ಜಿಲ್ಲಾ ಸುದ್ದಿ

ದಕ್ಷಿಣ ಕನ್ನಡ; ಸರ್ಕಾರದ  ಕಿಟ್ ಗಳನ್ನು  ಬಿಜೆಪಿ ತನ್ನ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ: ಎಸ್.ಡಿ.ಪಿ.ಐ ಆರೋಪ

  1. “ಬಿಜೆಪಿಯ ತಾಳಕ್ಕೆ ಕುಣಿಯುತಿದ್ದ ಸಹಾಯಕ ಜಿಲ್ಲಾಧಿಕಾರಿ”

40,000ಕ್ಕೂ ಅಧಿಕ ಪಾಸ್ ವಿತರಣೆಯಲ್ಲಿ ಅಕ್ರಮ?

ವರದಿಗಾರ (ಮೇ.4):  ‘ಕೋವಿಡ್-19 ಕೊರೋನಾ ವೈರಸ್ ಲಾಕ್ ಡೌನ್ ನ‌ ಈ ಸಂದರ್ಭದಲ್ಲಿ ದ.ಕ ಜಿಲ್ಲಾಡಳಿತದ ಆಡಳಿತ ವೈಫಲ್ಯಗಳು ಮತ್ತು ಬಿಜೆಪಿಯ ರಾಜಕೀಯ ಒತ್ತಡಕ್ಕೆ ಮಣಿದು ಬಿಜೆಪಿ ಪಕ್ಷಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಪದೇ ಪದೇ ಪುನರಾವರ್ತನೆ ಆಗುತ್ತಲೇ ಇದೆ. ಈ ವಿಷಮ ಪರಿಸ್ಥಿತಿಯಲ್ಲಿ ಜನಸಾಮಾನ್ಯರ ನಡುವೆ ಸುರಕ್ಷಿತ ಅಂತರ ಕಾಪಾಡುವ ನಿಟ್ಟಿನಲ್ಲಿ ಮತ್ತು ಆಹಾರ ಸಾಮಗ್ರಿಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಹಲವಾರು ‌ಸಮಾಜ ಸೇವಕರು ಮತ್ತು ಸಂಘಸಂಸ್ಥೆಗಳು ಪಾಸ್ ಗಾಗಿ ಅರ್ಜಿ ಸಲ್ಲಿಸಿದ್ದವು, ಆದರೆ ಇವರಿಗೆ ಪಾಸ್ ವಿತರಿಸಲು ಸಾರಾಸಗಟಾಗಿ ತಳ್ಳಿಹಾಕಿದ್ದ ಜಿಲ್ಲಾಡಳಿತ ಈಗ ಒಟ್ಟು 40,000 ಕ್ಕೂ ಅಧಿಕ E-PASS ಗಳನ್ನು ಹಾಗೂ ಇದರೊಂದಿಗೆ ವಾಹನ ಪಾಸ್ ಮತ್ತು ಮ್ಯಾನುವಲ್ ಪಾಸ್ ಗಳನ್ನು ವಿತರಣೆ ಮಾಡಿದ್ದಾರೆ ಎಂಬ ವಿವರ ಬೆಳಕಿಗೆ ಬರುತ್ತಿದೆ .ಆದರೆ ಅತ್ಯವಶ್ಯಕವಾಗಿರುವ ಅನೇಕರಿಗೆ ಸಿಗದ ಈ ಪಾಸ್ ಗಳು 40,000 ಅಧಿಕ ಯಾರಿಗೆ ವಿತರಣೆಯಾಗಿದೆ ಎಂಬುದನ್ನು ಬಹಿರಂಗ ಪಡಿಸಬೇಕು’ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಎಸ್.ಡಿ.ಪಿ.ಐ,  ‘ಮಂಗಳೂರಿನ ಸಹಾಯಕ ಕಮಿಷನರ್ ಮಧನ್ ಮೋಹನ್ ರವರು ಪಕ್ಷ ಬೇದ ತೋರಿ ಬಿಜೆಪಿಯವರಿಗೆ ಬೇಕಾಬಿಟ್ಟಿಯಾಗಿ ವಿತರಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದು ಖಂಡನಾರ್ಹ ಮತ್ತು ಇದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದೆ.

‘ಅದೇ ರೀತಿಯಲ್ಲಿ ಪಾಸ್ ಗಳ ವಿತರಣೆಯಲ್ಲಿ ಅವ್ಯವಹಾರ ನಡೆಸಿದಂತೆ ಬಡವರಿಗೆ ನೀಡುವ ಆಹಾರದ ಕಿಟ್ ನಲ್ಲೂ ಬಿಜೆಪಿ ದ್ವೇಷ ರಾಜಕೀಯ ಮತ್ತು ಅವ್ಯಹಾರ ನಡೆಸಿದೆ. ಸಾರ್ವಜನಿಕರು, ದಾನಿಗಳು, ಸಂಘಸಂಸ್ಥೆಗಳು ಈ ಸಂಕಷ್ಟದ ಸಮಯದಲ್ಲಿ ಸರ್ಕಾರಗಳ ಮನವಿಗೆ ಸ್ಪಂದಿಸಿ ಕೋವಿಡ್-19 ಪರಿಹಾರ ನಿಧಿಗೆ ಕೋಟಿಗಟ್ಟಲೇ ಹಣ ಸಂದಾಯ ಮಾಡಿದ್ದರೂ ಉದಾರ ಧಾನಿಗಳು ನೀಡಿದ ಆಹಾರ ಸಾಮಗ್ರಿಗಳನ್ನು ‌ಸಂಘಪರಿವಾರದ ಕಛೇರಿಯಲ್ಲಿ ರೀಪ್ಯಾಕಿಂಗ್ ಮಾಡಿ ಬಿಜೆಪಿ ಪಕ್ಷದ ಪೋಸ್ಟರ್ ಅಂಟಿಸಿ ಬಿಜೆಪಿ ಮತ್ತು ಮೋದಿ ಕಿಟ್ ಎಂಬಂತೆ ಬಿಂಬಿಸಿ ಜನರನ್ನು ಮರಳು ಮಾಡಲು ಪ್ರಯತ್ನಪಟ್ಟಿರುವುದು ದ.ಕ ಜಿಲ್ಲಾಡಳಿತದ ಆಡಳಿತದ ವೈಫಲ್ಯವಾಗಿದೆ. ಜಿಲ್ಲಾಡಳಿತ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಹಾಗೂ ಇದನ್ನು ವಿತರಣೆ ಮಾಡುವ ಸಮಯದಲ್ಲೂ ಕೂಡ ಬಿಜೆಪಿ ತಾರತಮ್ಯ ಮಾಡಿದೆ, ಸರ್ಕಾರದ ಅಧಿಕಾರಿಗಳ ಮೂಲಕ ಅರ್ಹರಿಗೆ ವಿತರಣಯಾಗಬೇಕಿದ್ದ ಆಹಾರ ಕಿಟ್ ಗಳು ಬಿಜೆಪಿ ಕಾರ್ಯಕರ್ತರ ಮೂಲಕ ಅಧಿಕವಾಗಿ ಬಿಜೆಪಿ ಕಾರ್ಯಕರ್ತರ ಮತ್ತು ತಮಗೆ ಬೇಕಾದವರ ಮನೆಗಳಿಗೆ ಮತ್ತು ಬಿಜೆಪಿ ಜನಪ್ರತಿನಿಧಿಗಳ ವಾರ್ಡ್ ಗಳಿಗೆ ಮಾತ್ರ ವಿತರಣೆ ಮಾಡುತ್ತಿದ್ದಾರೆ’ ಎಂದು ಎಸ್.ಡಿ.ಪಿ.ಐ ಗಂಭೀರ ಆರೋಪ ಮಾಡಿವೆ,

‘ಜಿಲ್ಲಾಡಳಿತದ ಮೌನ ಸಮ್ಮತಿಯೇ ಇಷ್ಟೆಲ್ಲಾ ಅವ್ಯವಹಾರಗಳು ನಡೆಯಲು ಕಾರಣ. ಇದರ ಬಗ್ಗೆ ಸರಕಾರ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಅದಲ್ಲದೆ ಲಾಕ್ ಡೌನ್ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಮರು ಸೇರ್ಪಡೆಗೊಳಿಸಬಾರದೆಂದು’ ಎಸ್. ಡಿ.ಪಿ.ಐ ಪಕ್ಷದ ಮಂಗಳೂರು ದಕ್ಷಿಣ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸುಹೈಲ್ ಖಾನ್ ಒತ್ತಾಯಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group