ಜಿಲ್ಲಾ ಸುದ್ದಿ

ಕಿಟ್ ವಿತರಣೆಯಲ್ಲಿ ಮಂಗಳೂರು ಪೋರ್ಟ್ ಅಧ್ಯಕ್ಷರಿಂದ ತಾರತಮ್ಯ ನೀತಿ; ಎಸ್ ಡಿಪಿಐ ಆರೋಪ

ಬಿಜೆಪಿ ಕಾರ್ಪೋರೇಟರ್ ಇರುವ ವಾರ್ಡ್ ಗಳಿಗೆ ಮಾತ್ರ ಕಿಟ್!

ವರದಿಗಾರ (ಎ.30): ಕೇಂದ್ರ ಸರ್ಕಾರದ ಆಧೀನದಲ್ಲಿರುವ ನವ ಮಂಗಳೂರು ಬಂದರು ಆಡಳಿತ ಮಂಡಳಿ ಕೊರೊನಾ ಸಂಕ್ರಾಮಿಕ ರೋಗದ ಸಂಕಷ್ಟ ಈ ಸಂದರ್ಭದಲ್ಲಿ ಬಿಜೆಪಿ ಕಾರ್ಪೊರೇಟರ್ ಇರುವ ಬೈಕಂಪಾಡಿ, ಸುರತ್ಕಲ್ ಪರಿಸರದ 5 ವಾರ್ಡ್ ಗಳ ಮೀನುಗಾರ ಸಮುದಾಯಕ್ಕೆ ಮಾತ್ರ ಆಹಾರ ಸಾಮಗ್ರಿಗಳ ಕಿಟ್ ನ್ನು ಬಂದರು ಮಂಡಳಿ ಅಧ್ಯಕ್ಷರು ನೀಡಿದ್ದಾರೆ ಎಂದು ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಗಂಭೀರವಾಗಿ ಆರೋಪಿಸಿದ್ದು, ಇದು ತಾರತಮ್ಯ ಧೋರಣೆ ಎಂದು ಹೇಳಿದ್ದು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಎಸ್.ಡಿ.ಪಿ.ಐ  ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಪತ್ರಿಕಾ ಪ್ರಕಣೆಯನ್ನು ನೀಡಿದ್ದು, ‘ನವ ಮಂಗಳೂರು ಬಂದರ್ ನಿರ್ಮಾಣಕ್ಕಾಗಿ ಅಲ್ಲಿನ ತಮ್ಮ ಬದುಕು ಬಿಟ್ಟು, ಸರ್ವಸ್ವವನ್ನೂ ತ್ಯಾಗ ಮಾಡಿದ, ಕೃಷ್ಣಾಪುರ ಕಾಟಿಪಾಳ್ಳ, ಬೆಂಗರೆ ಪ್ರದೇಶದ ಜನ ಪೋರ್ಟ್ ಗಾಗಿ ತಮ್ಮ ಜಮೀನು ತ್ಯಾಗ ಮಾಡಿ ಬಿಟ್ಟುಕೊಟ್ಟವರು. ಕೊರೋನದ ಈ ಸಂದರ್ಭದಲ್ಲಿ ಬಡವರು ಮತ್ತು ಕಾರ್ಮಿಕರೇ ಹೆಚ್ಚಾಗಿರುವ ಕೃಷ್ಣಾಪುರ, ಕಾಟಿಪಳ್ಳ, ಬೆಂಗರೆ ಪರಿಸರದ ಮನೆಗಳಿಗೆ ಅಗತ್ಯ ವಸ್ತುಗಳ ಕಿಟ್ ನ ಬಹಳ ಅಗತ್ಯವಿದೆ.’ಆದರೆ ಬಿಜೆಪಿ ಕಾರ್ಪೊರೇಟರ್ ವಾರ್ಡ್ ಗೆ ಮಾತ್ರ ‌ಸೀಮಿತಗೊಳಿಸಿ ವಿತರಿಸಿದ ಮಂಡಳಿಯ ನಿರ್ಧಾರ ಸರಿಯಲ್ಲ. ಮಂಡಳಿಯ ಅಧ್ಯಕ್ಷರು ನವ ಮಂಗಳೂರು ಬಂದರು ಸ್ಥಳೀಯರ ಸೊತ್ತು ಎಂದು ಅರ್ಥಮಾಡಿಕೊಂಡು ಇಲ್ಲಿನ ಜನರಿಗೆ ಈ ಕಷ್ಟದ ದಿನಗಳಲ್ಲಿ ಸಹಾಯ ಮಾಡುವ ಅಗತ್ಯವಿದೆ ಮತ್ತು ಅದು ಜನರಿಗೆ ನೀಡುವ ಗೌರವವೂ ಹೌದು’ ಎಂದು ಹೇಳಿದೆ.

ಈ ಬಗ್ಗೆ ಬೆಂಗರೆ, ಕಾಟಿಪಳ್ಳ, ಕೃಷ್ಣಾಪುರದ ಎಲ್ಲಾ ಕಾರ್ಪೊರೇಟರ್ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಂದರು ಮಂಡಳಿ ಮುಂದುವರಿಯಬೇಕೆಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group