
ವರದಿಗಾರ (ಎ.14): ಮುಂಬೈನ ಬಾಂದ್ರಾ ಪಶ್ಚಿಮ ರೈಲ್ವೆ ನಿಲ್ದಾಣದ ಎದುರು ಸಾವಿರಾರು ಮಂದಿ ದಿನಗೂಲಿ ನೌಕರರು ಜಮಾವಣೆಗೊಂಡಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರು ತಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ಒತ್ತಾಯಿಸಿದ್ದಾರೆ.
ಇಲ್ಲಿರಲು ಆಗುತ್ತಿಲ್ಲ, ಸ್ವಂತ ಊರಿಗೆ ಕಳುಹಿಸಿಕೊಡುವಂತೆ ವಲಸಿಗರು ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮುಂಬೈನಲ್ಲಿ ಕೊರೋನಾ ಸೋಂಕಿತರು ಮತ್ತು ಸಾವಿನ ಸಂಖ್ಯೆ ಏರುತ್ತಲೇ ಇದ್ದು ಅಪಾಯಕಾರಿ ವಾತಾವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಇದೇ ವೇಳೆ ಕಾರ್ಮಿಕರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಮುಂಬೈನ ಬಾಂದ್ರಾ ವೆಸ್ಟ್ ರೈಲ್ವೆ ನಿಲ್ದಾಣದಲ್ಲಿ ವಲಸೆ ಕಾರ್ಮಿಕರ ಪ್ರವಾಹವೇ ಹರಿದು ಬಂದಿದೆ. ಮಂಗಳವಾರ ಲಾಕ್ಡೌನ್ ಮುಕ್ತಾಯವಾಗುತ್ತದೆ. ಮನೆಗೆ ಹೋಗಬಹುದೆಂಬ ವಿಶ್ವಾಸದಲ್ಲಿದ್ದ ವಲಸೆ ಕಾರ್ಮಿಕರು ಲಾಕ್ಡೌನ್ ಮುಂದುವರೆಯುವ ಘೋಷಣೆ ಹೊರಬೀಳುತ್ತಿದ್ದಂತೆ ಮುಂಬೈನ ಬಾಂದ್ರಾ ನಿಲ್ದಾಣದ ಎದುರು ಜಮಾವಣೆಗೊಂಡಿದ್ದಾರೆ.
ಇವರೆಲ್ಲರೂ ದೈನಂದಿನ ಕೂಲಿ ಕಾರ್ಮಿಕರಾಗಿದ್ದಾರೆ. ಏಪ್ರಿಲ್ 14ಕ್ಕೆ ಲಾಕ್ ಡೌನ್ ಕೊನೆಗೊಳ್ಳಬಹುದು ಎಂಬ ಉದ್ದೇಶದಿಂದ ಕಾಯುತ್ತಿದ್ದ ಅವರು, ಲಾಕ್ ಡೌನ್ ಮುಂದುವರೆಯುವ ಘೋಷಣೆ ಹೊರಬೀಳುತ್ತಿದ್ದಂತೆ ತಮ್ಮನ್ನು ಊರಿಗೆ ಕಳುಹಿಸಿಕೊಡಬೇಕೆಂದು ಒತ್ತಡ ಹೇರಿ ಪ್ರತಿಭಟನೆ ನಡೆಸಿದ್ದಾರೆ.
ಪ್ರಸ್ತುತ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ಕಾರಣ : ಆದಿತ್ಯ ಠಾಕ್ರೆ ಆರೋಪ
ಬಾಂದ್ರಾದಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಈ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಆದಿತ್ಯ ಠಾಕ್ರೆ ಆರೋಪಿಸಿದ್ದಾರೆ.
ಬಾಂದ್ರಾದಲ್ಲಿನ ಪ್ರಸ್ತುತ ಪರಿಸ್ಥಿತಿ, ಸೂರತ್ನಲ್ಲಿ ನಡೆದ ಗಲಭೆಗೆ ಕೇಂದ್ರ ಸರ್ಕಾರ ಕಾರಣ. ವಲಸೆ ಕಾರ್ಮಿಕರಿಗೆ ಮನೆಗೆ ಹಿಂದಿರುಗುವ ಸರಿಯಾದ ಮಾರ್ಗವನ್ನು ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ.
ಘಟನೆಯ ವೀಡಿಯೋ ವೀಕ್ಷಿಸಿ:
Huge crowd of migrant workers in Bandra, Mumbai a short while ago demanding permission to go back to their home villages. Lathi charge too. #Lockdown2 pic.twitter.com/ZPHlCTCJlP
— Shiv Aroor (@ShivAroor) April 14, 2020
Seriously alarming how big this crowd in Bandra was today. This in a city with the highest number of #Covid19 hotspots. #Lockdown2 pic.twitter.com/hLek2F6Cxw
— Shiv Aroor (@ShivAroor) April 14, 2020
https://twitter.com/pradeepgoud11/status/1250045455808876545?s=20
