ರಾಷ್ಟ್ರೀಯ ಸುದ್ದಿ

ಅತ್ಯಾಚಾರಿ ರಾಮ್ ರಹೀಂ ಸಿಂಗ್ ಗೆ 10 ವರ್ಷ ಜೈಲು

ವರದಿಗಾರ-ಹರಿಯಾಣ: ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಸ್ವಯಂ ಘೋಷಿತ ದೇವಮಾನವ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ ಸಿಬಿಐನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಪ್‌ ಸಿಂಗ್‌ ಹೆಲಿಕಾಪ್ಟರ್‌ ಮೂಲಕ ರೋಹ್ಟಕ್‌ ಗೆ ಬಂದು ಸುನಾರಿಯಾದಲ್ಲಿರುವ ಜೈಲಿನಲ್ಲೇ 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಗುರ್ಮೀತ್‌ಗೆ ಈ ಶಿಕ್ಷೆ ವಿಧಿಸಲಾಗಿದೆ.

ಗುರ್ಮೀತ್‌ ಪರ ವಾದ ಮಂಡಿಸಿದ ನ್ಯಾಯವಾದಿಗಳು, ರಾಮ್ ರಹೀಮ್ ರ ಸಮಾಜ ಸೇವೆ ಮತ್ತು ವಯಸ್ಸನ್ನು ಪರಿಗಣಿಸಿ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದ್ದರು. ಸಿಬಿಐ ಪರ ವಕೀಲರು ಅತಿ ಹೆಚ್ಚು ಪ್ರಮಾಣದ ಶಿಕ್ಷೆ ವಿಧಿಸುವಂತೆ ವಾದ ಮಂಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವಿಚಾರಣೆ ನಡೆಯುವಾಗಲೆಲ್ಲಾ ಕೈ ಕಟ್ಟಿ ನಿಂತಿದ್ದ ಗುರ್ಮಿತ್ ತನಗೆ ಕರುಣೆ ತೋರಿಸುವಂತೆಯೂ ಕಣ್ಣೀರಿಟ್ಟು ಮನವಿ ಮಾಡಿದ್ದನು. ತೀರ್ಪು ಪ್ರಕಟಿಸುವುದಕ್ಕೂ ಮುಂಚೆ ನ್ಯಾಯಾಧೀಶರು ತಮ್ಮ ವಿಶೇಷ ಕೊಠಡಿಗೆ ತೀರ್ಪನ್ನು ನಿರ್ಧರಿಸಲು ತೆರಳಿದಾಗ ಬಾಬಾ ಗುರ್ಮಿತ್ ಕುಸಿದು ಬಿದ್ದನೆಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆ ಪ್ರಮಾಣದ ಪ್ರಕಟಣೆಗೆ ಮೊದಲು ಸಿರ್ಸಾದ ಫುಲ್‌ಕನ್‌ ಗ್ರಾಮದಲ್ಲಿ ಸ್ವಯಂ ಘೋಷಿತ ದೇವಮಾನವನ ಬೆಂಬಲಿಗರು ಎರಡು ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ ಎಂದು ವರದಿಯಾಗಿದೆ.

ಆಗಸ್ಟ್ 25ರಂದು ಗುರ್ಮೀತ್ ನ ಆರೋಪ ಸಾಬೀತಾದ ನಂತರ ನಡೆದ ಹಿಂಸಾಚಾರದಲ್ಲಿ 38 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದುವರೆಗೆ 52 ಪ್ರಕರಣಗಳು ದಾಖಲಾಗಿದ್ದು, 926 ಜನರನ್ನು ಬಂಧಿಸಲಾಗಿದೆ ಮತ್ತು ಮುನ್ನಚ್ಚರಿಕೆಕಾಗಿ ನಿಷೇಧಾಜ್ಷೆ ಜಾರಿಗೊಳಿಸಲಾಗಿದೆ. ಹಾಗೂ ಭದ್ರತೆಗಾಗಿ ಪೊಲೀಸರನ್ನು ಮತ್ತು ಸೇನೆ ನಿಯೋಜಿಸಲಾಗಿದೆ ಎಂದು ಎಂದು ರೋಹ್ಟಕ್‌ ವಲಯ ಐಜಿಪಿ ನವ್‌ದೀಪ್‌ ಸಿಂಗ್‌ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

 

ಇದನ್ನೂ ಓದಿ:

ಎರಡು ಪ್ರಕರಣ:
►ಅತ್ಯಾಚಾರಿ ರಾಮ್ ರಹೀಂ ಸಿಂಗ್ ಗೆ 20 ವರ್ಷ ಜೈಲು, 30ಲಕ್ಷ ದಂಡ
https://varadigara.com/article/1236

🌐www.varadigara.com

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group