ರಾಷ್ಟ್ರೀಯ ಸುದ್ದಿ

ಕರಾಳ ಕಾನೂನಿನ ವಿರುದ್ಧ ಹೋರಾಡಿದ್ದ ಸಫೂರಾ ಝರ್ಗಾರ್ ವಿರುದ್ಧ ಐಟಿ ಸೆಲ್ ದುಷ್ಟರ ‘ಸಂಘ ಸಂಸ್ಕೃತಿ’ !

ಮೂರು ತಿಂಗಳ ಗರ್ಭಿಣಿಯ ವಿರುದ್ಧ UAPA ಕರಾಳ ಕಾನೂನು ಅಸ್ತ್ರ!

ದೇಶದ ಹಿತಕ್ಕಾಗಿ ಹೋರಾಡಿದ ಹೆಣ್ಣುಮಗಳ ವ್ಯಥೆ!

ವರದಿಗಾರ(ಮೇ.08): CAA ವಿರುದ್ಧ ಪ್ರತಿಭಟನೆಯಲ್ಲಿ ದೇಶದಾದ್ಯಂತ ವಿದ್ಯಾರ್ಥಿಗಳು ರಸ್ತೆಗಿಳಿದದ್ದು ನಮಗೆಲ್ಲರಿಗೂ ತಿಳಿದ ವಿಷಯ. ಆದರೆ, ಕೆಲವೊಂದು ವಿದ್ಯಾಸಂಸ್ಥೆಗಳಲ್ಲಿ ಪ್ರತಿಭಟನೆಯನ್ನು ದಮನಿಸುವ ನೆಪದಲ್ಲಿ ಪೊಲೀಸರ ಅತಿರೇಕದ ಕಾರಣ ಅಲ್ಲಿಯ ಪ್ರತಿಭಟನೆಗಳು ದೇಶದ ಗಮನ ಸೆಳೆದಿತ್ತು ಹಾಗೂ ಮಾಧ್ಯಮಗಳ ಅಬ್ಬರಕ್ಕೂ ಕಾರಣವಾಗಿತ್ತು.

ಜಾಮಿಯ ಮಿಲ್ಲಿಯ ಇಸ್ಲಾಮಿಯಾದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಪರ ಹೋರಾಟಗಾರ್ತಿ, PhD ವಿದ್ಯಾರ್ಥಿ ಸಫೂರಾ ಝರ್ಗಾರ್ ಮುಂಚೂಣಿಯಲ್ಲಿದ್ದರು.

ಇದೀಗ ಕೊರೋನಾ ಮಹಾಮಾರಿಯ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ ನಂತರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಲಾರಂಭಿಸಿದ್ದಾರೆ. CAA ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಕೆಲವು ಮುಸ್ಲಿಮ್ ಕಾರ್ಯಕರ್ತರ ವಿರುದ್ಧ ಯುಎಪಿಎ (UAPA) ಕಾಯ್ದೆಯಡಿಯಲ್ಲಿ ಕೇಸು ದಾಖಲಾಗಿಸಲಾಗಿದೆ.

ಯುಎಪಿಎ ಕಾಯ್ದೆಯಡಿಯಲ್ಲಿ ಆರೋಪ ಸಾಬೀತು ಪಡಿಸಲು ಪೊಲೀಸರಿಗೆ ಆರು ತಿಂಗಳುಗಳ ಕಾಲಾವಕಾಶವಿದೆ. ಸಫೂರಾ ಝರ್ಗಾರ್ ವಿರುದ್ಧವೂ ಯುಎಪಿಎ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿ, ಅವರನ್ನು ಏಪ್ರಿಲ್ 10ರಂದು ಪೊಲೀಸರು ಬಂಧಿಸಿದ್ದಾರೆ.

ಲಾಕ್ಡೌನ್ ಸಮಯದಲ್ಲಿ ಸಂವಿಧಾನಬದ್ದ ಪ್ರತಿಭಟನಾಕಾರರ ವಿರುದ್ಧ ಉಗ್ರ ನಿರೋಧಕ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ, ಬಂಧಿಸಿರುವುದರ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ, ಮೂರು ತಿಂಗಳ ಗರ್ಭಿಣಿಯ ವಿರುದ್ಧ ಯುಎಪಿಎ ದಾಖಲಿಸಿ ಬಂಧಿಸಿರುವ ಸರಕಾರದ ಕ್ರಮವು ಮಾನವ ಹಕ್ಕುಗಳ ಉಲ್ಲಂಘನೆ ಎಂದೂ ಹಲವರು ಅಕ್ರೋಶ ವ್ಯಕ್ತಪಡಿಸಿದ್ದರು, ಕೆಲವು ದಿನಗಳವರೆಗೆ ಸಫೂರಾ ಝರ್ಗಾರ್ ಸಾಮಾಜಿಕ ಜಾಲತಾಣಗಳಲ್ಲಿ ‘ಟ್ರೆಂಡಿಂಗ್ ಟಾಪಿಕ್’ ಆಗಿದ್ದರು.

ಸರಕಾರದ ಯಾವುದೇ ಕ್ರಮವನ್ನು ಬೆಂಬಲಿಸಲು ಹಾಗೂ ವಿರೋಧಿಸುವವರಿಗೆ ‘ದೇಶ ವಿರೋಧಿ’ ಪಟ್ಟವನ್ನು ನೀಡಲು ಯಾವತ್ತೂ ತಯಾರಿರುವ ಐಟಿ ಸೆಲ್ ಗುಲಾಮರಿಗೆ, ಈ ಪ್ರಕರಣದಲ್ಲಿ ಸಫೂರಾ ಝರ್ಗಾರ್ ಪರ ಸಹಾನುಭೂತಿ ವ್ಯಕ್ತವಾಗುತ್ತಿರುವುದು ಸಹಿಸಲಾಗದಾಯಿತು.

ಸಫೂರಾ ವಿರುದ್ಧ ಅಶ್ಲೀಲ ಸಂದೇಶಗಳನ್ನು ಹರಡಲು ತೀರ್ಮಾನಿಸಿದ ಐಟಿ ಸೆಲ್ ಕಾಲಾಳುಗಳು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಕೃತಿಯನ್ನು ಮೆರೆದರು.

ಸಫೂರಾ ವಿರುದ್ಧ ಹರಡಿದ ಸುಳ್ಳು ಸುದ್ದಿಗಳು ಇಂತಿವೆ:-

ಸುಳ್ಳು ಸುದ್ದಿ:- “ಸಫೂರಾ ಅವಿವಾಹಿತೆ ಗರ್ಭಿಣಿ”
ವಾಸ್ತವ:- ಸಫೂರಾ ವಿವಾಹಿತೆಯಾಗಿದ್ದು, ಆಕೆಯ ವಿವಾಹದ ಚಿತ್ರಗಳೂ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಿದೆ (ಅವರ ವೈಯಕ್ತಿಕ್ತ ಜೀವನದ ಗೌಪ್ಯತೆಯನ್ನು ಗೌರವಿಸುವ ಕಾರಣ ಆ ಚಿತ್ರಗಳನ್ನು ನಾವು ಪ್ರಕಟಿಸುತ್ತಿಲ್ಲ). ಅದಲ್ಲದೆ ಬಂಧನಕ್ಕೆ ಮುನ್ನ ನಡೆದ ಸಂದರ್ಶನಗಳಲ್ಲಿ ಸಫೂರಾ ತನ್ನ ಪತಿಯ ಬಗ್ಗೆ ಉಲ್ಲೇಖಿಸುತ್ತಿರುವ ವೀಡಿಯೋಗಳೂ ಇವೆ.

ಸುಳ್ಳು ಸುದ್ಧಿ:- “ಬಂಧನದ ನಂತರ ಜೈಲಿನಲ್ಲಿ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ ಗರ್ಭಿಣಿಯಾಗಿರುವುದು ತಿಳಿದು ಬಂದಿತು”
ವಾಸ್ತವ:- ಆಕೆಯ ಬಂಧನದ ಸುದ್ದಿ ಪ್ರಕಟಿಸುವಾಗಲೇ ಮಾಧ್ಯಮಗಳು ಆಕೆ ಮೂರು ತಿಂಗಳ ಗರ್ಭಿಣಿ ಎನ್ನುವುದನ್ನೂ ವರದಿ ಮಾಡಿದ್ದವು.

ಇದಲ್ಲದೇ, ತಲೆ ಕೆಟ್ಟ ಐಟಿ ಸೆಲ್ ಕಾಲಾಳುಗಳು, ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ಆಕೆಯ ಗರ್ಭಧಾರಣೆಯನ್ನು ಶಹೀನ್ ಬಾಗ್ ಪ್ರತಿಭಟನೆಯೊಂದಿಗೆ ಜೋಡಿಸಿ, “ಪ್ರತಿಭಟನೆಯಲ್ಲಿ ಭಾಗವಹಿಸಿದ ಅವಿವಾಹಿತ ಯುವತಿಯ ಗರ್ಭಧಾರಣೆ” ಎಂದೂ ತಮ್ಮ ಅಶ್ಲೀಲ ಮನಸ್ಸುಗಳನ್ನು ಜಗಜ್ಜಾಹೀರುಗೊಳಿಸಿದ್ದಾರೆ.

ಇನ್ನು ಕೆಲವರು ಇಂಟರ್ನೆಟ್’ನಲ್ಲಿ ಲಭ್ಯವಿರುವ ಅಶ್ಲೀಲ ಚಿತ್ರಗಳನ್ನುಪಯೋಗಿಸಿ, “ಶಹೀನ್ ಬಾಗ್ ಪ್ರತಿಭಟನೆಯ ಹೆಸರಿನಲ್ಲಿ ಸರಸ ಸಲ್ಲಾಪ ನಡೆಸುತ್ತಿರುವ ಸಫೂರ” ಎಂದೂ ಸಂದೇಶಗಳನ್ನು ಹರಿಯಬಿಟ್ಟಿದ್ದಾರೆ.

ಒಟ್ಟಿನಲ್ಲಿ, ಸರಕಾರದ ವಿರುದ್ಧ ಸಂವಿಧಾನಬದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡ ಹೆಣ್ಣುಮಗಳ ವಿರುದ್ಧ ಕಾನೂನನ್ನು ದುರುಪಯೋಗಪಡಿಸುತ್ತಿರುವ ಸರಕಾರ, ಪೊಲೀಸ್ ಇಲಾಖೆ ಒಂದು ಕಡೆಯಾದರೆ, ಆಕೆಯ ವಿರುದ್ಧ ಅಶ್ಲೀಲ ಹಾಗೂ ಸುಳ್ಳಿ ಸುದ್ದಿಗಳನ್ನು ಹರಡಿ ವಿಕೃತ ಸಂತೋಷ ಪಡೆಯುತ್ತಿರುವ ಐಟಿ ಸೆಲ್ ದಂಡ- ಪಿಂಡಗಳು ಇನ್ನೊಂದು ಕಡೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group