ರಾಷ್ಟ್ರೀಯ ಸುದ್ದಿ

ಬಲಪಂಥೀಯ ಪತ್ರಕರ್ತ, ಝೀ ಟಿವಿ ನಿರೂಪಕ, ಸುಧೀರ್ ಚೌಧರಿ ವಿರುದ್ಧ FIR ದಾಖಲು!!

ತನ್ನ ‘ಜಿಹಾದ್ ಚಾರ್ಟ್’ ಮೂಲಕ ಇಸ್ಲಾಮೋಫೋಬಿಯಾ ಹರಡಲು ಪ್ರಯತ್ನಿಸಿದ ಬಿಜೆಪಿ ಪರ ಪತ್ರಕರ್ತ!

ಮುಸ್ಲಿಂ ವಿರೋಧಿ ಸುದ್ದಿಗಾಗಿ ಜಾಮೀನು ರಹಿತ FIR ದಾಖಲಿಸಿದ ಕೇರಳ ಪೊಲೀಸ್!

ವರದಿಗಾರ(ಮೇ.07):ಮುಸ್ಲಿಂ ವಿರೋಧಿ ಸುದ್ದಿಗಳಿಗಾಗಿ ಹಾಗೂ 2000 ರೂಪಾಯಿ ನೋಟಿನಲ್ಲಿ ‘ನ್ಯಾನೋ ಚಿಪ್’ ಕಂಡುಹಿಡಿದು ಕುಖ್ಯಾತನಾಗಿದ್ದ ಝೀ ಟಿವಿಯ ನಿರೂಪಕ ಸುಧೀರ್ ಚೌಧರಿ ವಿರುದ್ಧ ಕೇರಳ ಪೊಲೀಸರು ಜಾಮೀನು ರಹಿತ ಸೆಕ್ಷನ್ ಗಳಡಿಯಲ್ಲಿ FIR ದಾಖಲಿಸಿದ್ದಾರೆ.

ಝೀ ಟಿವಿಯ ‘ಎಡಿಟರ್ -ಇನ್ -ಚೀಫ್’ ಹಾಗೂ ಝೀ ಟಿವಿಯ ಪ್ರೈಮ್ ಟೈಮ್ ಕಾರ್ಯಕ್ರಮವಾದ ‘DNA’ ( Daily News and Analysis) ಯ ನಿರೂಪಕನಾಗಿದ್ದಾನೆ ಸುಧೀರ್ ಚೌಧರಿ.

FIR ಪ್ರಕಾರ ಸುಧೀರ್ ಚೌಧರಿ ಮಾರ್ಚ್ 11 ರಂದು ತನ್ನ DNA ಕಾರ್ಯಕ್ರಮದಲ್ಲಿ ಇಸ್ಲಾಮ್ ಧರ್ಮವನ್ನು ಅವಹೇಳಿಸುವ ಸುದ್ದಿಯನ್ನು ತನ್ನ ವೀಕ್ಷಕರಿಗೆ ಬಿತ್ತರಿಸಿದ್ದಾರೆ.

ಮಾರ್ಚ್ 11 ರಂದು ಸುಧೀರ್, ತನ್ನ ಕಾರ್ಯಕ್ರಮದಲ್ಲಿ ‘ಜಿಹಾದ್ ಚಾರ್ಟ್’ ಮಾಡಿ ತೋರಿಸಿ, ಜಿಹಾದಿನ ಹಲವು ಪ್ರಕಾರಗಳಿವೆಯೆಂದು, ಎಂದಿನಂತೆ ವಾಸ್ತವವಲ್ಲದ ಸುದ್ದಿಯನ್ನು ಬಿತ್ತರಿಸಿದ್ದನು. ಈ ಹಿಂದೆ ಹಿಂದುತ್ವ ಭಾಷಣಕಾರರು ತಮ್ಮ ವಿಷ ಕಾರುವ ಉದ್ರೇಕಕಾರಿ ಭಾಷಣಗಳಲ್ಲಿ ಈ ರೀತಿಯ ‘ಜಿಹಾದಿನ ಪ್ರಕಾರಗಳ’ ಬಗ್ಗೆ ಉಲ್ಲೇಖಿಸಿರುವುದನ್ನು ಇಲ್ಲಿ ನೆನಪಿಸಬಹುದಾಗಿದೆ.

FIR ಬಗ್ಗೆ ಟ್ವೀಟ್ ಮಾಡಿದ ಸುಧೀರ್, ಸತ್ಯವನ್ನು ಬಿತ್ತರಿಸಿದ್ದಕ್ಕಾಗಿ ತನಗೆ ದೊರೆತ ಪುಲಿಟ್ಝರ್ ಪ್ರಶಸ್ತಿಯಾಗಿದೆ FIR ಎಂದು ಹೇಳಿದ್ದಾರೆ. ಇದು ಜಮ್ಮುವಿನ ‘ಜಮೀನು ಜಿಹಾದ್’, ಕೇರಳದ ‘ಲವ್ ಜಿಹಾದ್’ ಬಗ್ಗೆ, ಹಾಗೂ CAA ವಿರೋಧಿ ಪ್ರತಿಭಟನೆಗಳಿಗೆ PFI ಹಣಕಾಸು ನೆರವಿನ ಬಗ್ಗೆ ಮಾತನಾಡಿದ್ದಕ್ಕೆ ಹಾಗೂ ಶಹೀನ್ ಬಾಗ್ ಪ್ರತಿಭಟನಾ ಸ್ಥಳಕ್ಕೆ ನುಸುಳಿದ್ದಕ್ಕಾಗಿ ತೆತ್ತ ಬೆಲೆಯಾಗಿದೆ ಎಂದು ಟ್ವೀಟ್ ಮಾಡಿ ತನ್ನ ಬಲಪಂಥೀಯ ಬೆಂಬಲಿಗರ ಸಹಾನುಭೂತಿಯನ್ನು ಪಡೆಯುವ ಪ್ರಯತ್ನವನ್ನೂ ನಡೆಸಿದ್ದಾನೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group