ವೀಡಿಯೋ

ವೀಡಿಯೋ-ಮಂಗಳೂರು: ಹಸಿವಿನಿಂದಿದ್ದ ತಾಯಿಯ ರೋಧನೆ; ಆಸರೆಯಾಗಿ ಮಾನವೀಯತೆ ಮೆರೆದ ಯುವಕರು!

ಹಸಿದವರಿಗೆ ಆಹಾರ ನೀಡುತ್ತಿರುವ ಸೈಫ್ ಸುಲ್ತಾನ್ ರ ಮಾನವೀಯ ಸೇವೆಗೆ ವ್ಯಾಪಕ ಮೆಚ್ಚುಗೆ!

ವರದಿಗಾರ (ಮೇ.19): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ತಾಯಿಯೊಬ್ಬರು ಹಸಿವಿನಿಂದಾಗಿ ರೋಧಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಾದ್ಯಂತ ವೈರಲ್ ಆಗಿದೆ.

ಲಾಕ್ ಡೌನ್ ಘೋಷಣೆಯಾದ ಬಳಿಕ ನಿರಂತರವಾಗಿ ಸಂಕಷ್ಟಕ್ಕೊಳಗಾದ ಜನರ ಕಣ್ಣೀರೊರೆಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವ  ಮಂಗಳೂರಿನ ಹೋಪ್ ಫೌಂಡೇಶನ್ ಇದರ ಸ್ಥಾಪಕರಾದ ಸೈಫ್ ಸುಲ್ತಾನ್ ರವರು ‘ಅಲ್ ಸಾದ್ ಜೆಪ್ಪು’ ಇವರ ಸಹಕಾರದೊಂದಿಗೆ ವಲಸೆ ಕಾರ್ಮಿಕರಿಗೆ ಮತ್ತು ಲಾಕ್ ಡೌನ್ ನಿಂದ ಕಷ್ಟಪಡುತ್ತಿರುವ ಬಡ ಜನತೆಗೆ, ಬೀದಿ ಬದಿ ವ್ಯಾಪಾರಸ್ಥರಿಗೆ, ಅನಾರೋಗ್ಯ ಪೀಡಿತರಿಗೆ, ಆಸ್ಪತ್ರೆಯಲ್ಲಿರುವ ಜನತೆಗೆ ಆಹಾರ, ಹಣ್ಣು ಹಂಪಲು, ಪಾನೀಯ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುತ್ತಲೇ ಬಂದಿದ್ದಾರೆ.

ಸೈಫ್ ಸುಲ್ತಾನ್, ಎರಡು ದಿನಗಳ ಹಿಂದೆ ಮಂಗಳೂರು ನಗರದಲ್ಲಿ ಎಂದಿನಂತೆಯೇ ಆಹಾರ ವಿತರಿಸುತ್ತಿರುವ ಸಂದರ್ಭದಲ್ಲಿ ಇವರ ಮುಂದೆ ಹಸಿವಿನಿಂದಿದ್ದ ತಾಯಿಯೊಬ್ಬರು ರೋಧಿಸುತ್ತಿರುವುದನ್ನು ಕಂಡು ಅತ್ಯಂತ ದುಃಖಿತರಾಗಿದ್ದಾರೆ. ತಕ್ಷಣ ತಾಯಿಯ ಹಸಿವಿಗೆ ಸ್ಪಂದಿಸಿದ್ದು, ಮುಂದಿನ ದಿನ ನಿಮಗೆ ನಾನು ಆಹಾರ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ತಾಯಿ ರೋಧಿಸುತ್ತಲೇ ಯುವಕನಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಇತ್ತೀಚೆಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರ ಸಂಬಂಧಿಕರು ‘ವರದಿಗಾರ’ ತಂಡವನ್ನು ಸಂಪರ್ಕಿಸಿ, ಆಹಾರದ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಒಂದಷ್ಟು ಆಹಾರವಿದ್ದರೆ ತಲುಪಿಸಿಕೊಡಿ ಎಂದಾಕ್ಷಣ ‘ವರದಿಗಾರ’ ತಂಡ ಸೈಫ್ ಸುಲ್ತಾರ್ ರನ್ನು ಸಂಪರ್ಕಿಸಿ ರೋಗಿಯ ಅವಶ್ಯಕತೆಯನ್ನು ಮುಂದಿಟ್ಟಿತ್ತು. ಕೆಲವೇ ನಿಮಿಷಗಳಲ್ಲಿ ಸ್ಪಂದಿಸಿದ ಇವರು ತಕ್ಷಣ ಆಸ್ಪತ್ರೆಗೆ ದಾವಿಸಿ ರೋಗಿಯ ಬಳಿ ತಲುಪಿ ಆಹಾರ ಸಾಮಾಗ್ರಿಗಳನ್ನು ನೀಡುತ್ತಾರೆ. ಹೀಗೆ ಹಲವರ ಸಂಕಷ್ಟಗಳಿಗೆ ರಾತ್ರಿ ಹಗಳೆನ್ನದೆ ಸೈಫ್ ಸುಲ್ತಾನ್ ಮತ್ತು ಮತ್ತವರ ತಂಡ ಸ್ಪಂದಿಸಿ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ಇವರ ದೈನಂದಿನ ಮಾನವೀಯ ಸೇವೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಸಬ್ ಚಂಗಾಸಿ..?!! ಮಂಗಳೂರಿನಲ್ಲಿ ಹಸಿವಿನಿಂದಿದ್ದ ತಾಯಿಯ ರೋಧನೆ!

Posted by Varadigara on Sunday, May 17, 2020

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group