
‘ರೈತರ, ಜನಸಾಮಾನ್ಯರ ಸಂಕಷ್ಟಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ’
ವರದಿಗಾರ (ಎ.14): ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಮ್ಮೆ ದೇಶವನ್ನುದ್ದೇಶಿ ಮಾತನಾಡಿದ್ದು, ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಮೇ. 03 ವರೆಗೆ ದೇಶದಲ್ಲಿ ಲಾಕ್ ಡೌನ್ ಮುಂದುವರಿಸಿರುವುದಾಗಿ ಹೇಳಿದ್ದಾರೆ.
ಭಾಷಣದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಧಾನಿ ಭಾಷಣವನ್ನು ರಾಜಕೀಯ ಭಾಷಣವೆಂದು ಉಲ್ಲೇಖಿಸಿದ್ದಾರೆ.
ಲಾಕ್ ಡೌನ್ ಮುಂದುವರೆಸಿರುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಅವರ ಭಾಷಣ ರಾಜಕೀಯ ಭಾಷಣವಾಗಿದೆ. ಜನರಿಗೆ ತೊಂದರೆ ಆಗುತ್ತಿದೆ. ಆದರೆ ಜೀವ ಮುಖ್ಯ ಹೀಗಾಗಿ ಲಾಕ್ ಡೌನ್ ಅಗತ್ಯ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘ನಮ್ಮ ಪಕ್ಷ ಜನಪರವಾಗಿದೆ’ ಎಂದು ತಮ್ಮನ್ನೇ ಹೊಗಳಿಕೊಂಡಿದ್ದಾರೆ.
‘ರೈತರು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರಕ್ಕೆ ಅದರ ಬಗ್ಗೆ ಕಾಳಜಿನೇ ಇಲ್ಲ. ನಾವು ನೀಡಿದ ಸಲಹೆಯನ್ನೂ ಸ್ವೀಕರಿಸಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ನಮ್ಮ ಸಲಹೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾಕ್ ಡೌನ್ ಸಂಪೂರ್ಣವಾಗಿ ಯಶಸ್ವಿ ಮಾಡುವ ಕೆಲಸ ಸಹ ಮಾಡಲಿಲ್ಲ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ. ಅಬಕಾರಿ ಮತ್ತು ನೋಂದಣಿ ನಿಂತಿದೆ. ಈ ಸಂದರ್ಭದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡಿಕರಣ ಕಷ್ಟ. ಆದರೆ ರಾಜ್ಯ ಸರ್ಕಾರ ಅನಗತ್ಯ ಖರ್ಚು ಮಾಡ್ತಿದೆ ಎಂದರು.
