ಸಾಮಾಜಿಕ ತಾಣ

ಪತ್ರಕರ್ತರಿಗೆ ತಗುಲಿರುವ ಕೊರೋನವನ್ನು “ಮೀಡಿಯಾ ವೈರಸ್” ಎನ್ನಬೇಡಿ: ಯಾಸಿರ್ ಹಸನ್

ವರದಿಗಾರ (ಎ.26): ರಾಜ್ಯದ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಕೋವಿಡ್ 19 ಧೃಡಪಟ್ಟಿರುವ ಕಾರಣಕ್ಕೆ ಅದನ್ನು “ಮೀಡಿಯಾ ವೈರಸ್” ಎಂದು ಕೆರೆಯಬೇಡಿ ಎಂದು ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ರವರು ಕರೆ ನೀಡಿದ್ದಾರೆ.

ಕೋವಿಡ್ 19 ವಿಶ್ವಕ್ಕೆ ಮಹಾಮಾರಿಯಾಗಿ ಅಪ್ಪಳಿಸಿ, ಎರಡು ಲಕ್ಷಕ್ಕೂ ಮಿಕ್ಕಿದ ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲೂ ಕೂಡಾ ಕೋವಿಡ್ ವೈರಸ್ ಗೆ ತುತ್ತಾಗಿ ಈಗಾಗಲೇ 779 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಕರ್ನಾಟಕ ರಾಜ್ಯದಲ್ಲಿ 18 ಮಂದಿ ಸಾವನಪ್ಪಿದ್ದಾರೆ. ನಮ್ಮ ದೇಶದಲ್ಲಿ ಕೊರೋನದಿಂದಾಗಿ ಸಾವನ್ನಪ್ಪಿದವರ ಸಂಖ್ಯೆಯಲ್ಲಿ 301 ಸಾವಿನೊಂದಿಗೆ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ.

ಕೊವಿಡ್ 19 ಸೋಂಕಿತರ ಪಟ್ಟಿ ಬೆಳೆಯುತ್ತಿದ್ದಂತೆ ಈ ಸುದ್ದಿಗಳನ್ನು ವರದಿ ಮಾಡಲು ತೆರಳಿದ್ದ ಮಹಾರಾಷ್ಟ್ರ, ದಿಲ್ಲಿ ಮುಂತಾದ ರಾಜ್ಯಗಳ ಮಾಧ್ಯಮ ಪ್ರತಿನಿಧಿಗಳಿಗೂ ಕೋವಿಡ್ ಸೋಂಕು ಹರಡಿದ್ದ ಸುದ್ದಿಯಾಗಿತ್ತು. ಇದೀಗ ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳಿಗೂ ಕೊರೋನ ಧೃಡ ಪಟ್ಟಿರುವ ಬಗ್ಗೆ ವರದಿಯಾಗಿದೆ. ಜಾತಿ, ಧರ್ಮ, ದೇಶಗಳೆಂಬ ಭೇಧವಿಲ್ಲದೆ ಆವರಿಸುತ್ತಿರುವ ಈ ರೋಗವನ್ನು ಬಾರತದಲ್ಲಿ ಮಾತ್ರ ನಿರ್ಧಿಷ್ಟ ಧರ್ಮದೊಂದಿಗೆ ತಳುಕು ಹಾಕಿ ಅತೀ ರಂಜಿತವಾಗಿ ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಇದೀಗ ಮಾಧ್ಯಮ ಪ್ರತಿನಿಧಿಗಳಿಗೂ ಕೋವಿಡ್ 19 ಧೃಡವಾದ ಕಾರಣ ಮಾಧ್ಯಮಗಳ ಈ ವರದಿಗಳಿಂದ ಬೇಸತ್ತಿರುವ ಜನಸಾಮಾನ್ಯರು ಇದನ್ನು ಸಾಮಾಜಿಕ ತಾಣಗಳಲ್ಲಿ ಮೀಡಿಯಾ ವೈರಸ್ ಎಂದು ಕೆರೆಯ ತೊಡಗಿದ್ದಾರೆ.

ಈ ಬಗ್ಗೆ ಪಾಪ್ಯುಲರ್ ಫ್ರಂಟ್ ನ ನೂತನ ರಾಜ್ಯಾಧ್ಯಕ್ಷರಾಗಿರುವ ಯಾಸಿರ್ ಹಸನ್ ರವರು “ರಾಜ್ಯದ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಕೋವಿಡ್ 19 ವರದಿಯಾಗಿದೆ. ಕೊರೋನವನ್ನು ಒಂದು ನಿರ್ದಿಷ್ಟ ಧರ್ಮದೊಂದಿಗೆ ತಳುಕು ಹಾಕಿಸಿ ವರ್ಣರಂಜಿತ ವರದಿಗಳನ್ನು ಗಮನಿಸುತ್ತಿದ್ದ ಸಾರ್ವಜನಿಕರು ದಯವಿಟ್ಟು ಇದನ್ನು “ಮೀಡಿಯಾ ವೈರಸ್” ಎಂದು ಕರೆಯಬೇಡಿ” ಎಂದು ಟ್ವೀಟ್ ಮೂಲಕ ಕರೆ ನೀಡಿದ್ದಾರೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group