
ಕೊರೋನಾ ವೈರಸ್ ಗಿಂತಲೂ ಭಯಾನಕ ಈ ‘ಕೋಮು ವೈರಸ್ ಗಳು!
ವರದಿಗಾರ (ಎ.13): ಇಡೀ ದೇಶದಾದ್ಯಂತ ಕೊರೋನಾ ವೈರಸ್ ನ ಕಬಂಧ ಬಾಹುಗಳು ವಿಸ್ತರಣೆಗೊಳ್ಳುತ್ತಾ ಸಾಗುತ್ತಿರುವಂತೆಯೇ ಅದಕ್ಕಿಂತಲೂ ಭಯಾನಕವಾಗಿ ಈ ‘ಕೋಮು ವೈರಸ್’ ಗಳು ತಮ್ಮ ಅಟ್ಟಹಾಸವನ್ನು ಮೆರೆಯುತ್ತಲೇ ಇದೆ. ಇಡೀ ದೇಶವನ್ನೇ ಎರಡು ಹೋಳುಗಳನ್ನಾಗಿಸುವ ಷಡ್ಯಂತ್ರದೊಂದಿಗೆ ಕಾರ್ಯಾಚರಿಸುವಂತಿದೆ ಈ ಕೋಮು ವೈರಸ್ ಗಳ ಗುರಿ. ಹಲವು ಮುಖವಾಡಗಳ ಮೂಲಕ ತಮ್ಮ ನಂಜನ್ನು ಹರಡುವ ಈ ಕೋಮು ವೈರಸ್ ಗಳು, ಅದರ ಭಾಗವಾಗಿ ಈಗ ರೈತರ ಸೋಗು ಹಾಕಿಕೊಂಡಿರುವ ಶೋಭಾ ಕರ್ಬಾರಿ ಎನ್ನುವ ‘ಕೋಮು ವೈರಸ್’ ಒಬ್ಬಳು ತನ್ನ ಕೋಮು ವಿಷದ ನಂಜನ್ನು ಹರಡಿರುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ವಿಪರ್ಯಾಸವೆಂದರೆ ಕೋಮು ವಿಷದ ನಂಜನ್ನು ಹರಡುವಲ್ಲಿ ನಿಷ್ಣಾತರಾಗಿರುವಂತೆ ಕಂಡು ಬರುವ ಈಕೆಗೆ ಕೊರೋನಾ ವೈರಸ್ಸಿನ ಹೆಸರೇ ಗೊತ್ತಿಲ್ಲ. ಕೊರೋನಾ ಎನ್ನುವ ಬದಲಾಗಿ ಈಕೆ “ಕೊರಳ ವೈರಸ್” ಎನ್ನುತ್ತಾಳೆ. ಅಲ್ಲಿದ್ದವರು ಯಾರೋ ಅದನ್ನು ಸರಿಪಡಿಸಿದರೂ ಕೂಡಾ ವೈರಸ್ ಎಂದು ಹೇಳುವಲ್ಲಿ “ಕೊರೋನಾ ವಯಸ್ಸು” ಎನ್ನುತ್ತಾಳೆ.
ತನ್ನನ್ನು ಶಿವನಗರ, ಬೀದರಿನ ರೈತ ನಾಯಕಿ ಎಂದು ಗುರುತಿಕೊಂಡಿರುವ ಈ ‘ಕೋಮು ವೈರಸ್’ ವೀಡಿಯೋದಲ್ಲಿ, “ತರಕಾರಿ, ಹಣ್ಣು ಇವುಗಳನ್ನೆಲ್ಲಾ ಮುಸ್ಲಿಮ್ ವ್ಯಾಪಾರಿಗಳ ಬಳಿಯಿಂದ ಖರೀದಿ ಮಾಡಬೇಡಿ” ಎಂದು ಹೇಳಿಕೆ ನೀಡಿದ್ದಾಳೆ. ಜಾತಿ-ಧರ್ಮದ ತಾರತಮ್ಯವಿಲ್ಲದೆ ಇಡೀ ವಿಶ್ವದಾದ್ಯಂತ ಹರಡಿರುವ ಕೊರೋನಾ ರೋಗ ಈಕೆಯ ಪ್ರಕಾರ ಮುಸ್ಲಿಮರಿಗೆ ಮಾತ್ರ ಬಂದಿರುವುದಂತೆ. ಇಂತಹಾ ಕೋಮು ವೈರಸ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದುದು ಪೊಲೀಸರ ಕರ್ತವ್ಯವಾಗಿದೆ.
This video is reportedly from Bidar,Karnataka.
Sir @DgpKarnataka , please watch this video.
This woman Shobha Karbari asked villagers to boycott Muslims. pic.twitter.com/rq1PJMQBCS
— Md Asif Khan آصِف (@imMAK02) April 11, 2020
ಒಟ್ಟಿನಲ್ಲಿ ಕೊರೋನಾಕ್ಕಿಂತಲೂ ಭಯಾನಕವಾಗಿ ಈ ಕೋಮು ವೈರಸ್ ಗಳು ಭಾರತ ದೇಶವನ್ನು ಕಾಡುತ್ತಿದೆ ಅನ್ನುವುದು ಮಾತ್ರ ಸುಳ್ಳಲ್ಲ. ಜನರ ನಡುವೆ ಕಂದಕ ಸೃಷ್ಟಿಸಿ, ಮಾನವೀಯತೆಯನ್ನು ಕಾಲಕಸವನ್ನಾಗಿಸಿ ಇಡೀ ದೇಶವನ್ನಾವರಿಸಿಕೊಂಡಿದೆ. ಇದು ವೀಡಿಯೊ, ಸಾಮಾಜಿಕ ತಾಣಗಳ ಪೋಸ್ಟ್ ಗಳ ಮೂಲಕ ಹೊರಬರುವ ಕೆಲವೊಂದು ಮುಖಗಳು ಮಾತ್ರ ಇದರ ಹಿಂದಿಲ್ಲ ಅನ್ನೋದು ಕೂಡಾ ಕಟು ವಾಸ್ತವವಾಗಿದೆ. ಇದು ನಮ್ಮ ದೇಶದಲ್ಲಿ ತನ್ನ ವಿಷವರ್ತುಲವನ್ನು ಹರಡಿರುವ ಬಲಿಷ್ಟ ಜಾಲವೊಂದರ ಷಡ್ಯಂತ್ರವಾಗಿದೆ. ಆದರೆ ಸದ್ಯದ ನಮ್ಮ ದೇಶದ ಪರಿಸ್ಥಿತಿಯಲ್ಲಿ ಆ ಜಾಲವನ್ನು ಕಾನೂನಿನ ಕುಣಿಕೆಯ ಮೂಲಕ ಕಟ್ಟಿ ಹಾಕಲು ಸಾಧ್ಯವೇ ಅನ್ನೋದು ಪ್ರಶ್ನೆ.
