ರಾಜ್ಯ ಸುದ್ದಿ

‘ನಿಮ್ಮ ಚಾನೆಲ್ ನ್ನು ಯಾಕೆ ನಿಲ್ಲಿಸಬಾರದು?’; ಪಬ್ಲಿಕ್ ಟಿವಿಯ ಸುಳ್ಳು ಸುದ್ದಿಗೆ ಶೋಕಸ್ ನೋಟಿಸ್ ಜಾರಿ ಮಾಡಿದ ಪಿಬಿಐ

‘ಹೆಲಿಕಾಪ್ಟರ್ ನಲ್ಲಿ ಹಳ್ಳಿ ಹಳ್ಳಿಗೂ ತಲುಪುತ್ತೆ ಹಣ’ ಎಂಬ ಕಾರ್ಯಕ್ರಮ ಪ್ರಸಾರ ಮಾಡಿದ್ದ ಸುದ್ದಿ ವಾಹಿನಿ.

ಪಬ್ಲಿಕ್ ಟಿವಿಯ ಬೇಜವಾಬ್ದಾರಿ ಪತ್ರಿಕೋದ್ಯಮಕ್ಕೆ ಪಿಐಬಿ ಗರಂ!

ವರದಿಗಾರ (ಎ.17): ಮಹಾಮಾರಿ ಕೊರೋನ ವೈರಸ್ ವಿಶ್ವದ ನಿದ್ದೆಗೆಡಿಸಿದ್ದು, ಹಲವು ದೇಶಗಳು ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿದೆ. ಭಾರತವು ಸಂಪೂರ್ಣ ಲಾಕ್ ಡೌನ್ ಮಾಡಿ ವೈರಸ್ ವಿರುದ್ಧ ಹೋರಾಟ ನಡೆಸುತ್ತಿದೆ. ಆದರೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಮಾತ್ರ ಜನತೆಯನ್ನು ಆತಂಕಕ್ಕೀಡು ಮಾಡಿವೆ.

ವೈರಸ್ ನ ಭೀತಿಯಿಂದ ಜನರು ತತ್ತರಿಸಿದ್ದರೆ, ಅದಕ್ಕೆ ಉಪ್ಪು ಸವರುವ ಕೆಲಸವನ್ನು ಕೆಲವೊಂದು ನಿರ್ದಿಷ್ಟ ಮಾಧ್ಯಮಗಳು ನಡೆಸುತ್ತಿರುವುದು ಮಾತ್ರ ಖೇಧಕರ ವಿಚಾರ. ಲಾಕ್ ಡೌನ್ ಘೋಷಣೆ ಬಳಿಕ ಇದಕ್ಕೆ ಬ್ರೇಕೇ ಇಲ್ಲದಂತಾಗಿದೆ. ಸುಳ್ಳನ್ನು ಪದೆ ಪದೇ ಹೇಳಿ ಸತ್ಯವೆಂದು ಜನರನ್ನು ನಂಬಿಸುವ ಮೂರ್ಖ ಪ್ರಯತ್ನಗಳು ನಡೆಯುತ್ತಿದೆ. ಈ ಪ್ರಯತ್ನದಲ್ಲಿ ಕೆಲವೊಂದು ‘ಮಾಧ್ಯಮ’ವು ಮೊದಲ ಸ್ಥಾನದ ಖ್ಯಾತಿಯನ್ನು ಪಡೆದುಕೊಂಡಿದೆ. ಬಳಿಕ ಸಾಮಾಜಿಕ ತಾಣದ ದುರುಪಯೋಗದ ಮೂಲಕ ಸುಳ್ಳನ್ನು ಹರಡಿಸಲಾಗುತ್ತಿದೆ. ಇದೀಗಾಗಲೇ ಸಾಂಕ್ರಾಮಿಕ ಕೊವಿಡ್ 19 ವೈರಸ್ ಗೆ ಜಾತಿ, ಧರ್ಮ, ಲಿಂಗವನ್ನು ವ್ಯಾಖ್ಯಾನಿಸಲಾಗಿದೆ. ಅದು ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ.

‘ಸುಳ್ಳು ಸುದ್ದಿಯನ್ನು ನೀಡಿ ಜನತೆಯನ್ನು ದಿಕ್ಕು ತಪ್ಪಿಸುವ’ ರಾಜ್ಯದ ಖಾಸಗಿ ಮಾಧ್ಯಮವೊಂದರ ವಿರುದ್ಧ  ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಶೋಕಸ್ ನೋಟಿಸ್ ಜಾರಿ ಮಾಡಿದೆ.

ಕರ್ನಾಟಕ ರಾಜ್ಯದ ಖಾಸಗಿ ಸುದ್ದಿ ವಾಹಿನಿಯಾಗಿರುವ ‘ಪಬ್ಲಿಕ್ ಟಿವಿ’ ಯು ಎಪ್ರಿಲ್ 15ರಂದು ರಾತ್ರಿ 8:30ಕ್ಕೆ “ಹೆಲಿಕಾಪ್ಟರ್ ಮನಿ; ಹೆಲಿಕಾಪ್ಟರ್ ನಲ್ಲಿ ಸುರಿತಾರ ಮೋದಿ ?” ಎಂಬ ಶೀರ್ಷಿಕೆಯಲ್ಲಿ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿತ್ತು. ಈ ಕಾರ್ಯಕ್ರಮವನ್ನು ಕರ್ನಾಟಕ ‘ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ)’ ಕಟುವಾಗಿ ಖಂಡಿಸಿದ್ದಲ್ಲದೆ, ಈ ಸುದ್ದಿಯು ಸಂಪೂರ್ಣ ಸುಳ್ಳು ವರದಿಯಾಗಿದೆ ಎಂದು ಹೇಳಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಸುದ್ದಿ ವಾಹಿನಿಗೆ ಶೋಕಸ್ ನೋಟಿಸ್ ಜಾರಿ ಮಾಡಿದೆ.‌

 

ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ನ ಶೋಕಸ್ ನೋಟಿಸ್ ನಲ್ಲಿ, ‘”ಸುಳ್ಳು ಸುದ್ದಿ ಮತ್ತು ಜನರನ್ನು ದಾರಿ ತಪ್ಪಿಸುವ ಸುದ್ದಿ ಪ್ರಕಟಿಸಿದ್ದೀರಿ” ಎಂದು ಹೇಳಿದೆ.‌ ‘ದೇಶವೇ ಕೊರೋನದಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸೋಂಕಿಗೆ ಸಂಬಂಧಿಸಿದಂತೆ ಜನರಿಗೆ ಜಾಗೃತಿ ಮೂಡಿಸುವ ಬದಲು ಅವರನ್ನು ಸುಳ್ಳು ಸುದ್ದಿಗಳ ಮೂಲಕ ದಾರಿ ತಪ್ಪಿಸುವ ವರದಿಗಳನ್ನು ಬಿತ್ತರಿಸಿದ್ದೀರಿ. ಕೇಬಲ್ ಟೆಲಿವಿಶನ್ ಆ್ಯಕ್ಟ್ (1995) ಅನ್ನು ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ಚಾನೆಲ್ ನ ಪ್ರಸಾರ ಯಾಕೆ ನಿಲ್ಲಿಸಬಾರದು?’ ಎಂದು ಕಾರಣ ಕೇಳಿದ್ದು, ಮುಂದಿನ 10 ದಿನಗಳ ಒಳಗಾಗಿ ನೋಟಿಸ್ ಗೆ ಉತ್ತರಿಸುವಂತೆ ಹೇಳಿದೆ.

ಕಳೆದ ನೋಟು ನಿಷೇಧದ ಸಂದರ್ಭದಲ್ಲೂ ‘ನೋಟಿನಲ್ಲಿ ಚಿಪ್ ಇದೆ’ ಎಂಬ ಹೇಳಿಕೆಯ ಟ್ರೋಲ್ ಇದುವರೆಗೂ ಸಾಮಾಜಿಕ ತಾಣದಲ್ಲಿ ಚಾಲ್ತಿಯಲ್ಲಿದ್ದು, ಸದ್ಯ ‘ಹೆಲಿಕಾಪ್ಟರ್ ಮನಿ’ ಅದಕ್ಕೆ ಮತ್ತೊಂದು ಸೇರ್ಪಡೆಗೊಂಡಂತಿದೆ. ಲಾಕ್ ಡೌನ್ ನಿಂದಾಗಿ ಮನೆಯಲ್ಲಿದ್ದು ಬೋರ್ ಹೊಡೆದಿರುವ ಜನರಿಗೆ ಟ್ರೋಲ್ ಮತ್ತು ಹಾಸ್ಯ ಚಟಾಕಿಗೆ ಇದೊಂದು ಭರ್ಜರಿ ಕೊಡುಗೆ ನೀಡಿದಂತಾಗಿದೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group