ರಾಷ್ಟ್ರೀಯ ಸುದ್ದಿ

ಸುಳ್ಳು ಸುದ್ದಿ ಬಿತ್ತರಿಸಿದ ನ್ಯೂಸ್18 ನಿರೂಪಕ ಅಮೀಶ್ ದೇವ್ ಗನ್ ವಿರುದ್ಧ ದೂರು ದಾಖಲು!

ಉದ್ರೇಕಕಾರಿ ಸುದ್ದಿ ಹರಡುವುದರಲ್ಲಿ ಕುಖ್ಯಾತನಾಗಿರುವ, ಬಲಪಂಥೀಯ ಪತ್ರಕರ್ತನ ವಿರುದ್ಧ ದೂರು ದಾಖಲಿಸಿದ ಮುಂಬೈ ಪೊಲೀಸ್!!

ವರದಿಗಾರ(ಮೇ.07): ನ್ಯೂಸ್18 ಚಾನೆಲಿನ ನಿರೂಪಕ ಅಮೀಶ್ ದೇವ್ ಗನ್ ವಿರುದ್ಧ, ತನ್ನ ‘ಆರ್-ಪಾರ್’ ಎಂಬ ಕಾರ್ಯಕ್ರಮದಲ್ಲಿ ಸುಳ್ಳು ಸುದ್ದಿ ಬಿತ್ತರಿಸಿದ್ದಕ್ಕಾಗಿ ಮುಂಬೈ ಪೊಲೀಸರು ದೂರು ದಾಖಲಿಸಿದ್ದಾರೆ.

ಮೇ 1 ರಂದು ತನ್ನ ‘ಆರ್-ಪಾರ್’ ಕಾರ್ಯಕ್ರಮದಲ್ಲಿ ಮುಂಬೈಯ ಕುರ್ಲಾದ ಮಸೀದಿಯಲ್ಲಿ ನಮಾಝ್ ಬಳಿಕ ಸೇರಿದ್ದ ಭಾರೀ ಜನಸ್ತೋಮ ಪೊಲೀಸರೊಂದಿಗೆ ತಪ್ಪಾಗಿ ವರ್ತಿಸಿದ್ದಾರೆಂದು ಸುಳ್ಳು ಸುದ್ದಿ ಬಿತ್ತರಿಸಿದ್ದನು.

ಏಪ್ರಿಲ್ 29ರಂದು ಕುರ್ಲಾದ ಪೈಪ್ ರೋಡ್ ನಲ್ಲಿ ಅಂಗಡಿಗಳನ್ನು ಮುಚ್ಚಿಸುತ್ತಿದ್ದ ಪೊಲೀಸರಿಗೆ, ತನ್ನನ್ನು ಐಬಿ ಅಧಿಕಾರಿಯೆಂದು ಹೇಳಿಕೊಂಡು ಸ್ಥಳೀಯ ವ್ಯಕ್ತಿಯೋರ್ವನು ಅವಹೇಳನ ಮಾಡಿದ್ದನು. ಪೊಲೀಸರ ಹಾಗೂ ಸ್ಥಳೀಯ ವ್ಯಕ್ತಿಯ ನಡುವಿನ ವಾಗ್ವಾದವನ್ನು ನೋಡಲು ಅಲ್ಲಿ ಜನ ಸೇರಿದ್ದರು. ಇದನ್ನು, ಮೇ 1ರಂದು ತನ್ನ ಕಾರ್ಯಕ್ರಮದಲ್ಲಿ ಅಮೀಶ್, ಮಸೀದಿಯಲ್ಲಿ ನಮಾಝಿಗೆ ಬಂದಿದ್ದ ಮುಸ್ಲಿಮರು ಪೊಲೀಸರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ತಿರುಚಿ ಹೇಳಿದ್ದನು.

ಲಾಕ್ಡೌನ್ ಮುಂಬೈ ಪೊಲೀಸರು ಸರಿಯಾಗಿ ಜಾರಿಗೊಳಿಸಲಾಗಿಲ್ಲ ಹಾಗೂ ಮುಸ್ಲಿಮರು ಕಾನೂನನ್ನು ಗೌರವಿಸುತ್ತಿಲ್ಲ ಎಂದು ತೋರಿಸಿ ಸಾರ್ವಜನಿಕರನ್ನು ಸಮುದಾಯವೊಂದರ ವಿರುದ್ಧ ಉದ್ರೇಕಿಸುವ ಪ್ರಯತ್ನ ನಡೆಸಿದ್ದ ಈ ಪತ್ರಕರ್ತನ ವೇಷದಲ್ಲಿರುವವನ ವಿರುದ್ಧ ‘ಪಬ್ಲಿಕ್ ಕೇರ್ ಫೌಂಡೇಷನ್’ ಎಂಬ NGO ಸ್ಥಾಪಕ ಶಹಝಾದ್ ಖಾನ್ ಕುರ್ಲಾ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಮೀಶ್ ದೇವ್ ಗನ್ ನ ಇನ್ನೂ ಹಲವು ಕಾರ್ಯಕ್ರಮಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಮೀಶ್, ಅರ್ನಾಬ್ ಗೋಸ್ವಾಮಿಯ ‘ಅಗ್ಗದ ನಕಲು’ ಎಂದೇ ತಿಳಿಯಲ್ಪಡುತ್ತಿದ್ದಾನೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group