ರಾಷ್ಟ್ರೀಯ ಸುದ್ದಿ

ಉತ್ತರ ಪ್ರದೇಶ: ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸಲು 1000 ಬಸ್ಸುಗಳ ವ್ಯವಸ್ಥೆ ಮಾಡಿದ ಪ್ರಿಯಾಂಕಾ ಗಾಂಧಿ

ಎರಡು ದಿನಗಳ ಮೌನದ ಬಳಿಕ ಪ್ರಸ್ತಾಪವನ್ನು ಸ್ವೀಕರಿಸಿದ ಯೋಗಿ ಸರಕಾರ

ಸುರಕ್ಷಾ ಕ್ರಮದ ನೆಪದಲ್ಲಿ ಮತ್ತೆ ಅಡಚಣೆ!

ವರದಿಗಾರ(ಮೇ.19): ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಭಾರತ ಸರಕಾರ ಜಾರಿಗೊಳಿಸಿದ ಲಾಕ್ ಡೌನ್ ಕಾರಣ, ದೇಶದಾದ್ಯಂತ ವಲಸೆ ಕಾರ್ಮಿಕರು ತಮ್ಮ-ತಮ್ಮ ಮನೆಗೆ ತಲುಪಲಾಗದೇ ತತ್ತರಿಸಿದ್ದಾರೆ.

ವಲಸೆ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಅದೆಷ್ಟೇ ವರದಿಗಳು ಬಂದರೂ, ಈ ಬಗ್ಗೆ ಸರಕಾರ ಸ್ಪಂದಿಸಿಲ್ಲ. ಹೀಗಿರುವಾಗ ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕರು ದೇಶದ ಹಲವು ಭಾಗಗಳಿಂದ ತಮ್ಮ ಊರಿಗೆ ಪ್ರಯಾಣಿಸಲು ಬಯಸುತ್ತಿರುವ ವಲಸೆ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಅದೇ ರೀತಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶದ ವಲಸೆ ಕಾರ್ಮಿಕರ ಪ್ರಯಾಣಕ್ಕೆ 1000 ಬಸ್ಸುಗಳ ವ್ಯವಸ್ಥೆ ಮಾಡಿದ್ದಾರೆ.

ಎರಡು ದಿನಗಳ ಹಿಂದೆ ಪ್ರಿಯಾಂಕಾ ಗಾಂಧಿ, ಗಾಜಿಪುರ ಹಾಗೂ ನೋಯ್ಡಾ ಗಡಿ ಪ್ರದೇಶಗಳಲ್ಲಿ ತಲಾ 500 ಬಸ್ಸುಗಳನ್ನು ಅನುಮತಿಸುವಂತೆ ಕೋರಿ ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.

ಬಸ್ಸುಗಳು ರಾಜಸ್ಥಾನದಿಂದ ಉತ್ತರಪ್ರದೇಶದ ಗಡಿ ತನಕ ತಲುಪಿದ್ದರೂ, ಸರಕಾರವು ಬಸ್ಸುಗಳಿಗೆ ಬೇಕಾದ ಅನುಮತಿ ನೀಡಿರಲಿಲ್ಲ. ರವಿವಾರದಂದು ಪ್ರಿಯಾಂಕಾ ಗಾಂಧಿ ಈ ಕುರಿತು ವೀಡಿಯೋದ ಮೂಲಕ “ಇದು ರಾಜಕೀಯದ ಸಮಯವಲ್ಲ, ನಮ್ಮ ಬಸ್ಸುಗಳು ಗಡಿಯಲ್ಲಿ ತಲುಪಿವೆ” ಎಂದು ಅನುಮತಿಗಾಗಿ ಮನವಿ ಸಲ್ಲಿಸಿದ್ದರು. ಈ ವೀಡಿಯೋ ಉತ್ತರ ಪ್ರದೇಶ ಸರಕಾರದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.

ಇದಾದ ನಂತರ, ಉತ್ತರಪ್ರದೇಶ ಸರಕಾರವು 1000 ಬಸ್ಸುಗಳ ಪ್ರಸ್ತಾಪವನ್ನು ಸ್ವೀಕರಿಸಿದೆ.

ಉತ್ತರ ಪ್ರದೇಶ ಸರಕಾರದ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ, ಪ್ರಸ್ತಾಪವನ್ನು ಸ್ವೀಕರಿಸುತ್ತಾ 1000 ಬಸ್ಸುಗಳ ಚಾಲಕರ ಬಗ್ಗೆ ಮಾಹಿತಿ ನೀಡಬೇಕೆಂದು ಹೇಳಿದ್ದಾರೆ.

ಪ್ರಿಯಾಂಕಾ ಅವರ ವೈಯಕ್ತಿಕ ಕಾರ್ಯದರ್ಶಿ ಸಂದೀಪ್ ಸಿಂಗ್ ಪ್ರಕಾರ ಕಾಂಗ್ರೆಸ್ ಪಕ್ಷವು ಬುಧವಾರದಿಂದ ವಲಸೆ ಕಾರ್ಮಿಕರನ್ನು ಬಸ್ಸುಗಳಲ್ಲಿ ಕೊಂಡು ಹೋಗಲು ತಯಾರಿತ್ತು. ಅನುಮತಿಗಾಗಿ ಮನವಿ ಸಲ್ಲಿಸಿದ ಇಮೈಲ್ ನಲ್ಲಿ 1000 ಬಸ್ಸುಗಳ ಚಾಲಕರ ವಿವರಗಳನ್ನು ಸಲ್ಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಇದಾದ ನಂತರ ಉತ್ತರ ಪ್ರದೇಶ ಸರಕಾರವು 1000 ಬಸ್ಸುಗಳ ಫಿಟ್’ನೆಸ್ ಸಟಿಫಿಕೇಟ್ ಹಾಗೂ ಎಲ್ಲಾ ಬಸ್ಸುಗಳ ಚಾಲಕರು ಹಾಗೂ ಕಂಡಕ್ಟರ್’ಗಳ ಸಂಪೂರ್ಣ ಮಾಹಿತಿ ನೀಡುವಂತೆ ಕೇಳಿಕೊಂಡಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group