
ವರದಿಗಾರ (ಎ.25): ಜನರ ಮಧ್ಯೆ ಪ್ರೀತಿ ತುಂಬಲು ಪ್ರಯತ್ನಿಸುತ್ತಿದ್ದ, ಅದಕ್ಕಾಗಿ ಸಾಮಾಜಿಕ ರಂಗದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ, ಜನರನ್ನು ಪ್ರೇರೇಪಿಸುತ್ತಿದ್ದ ‘ನಮ್ಮ ಧ್ವನಿ’ ಸ್ಥಾಪಕರಾದ ಮಹೇಂದ್ರ ಕುಮಾರ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಇಂದು ಬೆಳಿಗ್ಗೆ ಸುಮಾರು 5 ರ ಹೊತ್ತಿಗೆ ಎದೆನೋವು ಕಾಣಿಸಿಕೊಂಡ ಅವರನ್ನು ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಹೇಂದ್ರ ಕುಮಾರ್ ವಿಧಿವಶರಾಗಿದ್ದಾರೆ ಎಂದು ನಮ್ಮ ಧ್ವನಿಯ ಲೋಹಿತ್ ನಾಯ್ಕ್ ಹೇಳಿದ್ದಾರೆ.
ಮಹೇಂದ್ರ ಕುಮಾರ್ ರವರ ಅಗಲಿಕೆಯ ಸುದ್ದಿಗೆ ರಾಜ್ಯವೇ ಕಂಬನಿ ಮಿಡಿಯುತ್ತಿದೆ. ಸಹಸ್ರಾರು ಸಂಖ್ಯೆಯಲ್ಲಿರುವ ಅವರ ಅಭಿಮಾನ ಬಳಗ ಸಾಮಾಜಿಕ ತಾಣಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತಿದೆ.
