ರಾಷ್ಟ್ರೀಯ ಸುದ್ದಿ

ಬಿಜೆಪಿ ಟ್ವೀಟ್ ಮಾಡಿದ ವೀಡಿಯೋದಲ್ಲಿ ಹಸಿವಿನಿಂದ ಬಳಲುತ್ತಿರುವಂತೆ ಅಭಿನಯಿಸಿದವನು ರಂಗನಟ!!

ಅಭಿನಯಿಸಿದವನನ್ನು ಬಂಧಿಸಿದ ಪಶ್ಚಿಮ ಬಂಗಾಳದ ಪೊಲೀಸರು!

ವರದಿಗಾರ(ಎ.19): ಏಪ್ರಿಲ್ 17ರಂದು ಪಶ್ಚಿಮ ಬಂಗಾಳದ ಬಿಜೆಪಿಯು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ‘ಹಸಿವಿನಿಂದ ಬಳಲುತ್ತಿರುವ ವ್ಯಕ್ತಿ’ಯ ವೀಡಿಯೋ, ಒಬ್ಬ ರಂಗನಟನನ್ನು ಉಪಯೋಗಿಸಿ ಚಿತ್ರೀಕರಿಸಿದ್ದೆಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಟ್ವಿಟ್ಟರ್ ಖಾತೆಯಲ್ಲಿ ಪಶ್ಚಿಮ ಬಂಗಾಳದ ಬಿಜೆಪಿಯು, ” ಕಳೆದ ಎರಡು ದಿನಗಳಿಂದ ಯಾವುದೇ ಆಹಾರವನ್ನು ಪಡೆದಿಲ್ಲದ ವಯಸ್ಸಾದ ವ್ಯಕ್ತಿಯೊಬ್ಬನ ಹೃದಯ ವಿದ್ರಾವಕ ವೀಡಿಯೋ. ಇದು ನುಸ್ರತ್ ರವರ ಕ್ಷೇತ್ರವಾಗಿದ್ದು, ಬಡವರು ಬಳಲುತ್ತಿರುವಾಗ, ಟಿಎಂಸಿ ರೇಷನ್ ದೋಚುವಲ್ಲಿ ನಿರತವಾಗಿದೆ” ಎಂದು ಈ ವೀಡಿಯೋ ಜೊತೆ ಟ್ವೀಟ್ ಮಾಡಿತ್ತು.

ಇದಾದ ನಂತರ ವೈರಲ್ ಆದ ಇನ್ನೊಂದು ವೀಡಿಯೋದಲ್ಲಿ, ಅದೇ ವ್ಯಕ್ತಿಯು, “ನಾನೊಬ್ಬ ಜಾತ್ರಾ ನಟನಾಗಿದ್ದು, ಲಾಕ್ ಡೌನ್ ಸಮಯದಲ್ಲಿ ನಾನು ಹಸಿವಿನಿಂದ ಬಳಲುತ್ತಿರುವ ವ್ಯಕ್ತಿಯನ್ನು ಹೇಗೆ ಅಭಿನಯಿಸುತ್ತೇನೆ ಎಂದು ತೋರಿಸಲು ಕೆಲವು ಯುವಕರು ಹೇಳಿದ್ದರು. ನನ್ನ ಅರಿವಿಲ್ಲದೆ ಕೆಲವು ಯುವಕರು ಆ ವೀಡಿಯೋವನ್ನು ಇಂಟರ್ನೆಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನನಗೆ ಸರಕಾರದಿಂದ ರೇಷನ್ ಲಭಿಸುತ್ತಿದೆ” ಎಂದು ಹೇಳಿದ್ದಾನೆ.

ವೀಡಿಯೋದಲ್ಲಿ ಅಭಿನಯಿಸಿದ ಮೊಬಾರೆಕ್ ಮೊಂಡಲ್ ಎಂಬ ರಂಗನಟನನ್ನು ಬಂಧಿಸಿದ ಪೊಲೀಸರು, ಆತನ ಬಳಿ ಏಪ್ರಿಲ್ 2ರಂದು ರೇಷನ್ ಪಡೆದ ದಾಖಲಾತಿಯನ್ನೂ ಹೊಂದಿರುವ ಡಿಜಿಟಲ್ ರೇಷನ್ ಕಾರ್ಡ್ ಇದೆಯೆಂದೂ ತಿಳಿಸಿದ್ದಾರೆ.

ಬಿಜೆಪಿ ಪೋಸ್ಟ್ ಮಾಡಿದ ವೀಡಿಯೋ ಕಲ್ಕತಾದಿಂದ 55 ಕಿ.ಮೀ. ದೂರದಲ್ಲಿರುವ ಮಾಟಿಯಾ ಎಂಬಲ್ಲಿ ಚಿತ್ರೀಕರಿಸಲಾಗಿತ್ತು.
ವಿಡಿಯೋದಲ್ಲಿ ಆ ವ್ಯಕ್ತಿ ನೀಡಿದ ಹೇಳಿಕೆ ಸುಳ್ಳು ಎಂದು ಆರೋಪಿಸಿರುವ ಮಾಟಿಯಾ ನಿವಾಸಿಯೊಬ್ಬರಿಂದ ದೂರು ಬಂದಿದೆ ಎಂದು ಬಸಿರ್ಹತ್ ಪೊಲೀಸರು ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group