ವಲಸೆ ಕಾರ್ಮಿಕರಿಗೆ ಬಸ್ಸು ವ್ಯವಸ್ಥೆಗೊಳಿಸುವಲ್ಲಿಯೂ ಅಡ್ಡ ಬಂದ ಯೋಗಿ ಸರಕಾರ!

ವರದಿಗಾರ(ಮೇ.20): ಲಾಕ್ ಡೌನ್ ಕಾರಣ ತತ್ತರಿಸಿರುವ ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸಲು ಪ್ರಿಯಾಂಕಾ ಗಾಂಧಿ 1000 ಬಸ್ಸುಗಳ ವ್ಯವಸ್ಥೆ ಮಾಡಿರುವುದು, ಯೋಗಿ ಸರಕಾರಕ್ಕೆ ನುಂಗಲಾಗದ ತುತ್ತಾಗಿದೆ.

ವಲಸೆ ಕಾರ್ಮಿಕರನ್ನು ಅವರವರ ಮನೆಗೆ ತಲುಪಿಸುವಲ್ಲಿ ಸರಕಾರವು ವಿಫಲವಾದ ಕಾರಣ, ವಿರೋಧ ಪಕ್ಷ ಕಾಂಗ್ರೆಸ್, ದೇಶದೆಲ್ಲೆಡೆ ವಲಸೆ ಕಾರ್ಮಿಕರ ಸಹಾಯ ಮಾಡುತ್ತಿದೆ. ಇದರ ಅಂಗವಾಗಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶದ ವಲಸೆ ಕಾರ್ಮಿಕರಿಗೆ 1000 ಬಸ್ಸುಗಳ ವ್ಯವಸ್ಥೆ ಮಾಡಿದ್ದರು.

ಈ ಮೊದಲು ಮೌನ ಪಾಲಿಸಿದ್ದ ಯೋಗಿ ಸರಕಾರ, ವ್ಯಾಪಕ ಆಕ್ರೋಶದ ನಂತರ ಪ್ರಿಯಾಂಕಾ ಗಾಂಧಿಯ ಪ್ರಸ್ತಾಪವನ್ನು ಸ್ವೀಕರಿಸಿತ್ತು. ಇದಾದ ನಂತರ ಸುರಕ್ಷಾ ಕ್ರಮದ ನೆಪವನ್ನು ಹೇಳಿ ಅಡ್ಡಿ ಪಡಿಸಿತ್ತು.  1000 ಬಸ್ಸುಗಳ ಚಾಲಕರ ಹಾಗೂ ಕಂಡಕ್ಟರ್’ಗಳ ಮಾಹಿತಿಯನ್ನು ಕೋರಿತ್ತು.

ಈ ವಿವರವನ್ನೂ ಕಾಂಗ್ರೆಸ್ ನೀಡಿದಾಗ, ಉತ್ತರ ಪ್ರದೇಶ ಸರಕಾರವು, ನೀಡಿದ 1049 ವಾಹನಗಳ ವಿವರಗಳ ಪ್ರಕಾರ, 879 ಬಸ್ಸುಗಳೆಂದೂ, ಉಳಿದವು ದ್ವಿಚಕ್ರ ವಾಹನಗಳೂ, ಗೂಡ್ಸ್ ಕ್ಯಾರಿಯರ್ ಹಾಗೂ ಆಂಬ್ಯುಲೆನ್ಸ್’ಗಳಾಗಿವೆ ಎಂದು ಹೇಳಿತ್ತು.  ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. 879 ಬಸ್ಸುಗಳಾಗಿದ್ದಲ್ಲಿ, ಆ ಬಸ್ಸುಗಳಿಗಾದರೂ ಅನುಮತಿ ನೀಡಿ ಎಂದು ನೆಟ್ಟಿಗರು ಯೋಗಿ ಆದಿತ್ಯನಾಥ್ ‘ಗೆ ವಿನಂತಿಸಿದ್ದಾರೆ.

ಈ ವಿಷಯದಲ್ಲಿ ಕೆಲವು ರಾಷ್ಟ್ರೀಯ ಮಾಧ್ಯಮಗಳು ಎಂದಿನಂತೆ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿದು, ವೀಕ್ಷಕರಿಗೆ  ತಿರುಚಿದ ಸುದ್ದಿ ತಲುಪಿಸುವ ವಿಫಲ ಪ್ರಯತ್ನವನ್ನೂ ನಡೆಸಿವೆ.

ಯೋಗಿ ಸರಕಾರವು ‘ಕೀಳು ಮಟ್ಟದ ‘ ರಾಜಕೀಯ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

“ಯೋಗಿ ಆದಿತ್ಯನಾಥ್ ಜೀ, ನೀವು ಬಯಸಿದರೆ ಈ ಬಸ್ಸುಗಳಲ್ಲಿ ಬಿಜೆಪಿಯ ಬ್ಯಾನರ್’ಗಳನ್ನು ಅಳವಡಿಸಬಹುದು. ನಿಮ್ಮ ಪೋಸ್ಟರ್’ಗಳನ್ನೂ ಅಂಟಿಸಬಹುದು. ಆದರೆ, ನಮ್ಮ ಸೇವೆಯ ಮನೋಭಾವವನ್ನು ತಿರಸ್ಕರಿಸಬೇಡಿ, ಯಾಕೆಂದರೆ ಈ ರಾಜಕೀಯದ ಆಟದಲ್ಲಿ ಈಗಾಗಲೇ ಮೂರು ದಿನಗಳು ವ್ಯರ್ಥವಾಗಿವೆ. ಈ ಮೂರು ದಿನಗಳಲ್ಲಿ ನಮ್ಮ ದೇಶವಾಸಿಗಳು ಬೀದಿಯಲ್ಲಿ ನಡೆಯುತ್ತಿರುವಾಗ ಸಾಯುತ್ತಿದ್ದಾರೆ” ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group