ರಾಷ್ಟ್ರೀಯ ಸುದ್ದಿ

ಸಂಕಷ್ಟದ ಸಮಯದಲ್ಲಿ ವಿಪಕ್ಷಗಳು ಹೇಗೆ ವರ್ತಿಸಬೇಕೆಂದು ರಾಹುಲ್ ಗಾಂಧಿ ತೋರಿಸಿದ್ದಾರೆ: ಮುಕ್ತಕಂಠದಿಂದ ಶಿವಸೇನೆ ಶ್ಲಾಘನೆ

‘ಬಿಜೆಪಿಯ ಅರ್ಧ ಯಶಸ್ಸು ರಾಹುಲ್ ಗಾಂಧಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಮೂಲಕ ಬಂದಿದೆ’

‘ಪ್ರಧಾನಿ ಮೋದಿ, ರಾಹುಲ್ ಗಾಂಧಿ ಕೊರೋನ ತಡೆಗಟ್ಟಲು ಜತೆಯಾಗಿ ಚರ್ಚೆ ನಡೆಸಲಿ’

ವರದಿಗಾರ (ಎ.19): ಕೊರೋನ ವೈರಸ್‍ ನಿಂದಾಗಿ ವಿಶ್ವವೇ ಭೀತಿಯನ್ನು ಎದುರಿಸುತ್ತಿದ್ದು, ತಮ್ಮ ಜನರನ್ನು ಈ ಮಾಹಾಮಾರಿಯಿಂದ ರಕ್ಷಿಸಿಕೊಳ್ಳಲು ಎಲ್ಲಾ ದೇಶಗಳು ಪ್ರಯತ್ನಿಸುತ್ತಿವೆ. ಭಾರತವು ಲಾಕ್ ಡೌನ್ ಮೂಲಕ ಮಹಾಮಾರಿಯ ವಿರುದ್ಧ ಸಮರ ಸಾರಿದೆ. ಆಘಾತಕಾರಿ ವಿಚಾರವೆಂದರೆ ಭಾರತದಲ್ಲಿ ಸೋಂಕಿತರ ಸಂಖ್ಯೆ 16 ಸಾವಿರದ ಗಡಿಯನ್ನು ದಾಟಿದ್ದು, 527 ಜನರು ಮೃತಪಟ್ಟಿರುವುದು.

ಕೊರೋನ ವೈರಸ್‍ ನಿಂದ ಎದುರಾಗಿರುವ ಸಮಸ್ಯೆ ಕುರಿತಂತೆ ವಿಪಕ್ಷ ನಾಯಕ ರಾಹುಲ್ ಗಾಂಧಿಯು ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಅವರನ್ನು ಶೀವಸೇನೆ ಮುಕ್ತಕಂಠದಿಂದ ಶಿವಸೇನೆ ಶ್ಲಾಘಸಿದೆ. ‘ಇಂತಹ ಒಂದು ಸಂಕಷ್ಟದ ಪರಿಸ್ಥಿತಿಯಲ್ಲಿ ಒಂದು ಜವಾಬ್ದಾರಿಯುತ ವಿಪಕ್ಷ ಹೇಗೆ ವರ್ತಿಸಬೇಕೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಹೇಳಿಕೊಂಡಿದೆ.

“ರಾಹುಲ್ ಗಾಂಧಿ ಕುರಿತಂತೆ ಕೆಲವೊಂದು ಅಭಿಪ್ರಾಯಗಳು ಇರಬಹುದು. ಹಾಗೆ ನೋಡಿದರೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕುರಿತಂತೆಯೂ ಕೆಲವು ಅಭಿಪ್ರಾಯಗಳಿವೆ. ಬಿಜೆಪಿಯ ಅರ್ಧ ಯಶಸ್ಸು ರಾಹುಲ್ ಗಾಂಧಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಮೂಲಕ ಬಂದಿದೆ. ಅದು ಈಗಲೂ ಮುಂದುವರಿದಿದೆ. ಆದರೆ ರಾಹುಲ್ ಗಾಂಧಿಯವರು ಸದ್ಯ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಅವರನ್ನು ಶ್ಲಾಘಿಸಬೇಕು. ಇಂತಹ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂಬುದರ ಬಗ್ಗೆ ಅವರು ಒಂದು ಮಾದರಿ ನೀತಿ ಸಂಹಿತೆ ಸೃಷ್ಟಿಸಿದ್ದಾರೆ” ಎಂದು ಶಿವಸೇನೆ ಹೇಳಿದೆ.

‘ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಕೊರೋನ ತಡೆಗಟ್ಟುವ ಕುರಿತಂತೆ ಜತೆಯಾಗಿ ಕುಳಿತು ಚರ್ಚೆ ನಡೆಸಬೇಕು’ ಎಂದೂ ಶಿವಸೇನೆ ಸಲಹೆ ನೀಡಿದೆ.

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group