ರಾಷ್ಟ್ರೀಯ ಸುದ್ದಿ

ಇದು ರಾಜಕೀಯದ ಆಟವಾಡುವ ಸಮಯವಲ್ಲ. ದಯವಿಟ್ಟು ದೇಶದ ಒಕ್ಕೂಟ ವ್ಯವಸ್ಥೆಯನ್ನು ನಾಶಗೊಳಿಸದಿರಿ: ಪ್ರಧಾನಿಗೆ ಮಮತಾ ಮನವಿ

‘ಕೊರೋನ ವೈರಸ್ ನಿಯಂತ್ರಿಸುವ ನೆಪದಲ್ಲಿ ಕೇಂದ್ರ ಸರಕಾರವು ರಾಜಕೀಯ ಮಾಡುತ್ತಿದೆ’

‘ಕೇಂದ್ರ ಸರಕಾರ ರಾಜ್ಯಗಳ ನಡುವೆ ತಾರತಮ್ಯವೆಸಗುತ್ತಿದೆ’

ವರದಿಗಾರ (ಮೇ.12): ಇದು ರಾಜಕೀಯದ ಆಟವಾಡುವ ಸಮಯವಲ್ಲ. ದಯವಿಟ್ಟು ದೇಶದ ಒಕ್ಕೂಟ ವ್ಯವಸ್ಥೆಯನ್ನು ನಾಶಗೊಳಿಸದಿರಿ ಎಂದು ಪ್ರಧಾನಿಗೆ ನರೇಂದ್ರ ಮೋದಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿಕೊಂಡಿದ್ದಾರೆ.

ಅವರು ನಿನ್ನೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಕೊರೋನ ವೈರಸ್ ನಿಯಂತ್ರಿಸುವ ನೆಪದಲ್ಲಿ ಕೇಂದ್ರ ಸರಕಾರವು ರಾಜಕೀಯ ಮಾಡುತ್ತಿದೆ ಮತ್ತು ರಾಜ್ಯಗಳ ನಡುವೆ ತಾರತಮ್ಯವೆಸಗುತ್ತಿದೆ ಎಂದು ಹೇಳಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇದು ರಾಜಕೀಯದ ಆಟವಾಡುವ ಸಮಯವಲ್ಲ. ನಮ್ಮ (ರಾಜ್ಯಗಳ) ಅಭಿಪ್ರಾಯಗಳನ್ನು ಯಾವತ್ತೂ ಕೇಳಲಾಗುವುದಿಲ್ಲ. ದಯವಿಟ್ಟು ದೇಶದ ಒಕ್ಕೂಟ ವ್ಯವಸ್ಥೆಯನ್ನು ನೆಲಸಮಗೊಳಿಸದಿರಿ’ ಎಂದು ಮಮತಾ ಬ್ಯಾನರ್ಜಿ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಹೇಳಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಕೇಂದ್ರ ಸರಕಾರವು ಯಾಕೆ ಯಾವತ್ತೂ ಪಶ್ಚಿಮ ಬಂಗಾಳವನ್ನು ಟೀಕಿಸುತ್ತಲೇ ಇದೆ. ಇಂದಿನ ಸಭೆಯಲ್ಲಿ ಕೊರೋನ ವೈರಸ್‌ ನಿರ್ವಹಣೆಯಲ್ಲಿ ಹಣಕಾಸಿನ ನೆರವು ನೀಡುವ ಬಗ್ಗೆ ಕೇಂದ್ರ ಸರಕಾರವು ಯಾವುದೇ ಮಾತನ್ನು ಆಡಿಲ್ಲ’ ಎಂದು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group