ಸಾಮಾಜಿಕ ತಾಣ

ಫೇಸ್ಬುಕ್ ಪೇಜ್ ಮೂಲಕ ಕೋಮು ವೈಷಮ್ಯ ಹರಡಲು ಪ್ರಯತ್ನಿಸಿದವನ ಬಂಧನ!

‘ನಿಶಾ ಜಿಂದಾಲ್’ ಎಂಬ ಮಹಿಳೆಯ ಹೆಸರಲ್ಲಿ ಖಾತೆ ನಡೆಸುತ್ತಿದ್ದ ರವಿ ಪೂಜಾರ್!

ಆರೋಪಿಯಿಂದ ತನ್ನ ಅಸಲಿ ಫೊಟೋವನ್ನು, ‘ನಿಶಾ ಜಿಂದಾಲ್’ ಖಾತೆಯಲ್ಲಿ ಪೋಸ್ಟ್ ಮಾಡಿಸಿದ ಪೊಲೀಸರು!

ವರದಿಗಾರ(19-04-2020): ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಸಂದೇಶಗಳನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಪ್ರಕಟಿಸುತ್ತಿದ್ದ ‘ನಿಶಾ ಜಿಂದಾಲ್’ ಎಂಬ ಯುವತಿಯನ್ನು ಬಂಧಿಸಲು ತೆರಳಿದ ಛತ್ತೀಸ್ ಘಡದ ಪೋಲೀಸರು ನಿಶಾ ಪಾತ್ರದಲ್ಲಿ ನಟಿಸಿರುವ ‘ರವಿ ಪೂಜಾರ’ ಎಂಬ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಫೇಸ್ ಬುಕ್ ನಲ್ಲಿ 10000 ಕ್ಕೂ ಮಿಕ್ಕಿ ಫಾಲೋವರ್ಸ್ ಗಳೊಂದಿಗೆ ಸುಳ್ಳು ಮಾಹಿತಿಗಳನ್ನು ಪಸರಿಸುವುದರ ಮೂಲಕ ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತಿದ್ದ ಈತನ ಸಮಾಜಘಾತುಕ ಕೃತ್ಯಕ್ಕೆ ಕೊನೆಗೂ ತೆರೆಬಿದ್ದಿದೆ.

ಪಾಕಿಸ್ತಾನದ ಮಾಡೆಲ್ ಗಳ ಫೊಟೋ ಉಪಯೋಗಿಸಿ ಫೇಸ್ಬುಕ್ ಖಾತೆ ನಡೆಸುತ್ತಿದ್ದ ಈತನು, ‘ನಿಶಾ ಜಿಂದಾಲ್’ ಸಹಿತ 8 ನಕಲಿ ಫೇಸ್ಬುಕ್ ಖಾತೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ನೀಡುತ್ತಾ SP ಆರಿಫ್ ಶೇಖ್,” ಕಳೆದ ಒಂದೂವರೆ ತಿಂಗಳಿಂದ ನಮಗೆ ಈ ಖಾತೆಯ ಬಗ್ಗೆ ದೂರು ಬರುತ್ತಿದ್ದವು. ತಾನು WHO ದಿಂದ ಹಾಗೂ ಇನ್ನು ಕೆಲವೊಮ್ಮೆ ತಾನು IMF ನಿಂದ ಎಂದು ಪೋಸ್ಟ್ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಕೋರಿ ಫೇಸ್ಬುಕ್ ಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅಲ್ಲಿಂದ ನೆರವು ಸಿಗದ ಕಾರಣ ಸೈಬರ್ ಟೀಂ ಬಲೆ ಬೀಸಿ ಆತನನ್ನು ಬಂಧಿಸಲಾಗಿದೆ. ಕಳೆದ 8 ವರ್ಷಗಳಿಂದ ಈತನು ಫೇಸ್ಬುಕ್ ಖಾತೆ ನಡೆಸುತ್ತಿದ್ದನು” ಎಂದು ತಿಳಿಸಿದ್ದಾರೆ.

“ 11 ವರ್ಷದಿಂದ ಎಂಜಿನಿಯರಿಂಗ್ ಉತ್ತೀರ್ಣಗೊಳ್ಳಲಾಗದ ರವಿ ಪೂಜಾರ ಎಂಬ ಆರೋಪಿ ನಕಲಿ ಖಾತೆಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ದ್ವೇಷಪೂರಿತ ಸಂದೇಶಗಳನ್ನು ಹರಡುತ್ತಿದ್ದ” ಎಂದು ಐಎಎಸ್ ಅಧಿಕಾರಿ ಪ್ರಿಯಾಂಕ ಶುಕ್ಲಾ ಟ್ವೀಟ್ ಮಾಡಿದ್ದಾರೆ.

ಈತನ ವಿರುದ್ಧ ಐಪಿಸಿ ಸೆಕ್ಷನ್ 153/295 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈತನನ್ನು ಬಂಧಿಸಿದ ಪೊಲೀಸರು, ಅವನ ನಕಲಿ ಫೇಸ್ಬುಕ್ ಖಾತೆಯಿಂದ ಅಸಲಿ ಚಿತ್ರವನ್ನೂ ಪೋಸ್ಟ್ ಮಾಡಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group