ರಾಷ್ಟ್ರೀಯ ಸುದ್ದಿ

ಕೋವಿಡ್-19; ದೇಶದಾದ್ಯಂತ ಮೇ 17ರ ವರೆಗೆ ಲಾಕ್ ಡೌನ್ ಮುಂದೂಡಿಕೆ

ವರದಿಗಾರ (ಮೇ.01): ಕೊರೋನಾ ಮಹಾಮಾರಿಯು ದೇಶದಲ್ಲಿ ವಿಸ್ತರಿಸುತ್ತಿರುವುದರಿಂದ ಇದನ್ನು ತಡೆಗಟ್ಟಲು ಮೇ. 03 ರ ವರೆಗೆ ಘೋಷಿಸಲಾಗಿದ್ದ ಲಾಕ್ ಡೌನ್ ನ್ನು ಮೇ 17 ರವರೆಗೆ ವಿಸ್ತರಿಸಿ ಕೇಂದ್ರ ಸರಕಾರ ಶುಕ್ರವಾರ ಆದೇಶಿಸಿದೆ.

ಮುಂದಿನ ಲಾಕ್ ಡೌನ್ ಸಂದರ್ಭ ಗ್ರೀನ್ ಮತ್ತು ಆರೆಂಜ್ ಝೋನ್ ಗಳಲ್ಲಿ ಅಲ್ಪ ಮಟ್ಟಿನ ಸಡಿಲಿಕೆ ಇರಲಿದೆ. ಆದರೆ ರೆಡ್ ಝೋನ್ ನಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ ಎಂದು ಕೇಂದ್ರ ಸರಕಾರ ಆದೇಶದಲ್ಲಿ ಸೂಚನೆ ನೀಡಿದೆ.

ಇತ್ತೀಚೆಗೆ ಕೇಂದ್ರಸರಕಾರವು ಎರಡನೇ ಹಂತದ ಲಾಕ್‌ಡೌನ್‌ನ್ನು ಮೇ 3ರ ತನಕ ವಿಸ್ತರಣೆ ಮಾಡಿತ್ತು. ಇದೀಗ ಮೂರನೇ ಹಂತದ ಲಾಕ್‌ಡೌನ್‌ನ್ನು ಮೇ 4ರ ಬಳಿಕವೂ ವಿಸ್ತರಣೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಈ ಬಗ್ಗೆ ತನ್ನ ಆದೇಶವನ್ನು ಹೊರಡಿಸಿದೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group